ಕೇಳುವವರು ಯಾರು ನೂಕುವ ಜೀವನ

ಕೇಳುವವರು ಯಾರು ನೂಕುವ ಜೀವನ”

ತನ್ನವರು, ನಮ್ಮವರು
ಎನ್ನುವುದಿಲ್ಲಿ ಬರೀ ಮಿಥ್ಯ
ನಾನೇ, ನನ್ನದು
ಅನ್ನುವುದೊಂದೇ ಸತ್ಯ
ಸಂಬಂಧಗಳಲ್ಲಿ ಏನಿದೆ….?
ಸ್ವಾದ, ಸ್ವಾರಸ್ಯ…..! ಬರೀ ಸ್ವಾರ್ಥ
ಅನುರಾಗವೋ ಭರಪೂರ
ಅನುಬಂಧ ಗಳಾಗಿವೆ
ಬಲು ಭಾರ….

ಯಾರಿಗೆ ಯಾರುಂಟು
ಸಂಬಂಧಗಳಿವೆ ನೂರೆಂಟು ಇಲ್ಲಿ
ಪ್ರೀತಿ, ಮಾತಿಲ್ಲ…
ವ್ಯಥೆಯ ಕತೆಯಿಲ್ಲ..
ಒಳನೋಟ, ಹೊರನೋಟ
ಹಲವಾರು ಮುಖವುಂಟು ಇಲ್ಲಿ
ಕಳಚುತಿದೆ ಬಂಧ – ಬಂಧಗಳ
ನಂಟು ಇಲ್ಲಿ
ಮಾಸಕ್ಕೆ ಮಾಗಿತಲ್ಲ…
ಪ್ರೇಮ ಮಾಮಕಾರವೆಲ್ಲ…

ಹೊಗಳಿಕೆಯ ಹೂಮಾಲೆ ಕಣ್ಣಮುಂದೆ
ತೆಗಳಿಕೆಯ ಸರಮಾಲೆ ತೆರೆಹಿಂದೆ
ಹೇಗಿದ್ದರೂ… ತಪ್ಪದಲ್ಲ
ತಾತ್ಸಾರದ ತಪರಾಕಿ….

ವೈಮನಸ್ಸು ಗಳು, ಗರ್ವ, ದ್ವೇಷ,
ಅಸೂಯೆ ಗಳಿಲ್ಲಿ ಅಸಲಿ
ಸಹಕಾರ, ಮಮತೆ, ಸಹಾನುಭೂತಿ, ನಂಬಿಕೆ ಗಳಿಲ್ಲಿ
ನಕಲಿ
ಬಂಧಗಳಾಗಿವೆ ನೂಲುವ ತಕಲಿ
ಜೀವಗಳೋ ಮಹಾಪೂರ
ಮನಸುಗಳಾಗಿವೇ ಬಲು ದೂರ…

ಯಾರ ಕಷ್ಟಕ್ಕೆ ಯಾರುಂಟು ಇಲ್ಲಿ
ನೆಪ ಮಾತ್ರಕ್ಕೆ ಹತ್ತಾರು ನೆಂಟರಿಲ್ಲಿ
ವರುಷಕ್ಕೆ ನೆನಪಾಯಿತಲ್ಲ
ನಕಾರ ಕರೆಗಳೆಲ್ಲ…
ಸಾಗುತಿಹುದು ಸಾಕೇನ್ನುವ ಪಯಣ ಇಲ್ಲಿ
ಕೇಳುವವರು ಯಾರೂ ನೂಕುವ ಜೀವನ
ಮರೆಯಾಗಿ ಮಾಯಾವಾಯಿತಲ್ಲ
ಉಪಕಾರದ ಕರಗಳೆಲ್ಲ…

ಕಡೆಗಣಿಸುವ ಮಾತುಗಳಿಲ್ಲಿ
ಖಾಯಾಮು ನಿನಗೆ
ತಿರಸ್ಕರಿಸುವ ಜನರಿದ್ದಲ್ಲೀ
ಗಾಯವು ನಿನಗೆ
ಹೇಗಿದ್ದರೂ….. ಎನ್ನುವವರಲ್ಲ
ಯಾಕಿನ್ನು ಹಿಂಜರಿಕೆ

ಲೆಕ್ಕಕ್ಕೆ ಹಾಕದಿರು ಅಂತವರ
ಲೆಕ್ಕಾಚಾರ
ಪಕ್ಕಕ್ಕೆ ಸರಿಸಿ ಬಿಡು ಅವರಿವರ
ವಿಚಾರ
ಸಾಗಿ ಬಿಡು ಸ್ವ ಇಚ್ಛೆಯಿಂದ
ಬದುಕಿ ಬಿಡು ನೀ ಬೇಕು ಅನ್ನುವಂತೆ….

 

– ✍️ಇಂದಿರಾ.ಕೆ
ಸಹ ಶಿಕ್ಷಕರು , ಬಯ್ಯಾಪುರ

Don`t copy text!