ನಿರುದ್ಯೋಗ ಯುವಕ ಯುವತಿಯರಿಗೆ ಸಂಕಲ್ಪ ಪೌಂಡೇಶನ್ ವತಿಯಿಂದ ಬೃಹತ್ ಉದ್ಯೋಗಮೇಳ
e-ಸುದ್ದಿ ಇಳಕಲ್
ಸಂಕಲ್ಪ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾ ಸಂಘ ಇಳಕಲ್ ಸಂಕಲ್ಪ ಫೌಂಡೇಶನ್ ಬೃಹತ್ ಉದ್ಯೋಗ ಮೇಳವನ್ನು ನಗರದ ಅನುಭವ ಮಂಟಪದಲ್ಲಿ ಆಯೋಜನೆ ಮಾಡಲಾಗಿತ್ತು.
ತಾಲೂಕಿನ ನಿರುದ್ಯೋಗ ವಿದ್ಯಾರ್ಥಿ|ನಿಯರಿಗೆ ಉದ್ಯೋಗವಕಾಶ ಕಲ್ಪಿಸುವ ಉದ್ದೇಶದಿಂದ ಸಂಕಲ್ಪ ಫೌಂಡೇಶನ್ ವತಿಯಿಂದ ನಡೆದ ಬೃಹತ್ ಉದ್ಯೋಗ ಮೇಳ ಸಮಾರಂಭವನ್ನು ಇಲಕಲ್ಲವಿಜಯಮಹಾಂತೇಶ್ವರ ಮಠದ ಡಾ. ಶ್ರೀ. ಗುರು ಮಹಾಂತ ಸ್ವಾಮೀಜಿಗಳು, ಸಿದ್ದನ ಕೊಳದ ಶ್ರೀಮಠದ ಪೂಜ್ಯರಾದ ಡಾ. ಶಿವಕುಮಾರ ಮಹಾಸ್ವಾಮಿಜಿಗಳು ಉದ್ಘಾಟಿಸಿದರು.
ಸಿದ್ದಲಿಂಗ ಸ್ವಾಮಿ ನವಲಿಹಿರೇಮಠ ನಗರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಶೋಭಾ ಆಮದಿಹಾಳ ಹಾಗೂ ವೇದಿಕೆಯ ಮೇಲಿರುವ ಗಣ್ಯಮಾನ್ಯರು ಇದ್ದರು.
ಈ ಉದ್ಯೋಗ ಮೇಳದಲ್ಲಿ ಹಲವಾರು ಕಂಪನಿಗಳು ಭಾಗಿಯಾಗಿ ನಿರುದ್ಯೋಗ ಯುವಕ ಯುವತಿಯರಿಗೆ ತಮ್ಮ ತಮ್ಮ ಕಂಪನಿಗಳಿಗೆ ಆಯ್ಕೆ ಮಾಡಿದರು.
ಈ ಸಮಾರಂಭದಲ್ಲಿ ಸಂಕಲ್ಪ ಫೌಂಡೇಶನ್ ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ