ಗಜಲ್

ಗಜಲ್

ಕತ್ತಲಾದರೂ ಕಾಯುವೆ ನಾ ನಿನಗಾಗಿ
ಉತ್ತರಕ್ಕಾಗಿ ಹುಡುಕುತ್ತಿರುವೆ ನಾ ನಿನಗಾಗಿ

ಪ್ರೀತಿಯ ಜೇನಹನಿಯ ತಂದಿರುವೆ
ಒಲವಿನ ಬತ್ತಳಿಕೆಯಿಂದ ನಾ ನಿನಗಾಗಿ

ಕಳೆದು ಹೋದ ದಿನಗಳ, ಜತನದಿಂದ
ಹೃದಯದಲಿ ಬಚ್ಚಿಟ್ಟಿರುವೆ ನಾ ನಿನಗಾಗಿ

ಆಕಾಶದ ಚುಕ್ಕಿಯ ಎಣಿಸುತ
ಕಾಲಕಳೆದೆ ಆ ನೀರವ ರಾತ್ರಿಯಲಿ ನಾ ನಿನಗಾಗಿ

ಮರೆತುಹೋದ ನೆನಪು ಮರಳಿಬಂದು
ಬಳಲುತ್ತಿರುವೆ ನಾ ನಿನಗಾಗಿ

ಬಂದು ಸೇರಿಕೊ ಎನ್ನ
ಸುಧೆಯ ಹರಿಸಲು ಕಾಯುತಿರುವೆ ನಾ ನಿನಗಾಗಿ

ಸುಧಾ ಪಾಟೀಲ್
ಬೆಳಗಾವಿ

Don`t copy text!