ನೀನು-ನಾನು
ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು
ಹೇಳಿದೆ ಅಂದು ನೀನು,
ದಿನ ದಿನವೂ ಸಾಯುತ್ತಿದ್ದೇನೆ ನಾನು!
ಸುಡುತಿದ್ದಾರೆ ನನ್ನನ್ನು ತೆಂದೂರಿಯೊಳಗೆ
ಇಜ್ಜೋಡಿ ಗಂಡನನೊಲ್ಲೆಯAದೆಯಲ್ಲಾ ನೀನು
ಒಗ್ಗಾಲಿನವನಾದರೂ ಸರಿಯೆ
ನಾನು ಜೋಡಿಸಿಕೊಂಡಿರುವೆ
ಜಗದ ಜಂಜಡ ಹರಿದು ಮಾಯೆಯ
ಬಟ್ಟೆ ತೆಗೆದೊಗದೆಯಲ್ಲಾ ನೀನು . . . ನಾನೋ
ಸಂಸಾರ ಸಂತೆಯಲಿ ಗಂಡ ಮಕ್ಕಳು ಮೋಹವೆಂಬ
ಪರಿದೆಗಳನ್ನು ಹೊದ್ದುಕೊಂಡಿರುವೆ
ತರಗಲೆಯ ತಿಂದು ಬದುಕುವೆನೆಂದು
ಸವಾಲೆಸೆದವಳ ನಾಡಿನಲ್ಲಿ: ನಾನಿನ್ನು
ಮೀಸಲಾತಿಗಾಗಿ ಬಾಯಿಬಾಯಿ ಬಿಡುತ್ತಿರುವೆ
ನನಗಾಗಿ ಅಲ್ಲ ನಿಮಗಾಗಿ ಮೈಮುಚ್ಚಿರುವೆನೆಂದು
ಬುದ್ಧಿವAತರ ಕಣ್ಣು ತೆರೆಯಿಸಿದೆ
ನಾನೋ ಕತ್ತಲೆಯ ಕೋಣೆಯಲ್ಲಿ ಬತ್ತಲೆಯಾಗಿ
ಕಣ್ಣನ್ನು ಕುರುಡಾಗಿಸಿಕೊಂಡಿರುವೆ
ಒAದು ವಚನ ನಿರ್ವಚನವೆಂದು
ಹಿರಿತನಪಟ್ಟ ಪಡೆದ ನಿನ್ನೆದುರಿಗೆ, ನಾನೋ
ದಿನಾಚರಣೆ ವರ್ಷಾಚರಣೆಯ ಭರಾಟೆಯಲ್ಲಿ
ಮುಳುಗಿಹೋಗಿರುವೆ.
-ಡಾ.ವೀಣಾ ಹೂಗಾರ ಧಾರವಾಡ
ವಾಸ್ತವದ ವಿಪರ್ಯಾಸ ಬಿಂಬಿತ ಕವಿತೆ 👌