ಧಿರ್ಘಾಯುಷ್ಯಮಾನಭವ

ಧಿರ್ಘಾಯುಷ್ಯಮಾನಭವ

ಕಾಲ್ನಡಿಗೆಯಲಿ ನಾನು
ಕಾಲೇಜಿಗೆ ಹೋರಟಾಗ
ಕಾಯುತ್ತಿತ್ತು ಏನೋ
ನನಗಾಗಿ ಆ ಗುಬ್ಬಿ ….
ಹಾರಿ ಹೋಗುವಭರದಿ
ಕಾರಿನಾ ಗಾಲಡಿಗೆ ಸಿಕ್ಕು
ಹಾದೀಲಿ ಒದ್ದಾಡಿತು ವಿಲಿವಿಲಿ
ಹಾರಲು ಸೆನಸಾಡಿತು ಚಿಲಿಪಿಲಿ.. .
ನನ್ನ ಕಂಗಳದನು ಆಲಿಸಿ
ತತ್ತಕ್ಷಣ ತಡವರಿಸಿ
ಕಾಲೆರಡೂ ದೌಡಾಯಿಸಿ
ಕೈಗಳೆರೆದವು ಸುಖ ಸ್ಪರ್ಶ
ಅದರ ಮನಕೇನೋ ಹರ್ಷ
ಋುಣಾನುಬಂಧವೋ ಏನೋ
ಸಂಸ್ಕಾರದ ಸಿರಿಯೋ ಏನೋ
ಸ್ಮೃತಿ ಪಟಲಕೆ ಸರಿದೂಗದೆ
ಸಂರಕ್ಷಿಸಿದೆನು ಬಗೆ ಬಗೆ
ಬೊಗಸೆಯೊಳಗದನೆತ್ತಿ
ಗುಬ್ಬಿಯನು ತಬ್ಬಿ
ಕರುಣೆಯಿಂದ ಕಂಡೆನಾ
ನನ್ನ ಬೆಚ್ಚನುಸಿರ ಗುಂಜನ
ಮರುಗಿತು ಮನಃ ಮರಮನಾ
ಗುಬ್ಬಿ ಮರುಕ್ಷಣವೇ ಚೇತರಿಸಿ
ತನ್ನ ಬಲವ ಸೇಖರಿಸಿ
ಚದುರಿದ ಪಕಾಸಪಕ್ಕ
ಮುದುರಿದ ಮನೋ ಬಲವ
ಒಟ್ಟಾಗಿ ಥಟ್ಟೆಂದು
ನನ್ನನೊಮ್ಮೆ ನೋಡಿತು
ಹಾರಲೆತ್ನವ ಮಾಡಿತು
ತನ್ನವರ ಸೇರಿತು……
ಬಹುಶಃ ಇದೆ ಇರಬೇಕು
ಧನ್ಯತೆಯ ನೋಟವು!!!!
ಆ ನೋಟಕೆ ಎನೆನ್ನಲಿ
ನನದೊಂದು ನಮನಃ
ಈ ಜನುಮದಿ ಮರೆಯಲಾರೆ
ನಾನೆಂದಿಗೂ ಇದನಾ…

ಜ್ಯೋತಿ ಮಾಳಿ

Don`t copy text!