ಭಾರತ ಸಂವಿಧಾನ ಜಗತ್ತಿಗೆ ಶ್ರೇಷ್ಠ- ಸಿ ದಾನಪ್ಪ

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಬಾಬಾ ಸಾಹೇಬ್‌ರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಾಧನೆಯನ್ನು ಗೌರವಿಸುವ ಪರಂಪರೆ ನಮ್ಮದಾಗಬೇಕು ಎಂದು ಹಿರಿಯ ಹೋರಾಟಗಾರ, ದಲಿತ ಸಾಹಿತಿ ದಾನಪ್ಪ ನಿಲೋಗಲ್ ಆಶಯ ವ್ಯಕ್ತಪಡಿಸಿದರು.

ಇಂದು ಸಂವಿಧಾನ ಅಂಗೀಕರಿಸಿದ ದಿನ ಪ್ರಜಾ ಪ್ರಭುತ್ವ ವ್ಯವಸ್ಥೆಯ ದೇಶದಲ್ಲಿ ಉಳಿಯುವ ಕೆಲಸ ಆಗಬೇಕು. ನಮ್ಮನ್ನಾಳುವ ಸರಕಾರಗಳು ಜಾತಿ, ಜಾತಿಯ ಮದ್ಯೆ ವಿಷ ಬೀಜ ಬಿತ್ತುತಿದಾರೆ. ಕೇವಲ ಮತ ಬ್ಯಾಂಕ್ ರಾಜಕಾರಣ ಮಾಡುವ ಮೂಲಕ ಸಂವಿಧಾನ ಮೂಲ ಆಶಯಗಳನ್ನು ಗಾಳಿಗೆ ತುರುತ್ತಿವೆ. ೨೬ ಜನವರಿ ೧೯೫೦ ರಂದು ನಮ್ಮ ದೇಶ ಸಂವಿಧಾನವನ್ನು ಜಾರಿಗೆ ತಂದಿತು, ದೇಶ್ಯಾದ್ಯಂತ ಎಲ್ಲಾ ವರ್ಗದ ಜನರು ಸಂವಿಧಾನವನ್ನು ಒಪ್ಪಿ ಅಪ್ಪಿಕೊಂಡಿದ್ದಾರೆ. ಜಗತ್ತಿನ ಅತ್ಯುತ್ತಮ ಸಂವಿಧಾನ ನಮ್ಮದು, ಸ್ವತಂತ್ರ್ಯ ಬಂದು ೭೦ ವರ್ಷಗಳು ಕಳೆದರೂ ದಲಿತರ ಮೇಲಿನ ದೌರ್ಜನ್ಯಗಳು, ಕಾರ್ಮಿಕರ ಮುಷ್ಕರ ನಡೆಸುತ್ತಿದ್ದಾರೆ.

ಬಹುಶಃ ಸಂವಿಧಾನಕ್ಕೆ ದಕ್ಕೆ ಬಂದಿದೆ ಎಂದರ್ಥ, ಅದಕ್ಕಾಗಿ ದಲಿತರು ಕಾರ್ಮಿಕರು ಪ್ರಗತಿಪರ ಸಂಘಟನೆಗಳು ಹೋರಾಟ ಮಾಡಬೇಕು. ಯಾವುದೇ ಸರಕಾರ ಇರಲಿ ಸಂವಿಧಾನಕ್ಕೆ ದಕ್ಕೆ ಬಂದರೆ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯ ಈಡೇರುವುದಿಲ್ಲ, ಅದಕ್ಕೆ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣದ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಸದಸ್ಯರು, ಬಹಳಷ್ಟು ಸಂಖ್ಯೆಯಲ್ಲಿ ಊರಿನ ನಾಗರೀಕರು ಉಪಸ್ಥಿತರಿದರು.

ಹನುಮಂತಪ್ಪ ವೆಂಕಾಟಪೂರ, .ಮಲ್ಲಯ್ಯ ಬಳ್ಳಾ, ನಾಗಪ್ಪ ತತ್ತಿ
,ಸುರೇಶ ಅಂತರಗಂಗಿ, C ದಾನಪ್ಪ ನೀಲಗಲ್ಲ, .ಮೌನೇಶ ಸಲ್ತಾನಪೂರ, ನೀಲಕಂಠಪ್ಪ ಬಜಂತ್ರಿ, ತುರಮಂದೆಪ್ಪ ಮರಕಮದಿನ್ನಿ, ದಾನಪ್ಪ ಮೆದಿಕಿನಾಳ, ಹನುಮಂತ ಮೆದಿಕಿನಾಳ, ನಾಗರಾಜ ಕುಣಿಕೆಲ್ಲೂರ್, ಸಂಪತ್ ನಂಜಲದಿನ್ನಿ, ಮೌನೇಶ ಬಳಗನೂರ, ಶೇಖರಪ್ಪ ಅಮೀನಗಢ, ಶರಣಪ್ಪ D ಮಸ್ಕಿ , ಚಿನ್ನಪ್ಪ ಯಡಿಗಿಬಾಳ ಕ್ಯಾಂಪ್, ಶರಣಪ್ಪ ಗುಡಿಹಾಳ, ಶಿವಪ್ಪ ತುಗಲದಿನ್ನಿ, ಹುಲಗಪ್ಪ ಯಕ್ಸಾಪೂರ, ದೇವೇಂದ್ರಪ್ಪ ಪಮನಕೆಲ್ಲುರು, ಮರಿಯಪ್ಪ ಬೇನಕನಾಳ, .ಹುಲಗಪ್ಪ ಬೇಲದಮರಡಿ, ಕುಮಾರ ಜಿನ್ನಾಪೂರ ಇದ್ದರು.

Don`t copy text!