ಪ್ರೀತಿ ಎಂದರೇನು? ಸಿನಿಮಾದ ಪೋಸ್ಟರ್ ಬಿಡುಗಡೆ…
e-ಸುದ್ದಿ ವರದಿ ಇಳಕಲ್
ಯುವ ಪ್ರತಿಭೆಯ ನಿರ್ದೇಶಕ ನಟ ಮುನೇಶ್ ಓಂ ಬಡಿಗೇರ್ ಅವರು ನಿರ್ದೇಶನದ ಪ್ರೀತಿ ಎಂದರೇನು ಸಿನಿಮಾದ ಪೋಸ್ಟರ್ ಬಿಡುಗಡೆ ಸಮಾರಂಭ ಹಾಗೂ ಬಿತ್ತಿ ಚಿತ್ರಗಳ ಬಿಡುಗಡೆ ಸಮಾರಂಭ ನಗರದ ಅಲಂಪುರ್ ಪೇಟೆಯ ಪಂಚಮುಖಿ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಈ ಪೋಸ್ಟರ್ ನ್ನು ಬಿಡುಗಡೆಯನ್ನು ಚಿತ್ರ ಕಲಾವಿದರಾದ ಬಸವರಾಜ್ ಗವಿಮಠ ನೆರವೇರಿಸಿ ಸಿನಿಮಾಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಂಜುನಾಥ್ ಪೋಚಗು೦ಡಿ, ಕಲಾವಿದರು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ