ಕಂದಾಯ ಗ್ರಾಮಗಳ
ಹಕ್ಕುಪತ್ರ ವಿತರಿಸಿದ ಶಾಸಕ ದೊಡ್ಡನಗೌಡ ಜಿ ಪಾಟೀಲ್ …
e-ಸುದ್ದಿ ಇಳಕಲ್
ಕರ್ನಾಟಕ ಸರ್ಕಾರ ಜಿಲ್ಲಾ ಆಡಳಿತ ಬಾಗಲಕೋಟ ಇವರ ವತಿಯಿಂದ ಹುನಗುಂದ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಕಂದಾಯ ಗ್ರಾಮಗಳ ಹಕ್ಕು ಪತ್ರಗಳ ವಿತರಣೆ ಸಮಾರಂಭ ಇಳಕಲ್ ನಗರದ ಶ್ರೀ ವಿಜಯ ಮಹಾಂತೇಶ ಅನುಭವ ಮಂಟಪ ದಲ್ಲಿ ನಡೆಯಿತು.
ಈ ಸಮಾರಂಭವನ್ನು ಶಾಸಕ ದೊಡ್ಡನಗೌಡ ಜಿ ಪಾಟೀಲ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಇಲಕಲ್ ನಗರಸಭೆ ಅಧ್ಯಕ್ಷ ಲಕ್ಷ್ಮಣ ಗುರಂ ಮಾಜಿ ನಗರಸಭೆ ಅಧ್ಯಕ್ಷೆ ಶೋಭಾ ಆಮದಿಹಾಳ,ಮಾಜಿ ಉಪಾಧ್ಯಕ್ಷೆ ಸವಿತಾಆರಿ, ತಹಶಿಲ್ದಾರ ಬಸವರಾಜ ಮೇಳವಂಕಿ,ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಜೀನ್ನೂರ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಕೊಂಕಲ್, ನಗರಸಭೆ ಪೌರಾಯುಕ್ತರಾದ ರಾಜು ಡಿ ಬಣಕಾರ,ಬಲಕುಂದಿ ಹಾಗೂ ಹಿರೇಕೊಡಗಲಿ ತಾಂಡಗಳ ಗ್ರಾಮಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು , ಫಲಾನುಭವಿಗಳು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ