ಶಿವಶರಣೆ ನಿಜ ಮುಕ್ತಿಯ ಹಡಪದ ಲಿಂಗಮ್ಮ

 

ಶಿವಶರಣೆ ನಿಜ ಮುಕ್ತಿಯ ಹಡಪದ ಲಿಂಗಮ್ಮ

ಶಿವಶರಣೆ ಲಿಂಗಮ್ಮ ಆಧ್ಯಾತ್ಮದ ಶಿಖರವನ್ನೆರಿದ ೧೨ ನೆಯ ಶತಮಾನದ ನಾಡಿನ ಮಹಾಶರಣೆ. .ಅವರ ಜನನ ವರ್ಷ ೧೧೬೦. ವಚನ ಸಾಹಿತ್ಯದಲ್ಲಿ ಬಸವಯುಗದ ವಚನ ಕಾರ್ತಿಯರಂತೆ ಕೊಡುಗೆ ಕೊಟ್ಟಂತೆ ಬಹುಶಃ ಯಾವ ಶತಮಾನವೂ ಕಂಡಿರಲಿಲ್ಲ.

ಬಸವಾದಿಗಳ ಸುತ್ತಲಿದ್ದ ಶ್ರೇಷ್ಠ ಅನುಭಾವಿಗಳಲ್ಲಿ ಕಂಡು ಬರುವ ಹಡಪದ ಅಪ್ಪಣನವರ ಸಹಧರ್ಮಿಣಿಯಾದ ಲಿಂಗಮ್ಮ ಆಧ್ಯಾತ್ಮ ಸಾಧನೆಗೆ ಮನಸ್ಸನ್ನು ಹೇಗೆ ಅಣಿಗೊಳಿಸಬೇಕು ಎಂದು ತಮ್ಮ ವಚನಗಳಲ್ಲಿ ಸವಿಸ್ತಾರವಾಗಿ ತಿಳಿಸಿದ್ದಾರೆ. ಶಿವಶರಣೆ ಲಿಂಗಮ್ಮ ” ಅಪ್ಪಣ್ಣ ಪ್ರೀಯ ಚೆನ್ನಬಸವಣ್ಣ ” ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾರೆ.ಇದುವರೆಗೂ ೧೧೪ ವಚನಗಳು ದೊರೆತಿವೆ. ವಚನಗಳ ಜೊತೆಗೆ ಒಂದು ಸ್ವರವಚನವನ್ನೂ ರಚಿಸಿ,” ಮಂತ್ರಗೊಪ್ಯ ಎಂಬ ಚಿಕ್ಕ ಕೃತಿಯನ್ನೂ ಬರೆದಿದ್ದಾರೆ. ಲಿಂಗಮ್ಮರ ವಚನಗಳನ್ನು ವಿದ್ವಾಂಸರು  ಬೋಧೆಯ ವಚನಗಳು ಎಂದು ಕರೆದಿದ್ದಾರೆ.

ಇಲ್ಲಿ ನೀತಿ ಬೋಧನೆ ಅತೀ ಪ್ರಧಾನವಾಗಿದೆ ಎಂಬುದನ್ನು ಗಮನಿಸಬೇಕು. ಸಾಮಾನ್ಯ ಸ್ತ್ರೀಯರು ಸಮಾಜ, ಮಾನವತೆ, ಕಾಯಕ ಪರಿಶುದ್ಧವಾದ ಬದುಕಿನ ಬಗ್ಗೆ ಅಧಿಕಾರವಾಣಿ ಇಂದ ಸ್ತ್ರೀ ಜಾಗೃತ ಗೊಂಡಥ ಕಾಲ. ಬಸವಾದಿ ಶರಣರು ತೋರಿದ ಮಹಾ ಬೆಳಕಿನಲ್ಲಿ ಅಂತರಂಗದ ಅರಿವು ಪಡೆದುಕೊಂಡು ಜ್ಯೋತಿರ್ಲಿಂಗದ ದರ್ಶನ ಪಡೆದ ಹಲವಾರು ಶರಣೆಯರಲ್ಲಿ ಶಿವಶರಣೆ ಲಿಂಗಮ್ಮ ಒಬ್ಬರು.

ಶಿವಶರಣೆ ಲಿಂಗಮ್ಮ ಜೀವನ ಚರಿತ್ರೆ ಕುರಿತು ಯಾವುದೇ ವಿವರಗಳು ಅಷ್ಟೇನೂ ಲಭ್ಯವಾಗಿಲ್ಲ. ಪ್ರಾರಂಭದ ಶಾಸನಗಳಿಂದ ಹಿಡಿದು ೧೬ ನೆಯ ಶತಮಾನದ ವರೆಗೆ ದೊರಕಿರುವ ಶಾಸನಗಳಲ್ಲಿ ‘ ಹಡಪದ‘ ಎಂಬ ಪದಕ್ಕೆ ಪಡೆವಳ ಎಂಬುದು ಪರ್ಯಾಯ ಪದವಾಗಿದೆ. ಪಡೆವಳ ಎಂದರೆ ಶೂರರು ಸೈನಿಕರು ಎಂಬ ಅರ್ಥ.ಪಡೆ ಎಂದರೆ ಸೈನ್ಯ ಪಡೆಯಾಗಿದೆ.

ಶರಣ ಕ್ರಾಂತಿಯ ಸಂದರ್ಭ ದಲ್ಲೀ ಹಡಪದ ಅಪ್ಪಣ್ಣ ಬಸವಣ್ಣರಿಗೆ ,ಒಬ್ಬ ಪಡೇವಳನ ( ಸೈನಿಕ ) ಎಂಬುದು ನಂಬ ಬೇಕಾಗುತ್ತದೆ. ಶರಣೆ ಲಿಂಗಮ್ಮ ಕುರಿತು.” ಗುರುರಾಜ ಚರಿತ್ರೆ ‘ಯಲ್ಲಿ ಪ್ರಸ್ತಾವನೆಗೊಂಡ ಹೇಳಿಕೆಯೊಂದನ್ನು ಬಿಟ್ಟರೆ,ಮತ್ಯಾವ ಕಾವ್ಯಗಳಲ್ಲಿ, ಪುರಾಣಗಳಲ್ಲಿ ಲಿಂಗಮ್ಮ ಕುರಿತು ಉಲ್ಲೇಖಗಳು ದೊರೆಯುವುದಿಲ್ಲ.

ಹಡಪದಅಪ್ಪಣ್ಣನೆ ಏನ್ನ ಕರಸ್ಥಲದಲ್ಲಿ ಲಿಂಗವಾಗಿ ನೆಲೆಗೊಂಡನು.ಚೆನ್ನ ಮ್ಮಲ್ಲೇಶ ನೆ ಎನ್ನ ಮನಸ್ಥಲಕ್ಕೆ ಪ್ರಾಣವಾಗಿ ಬಂದು ಮೂರ್ತಿಗೊಂಡನು. ಲಿಂಗಮ್ಮ ಅವರಿಗೆ ಚೆನ್ನ ಮಲ್ಲೇಶ್ವರನೆಂಬ ಗುರುವಿದ್ದನೆಂದು ಅವರ ವಚನಗಳಿಂದ ತಿಳಿದುಬರುತ್ತದೆ. ————————– ‘ ನಾಸಿಕದಲ್ಲಿ ಆಚಾರ ಲಿಂಗವನರಿದರ್ಪಿಸಿಗೊಂಡು ಅನ್ಯ ವಾಸನೆಯ ನನೆದ ಮನ ಶೂನ್ಯ ಕಾಣಾ.ಜಿಹ್ವೆ ಯಲ್ಲಿ ಗುರು ಲಿಂಗವನರಿದರ್ಪಿಸಿಕೊಂಡು ಅನ್ಯರುಚಿಯ ಭಾವಿಪ ಮನ ಶೂನ್ಯ ಕಾಣಾ.ತ್ವಕ್ಕಿನಲ್ಲಿ ಜಂಗಮಲಿಂಗ ವನರಿದರ್ಪಿಸಿ ಕೊಂಡು ಅನ್ಯ ಸ್ಪರ್ಷನ ಕಾಸ್ಪದ ವಾದ ಮನ ನಾಸ್ತಿ ಕಾಣಾ.. —————- ಬಸವಾದಿ ಶರಣರು ತೋರಿದ ಮಹಬೆಳಕಿನಲ್ಲಿ ಅಂತರಂಗದ ಅರಿವು ಪಡೆದುಕೊಂಡು ಜ್ಯೋತಿರ್ಲಿಂಗದ ದರ್ಶನ ಪಡೆದ ಹಲವಾರು ಶರಣೆಯರಲ್ಲಿ ಹಡಪದ ಲಿಂಗಮ್ಮ ಶ್ರೇಷ್ಠ ಶಿವ ಭಕ್ತೆ.. ಭಾವಗೀತದಿಂದ ಕೂಡಿದ ಅನುಭವ ಗದ್ಯದಲ್ಲಿ ನಿರ್ಭಯ ವಾದ ಅತ್ಮನೀರಿಕ್ಷಣೆಯನ್ನು ಇವರ ವಚನಗಳಲ್ಲಿ ಕಾಣ ಬಹುದು.

ಮನವ ನಿರ್ಮಲವ ಮಾಡಿಹೆನೆಂದು ತನುವ ಕರಗಿಸಿ ಬಳಲಿಸಿ ಕಳವಳಿಸಿ.. ಕಣ್ಣುಕಾಣದ ಅಂಧಕರಂತೆ ಮುಂದುಗಾಣದೆ ಸಂದೇಹದಲ್ಲಿ ಮುಳುಗಿರುವ ಮನುಜರಿರಾ,ನೀವು ಕೇಳಿರೋ,ಹೇಳಿಹೆನು..ಮನವ ನಿರ್ಮಲವ ಮಾಡಿ,ಆ ಘನವ ಕಾಂಬುದಕ್ಕೆ ಆ ಮನವೆಂತಾಗಬೇಕೆಂದಡೆ ಗಾಳಿ ಬೀಸದ ಜಲದಂತೆ,ಮೊಡವಿಲ್ಲದ ಸೂರ್ಯನಂತೆ,ಬೆಳಗಿದ ದರ್ಪಣದಂತೆ ಮನ ನಿರ್ಮಲವಾದಲ್ಲದೆ ಆ ಮಹಾಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣ ಪ್ರೀಯ ಚೆನ್ನಬಸವಣ್ಣ. ಮನಸ್ಸು ಶುಚಿಗೊಳಿಸಲು ತನುವ ದಂಡಿಸುವರು,ನೀರಲ್ಲಿ ಮುಳುಗುವುದು,ದೀರ್ಘ ದಂಡ ಪ್ರಣಾಮಗಳು,೧೦೦-೨೦೦ ಮೆಟ್ಟಿಲು ಏರುವುದು,,ಮರ ಸುತ್ತುವುದು,ಉರುಳುಸೇವೆ, ಮಾಡುತ್ತಾ,ನಿರಾಹಾರಿಯಾಗಿ ತನುಮನ ದಂಡಿಸಿಯೂ ಸಂದೆಹದಲ್ಲಿ ಜೀವನ ಸಾಗಿಸುವವರಿಗೆ ಅಂಧರೆಂದು ಹೇಳುತ್ತಾ,ಲಿಂಗಮ್ಮ.. ಆ ಘನಮಹಿಮ ಪರಮಾತ್ಮನನ್ನು ಕಾಣಲು ಗಾಳಿ ಬೀಸದ ಶಾಂತ ಜಲದಂತೆ…,ನಿಷ್ಕಲ್ಮಶತೆ ಇಂದ ಇರಬೇಕು,ಮನ ಪರಿಶುದ್ಧವಿರಬೇಕು.ಮನಸ್ಸು ಈ ಲೋಕದ ಇಂದ್ರಿಯಗಳ ಕಾಮನೆಗಳಿಗೆ ತುತ್ತಾಗದೆ ಅರಿಷ್ಡ್ವರ್ಗಗಳನ್ನು ಗೆಲ್ಲಬೇಕು___. ಮೋಡವಿಲ್ಲದ ಸೂರ್ಯ ಎಷ್ಟು ಪ್ರಕಾಶಮಾನ ನಾಗಿರುವನೋ ಹಾಗೆ ಆತ್ಮ ಸಾಕ್ಷಾತ್ಕಾರವಾಗಲು,ಮೊಡಗಳೆಂಬ ಸಾಂಸಾರಿಕ ಅಡೆತಡೆಗಳು,ಆಸೆ,ಆಕಾಂಕ್ಷೆ, ದುಃಖ,ಕ್ರೋಧ ,ಸಂದಿಗ್ಧತೆಗಳು,ಜೀವನ ಜಂಜಾಟಗಳು ಇಲ್ಲದಿರುವಾಗ, ಮನಸ್ಸು ಸೂರ್ಯನಂತೆ,ನಮ್ಮ ಪ್ರತಿಬಿಂಬ ಯಥಾವಾತ್ತಾಗಿ ತೋರುವಂತಿರಬೇಕು. ಅಂತರಂಗ ಬಹಿರಂಗ ದಲ್ಲೊಂದು ಇರದೆ,ಮನ ಬೆಳಗಿದ ದರ್ಪಣದಂತಿರಬೇಕು. ಈ ಅಂತರಂಗ ಬಹಿರಂಗಗಳ ಶುದ್ಧೀಕರಣವೇ ಶರಣರ ಆಶಯವಾಗಿದೆ.ಆಗ ಅಲ್ಲಿ ಪರಮಾತ್ಮನ ದರ್ಶನ ಆಗುತ್ತದೆ. ಅರಿಷ್ವರ್ಗಗಳ ಗೆಲ್ಲಲು ಶರಣ – ಶರಣೆಯರು ಶ್ರೇಷ್ಠ ಮಾರ್ಗ ಕಂಡುಕೊಂಡರು..ಸರ್ವ ಸಾಧನೆಗೆ ಮೂಲವಾದ ಮನಸ್ಸನ್ನು ಸ್ವ ಇಚ್ಛೆಇಂದ ಹರಿದಾಡಲು ಬಿಡದೆ ಬಯಲಿ ನೊಳಗೆ ಶರಣರ ಪಾದಕಮಲ ದಲ್ಲಿ ಬೇರೆಯ ಬೇಕೆಂಬ ಇಚ್ಛೆ ಉಳ್ಳವಳು.

ಕಾಣಬಾರದ ಕದಳಿಯಲೊಂದು ಮಾಣಿಕ್ಯ ಹುಟ್ಟಿತ್ತು
ಇದಾರಿಗೂ ಕಾಣಬಾರದು
ಮಾರಿಹೆನೆಂದಡೆ ಮಾನವರಿಗೆ ಸಾಧ್ಯವಾಗದು.
ಸಾವಿರಕ್ಕೆ ಬೆಲೆಯಾಯಿತ್ತು
ಆ ಬೆಲೆಯಾದ ಮಾಣಿಕ ನಮ್ಮ ಶಿವಶರಣರಿಗೆ ಸಾಧ್ಯವಾಯಿತ್ತು
ಅವರು ಆ ಮಾಣಿಕವ ಹೇಗೆ ಬೆಲೆಮಾಡಿದರೆಂದಡೆ
ಕಾಣಬಾರದ ಕದಳಿಯ ಹೊಕ್ಕು, ನೂನ ಕದಳಿಯ ದಾಂಟಿ,
ಜಲವ ಶೋದಿಸಿ, ಮನವ ನಿಲಿಸಿ,
ತನುವಿನೊಳಗಣ ಅನುವ ನೋಡುವನ್ನಕ್ಕ, ಮಾಣಿಕ ಸಿಕ್ಕಿತ್ತು .ಆ ಮಾಣಿಕವ ನೋಡಿದೆನೆಂದು ಜಗದ ಮನುಜರನೆ ಮರೆದು,
ತಾನುತಾನಾಗಿ ಜ್ಞಾನಜ್ಯೋತಿಯ ಬೆಳಗಿನೊಳಗೋಲಾಡಿ
ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ

ಲಿಂಗಮ್ಮ ಶಿವಶರಣರನ್ನು ‘ ಕದಳಿ ಎಂಬ ಅರ್ಥ ನೀಡುವ ಬಾಳೆಹಣ್ಣಿನ ಗಿಡಕ್ಕೆ’ ಹೋಲಿಸುತ್ತಾರೆ.ಏಕೆಂದರೆ ಆ ಹಣ್ಣು ದೇಹ ಪ್ರಕೃತಿಗೆ ಬೇಕಾದ ಸರ್ವ ಚೈತನ್ಯವೂ ನೀಡುವಂತೆ ನಮ್ಮ ಶರಣರೂ ಸದಾಕಾಲ ಸ್ಫೂರ್ತಿಯ ಚಿಲುಮೆ,ನವಶಕ್ತಿ ಕಾಂತಿಯ ತೇಜಸ್ಸನ್ನು ಹೊರಸೂಸುವ ಪಾರದರ್ಶಕ ಪ್ರತಿನಿಧಿಗಳಾಗಿದ್ದಾರೆ.

ಇಲ್ಲಿ ಕದಳಿ ಎಂದರೆ ಬದುಕು ಎಂಬ ಅರ್ಥವನ್ನೂ ಕಲ್ಪಿಸಿಕೊಂಡು ವಚನವನ್ನು ರಚನೆ ಮಾಡಿದ್ದಾರೆ ಲಿಂಗಮ್ಮ. ಅಪ್ಪಣ್ಣನನ್ನು ಮಾಣಿಕ್ಯ ಎಂದು ಕರೆಯುವ ಮೂಲಕ ಅವರಿಗೆ ಬೆಲೆ ಕಟ್ಟಲಾಗುವುದಿಲ್ಲ.ಅವರು ಹುಟ್ಟಿದ್ದು ಸಮಾಜದ ಉದ್ಧಾರಕ್ಕಾಗಿ ಅಂತಹ ಮಾಣಿಕ್ಯವನ್ನು ಬಸವಾದಿ ಶರಣರು ಗುರುತಿಸಿದರು. ಸಮಾಜವನ್ನು ಸುಖಿಯಾಗಿ ಕಾಣಿಸುವಲ್ಲಿ ಬಹಳ ಮಹತ್ವದ ಪಾತ್ರ ವಹಿಸಿದ್ದಾರೆ. ಆ ಮಾಣಿಕ ಎನ್ನುವುದು ಜಗದ ಮನುಷ್ಯರನ್ನ ಮರೆತು ಜ್ಞಾನದ ಜ್ಯೋತಿಯಾಗಿ ಜಗವನ್ನ ಜ್ಞಾನದ ಮೂಲಕ ಅಜ್ಞಾನವನ್ನೆಲ್ಲ ಹೋಗಲಾಡಿಸಲು ಸಹಾಯ ಮಾಡಿದ ಈ ಬೆಳಕಿನೊಳಗೆ ಸಂಚರಿಸಿದವನೇ ಸುಖಿಯಾಗಿ ಜೀವಿಸಬಲ್ಲ ಎಂದು ಹಡಪದ ಅಪ್ಪಣ್ಣರ ಜ್ಞಾನವನ್ನು ಕುರಿತು ಹೇಳುವಾಗ ಆ ಬೆಳಕನ್ನು ನಾನು ಅನುಭವಿಸಿ ಸುಖಿಯಾದೆ ಎಂಬ ವಚನವನ್ನು ಲಿಂಗಮ್ಮ ಬರೆದಿದ್ದಾರೆ. ಯಾರು ತಮ್ಮ ಅಂತರಂಗದಲ್ಲಿ ಅರಿಷಡ್ ವರ್ಗಗಳಿಗೆ ಬಾಗಿಲು ಮುಚ್ಚುವರೊ,ಅಂತಹವರು ಮಾತ್ರ ದೈವತ್ವ ಪಡೆಯಲು ಸಾಧ್ಯ. ಶರಣ ಮಾಣಿಕ್ಯ ನ ನೋಡಿ ಇಡೀ ಜಗತ್ತೇ ಮರೆತು ದೀಪವನ್ನು ಪ್ರಜ್ವಲಿಸಲು ಎಣ್ಣೆ ಬತ್ತಿಯು ಹೇಗೆ ತಮ್ಮನ್ನು ತಾವು ಸಮರ್ಪಿಸಿ ಕೊಳ್ಳುವವೋ ಆ ರೀತಿಯೇ ಶಿವಶರಣನು ತನ್ನ ಅಂತರಾತ್ಮ ಎಂಬ ಜ್ಞಾನದ ಜ್ಯೋತಿಯ ಬೆಳಕಿನಲ್ಲಿ ಸಂಚಾರ ಮಾಡುತ್ತಾ ಲೋಕದ ಜ್ಯೋತಿಯಾಗಿ ಹೊರಹೊಮ್ಮುತ್ತ ಪರಮಾತ್ಮನಲ್ಲಿ ಅಡಗಿರುವನೇ ಅಪ್ಪಣ್ಣ ಪ್ರೀಯ ಚೆನ್ನ ಬಸವಣ್ಣ..__________ ನಿಜಮುಕ್ತಿಯ ಲಿಂಗಮ್ಮ ನೆಂದೆ ಮನ್ನಣೆ ಗಳಿಸಿದ ಶರಣೆ ಲಿಂಗಮ್ಮನವರ ಸಾಧನೆ,ಸಿದ್ಧಿ ಇಂದಿನ ಸ್ತ್ರೀ ಕುಲ ಮೈಗೂಡಿಸಿ ಕೊಳ್ಳುವಲ್ಲಿ ಆಸಕ್ತಿ ವಹಿಸಬೇಕು..ಅಂದಾಗ ಸ್ತ್ರೀ ಜೀವನ ಉತ್ಕರ್ಷ ಸುಸಾಧ್ಯ..

ಡಾ. ಶಾರದಾಮಣಿ.ಏಸ್.ಹುನಶಾಳ.ವಿಜಯಪುರ

Don`t copy text!