ವಚನ ಭಾವದ ಬುತ್ತಿ

ವಚನ ಭಾವದ ಬುತ್ತಿ

ಬಸವಣ್ಣ ನೀ ಮೀಟಿದ
ಎನ್ನ ಭಾವ ತರಂಗ
ಎಲ್ಲೆಡೆ ಪಸರಿಸುತ್ತಲಿದೆ
ಶಿವಾ ನೀನೇಕೆ ಮೊದಲೇ ಮನುಜರ ಹೃದಯವನ್ನು ಮೀಟಲಿಲ್ಲ
ಇದು ನಿನ್ನದೇ ತಪ್ಪು, ಒಪ್ಪಿಕೊಳ್ಳುವೆಯಾ,
ಎನ್ನ ಭಾವ ತರಂಗವೇ? ನೀ ಒಪ್ಪಿಕೊಂಡಿದ್ದರೆ ಎಲ್ಲ ಜಗವು ತನ್ನತನ.
ಈಗಲಾದರೂ ಎಲ್ಲರ ಮನದಲ್ಲಿ ನಿನ್ನ ಭಾವ ತರಂಗದ ದೂಳೆಬ್ಬಿಸಿ ನೋಡು ಅದರ ಚಮತ್ಕಾರವಾ ಈ ನಿನ್ನ ಭಾವ ತರಂಗದ ಓಂಕಾರ ನಾದ ಬಿಂದು ಕಳಾತಿತ
ಕಾಣದೇ ಇರುವ ಕಲ್ಪನೆ
ನಿನ್ನ ಭಾವ ತರಂಗದ ಮಧುರವಾ
ಹೊರ ಸೂಸುವದು ಎಲ್ಲೆಲ್ಲಿಯೂ
ಐಕ್ಯತೆ ಸಿಹಿ ಗಾಳಿ
ದೇವನೊಬ್ಬ ನಾಮ ಹಲವು ನಾವೆಲ್ಲರೂ ಒಂದುಶರಣ ಸಂಘದವರು.
ತನ್ನ ತಾನರಿದವರು ಅರುಹಿದರು ಅಲ್ಲವೇ
ಶರಣರು ತಮ್ಮ ಭಾವನೆಗಳ ತರಂಗಗಳ ಮೂಲಕ ಇಂದು ಝ0ಕರಿಸುತ್ತಿದೆ ಬಸವ ಭಾವದಲಿ.
ವಚನ ಭಾವದ ಬುತ್ತಿ
ಬಿಚ್ಚಿ ಉಣುತಿಹೇವು
ಶತಮಾನಗಳೇ ಕಳೆದವು
ಶಿವನೇ ಬಸವನ ರೂಪದಲ್ಲಿ
ಕಂಡು ಪುನೀತರಾದೇವು


ಪ್ರೋ ದೀಪಾ ಜಿಗಬಡ್ಡಿ ಬದಾಮಿ

Don`t copy text!