ನಿರಂತರ ಕಲಿಕೆ ಭವಿಷ್ಯದ ಉತ್ತಮ ವೈದ್ಯರಾಗಲು ಸಹಾಯಕ: ಡಾ.ವಿಜಯ್ ಕುಮಾರ್ ಶಾಬಾದಿ…
e-ಸುದ್ದಿ ವರದಿ:ಬಾಗಲಕೋಟೆ
ಬಾಗಲಕೋಟೆ: ಪ್ರತಿಯೊಬ್ಬ ವೈದ್ಯ ವಿದ್ಯಾರ್ಥಿಯು ನಿರಂತರ ಕಲಿಕೆಯಲ್ಲಿ ತೊಡಗಿದ್ದೆ ಆದರೆ ಭವಿಷ್ಯದ ಉತ್ತಮ ವೈದ್ಯರಾಗಲು ಸಹಾಯಕವಾಗುತ್ತದೆ ಎಂದು ಡಾ.ವಿಜಯಕುಮಾರ್ ಶಾಬಾದಿ ತಿಳಿಸಿದರು.
ಇಂದು ನಗರದ ತೇಜಸ್ ಅಂತರಾಷ್ಟ್ರೀಯ ಶಿಕ್ಷಣ ಸಮೂಹ ಸಂಸ್ಥೆಯ ಎಂ ಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ 2022-23ನೇ ಸಾಲಿನ ಬಿಎಎಂಎಸ್ ವಿದ್ಯಾರ್ಥಿಗಳ ಪರಿವರ್ತನಾ ಪಠ್ಯಕ್ರಮ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ಬಾಗಲಕೋಟೆ ನಗರದ ನರರೋಗ ತಜ್ಞರಾದ ಡಾಕ್ಟರ್ ವಿಜಯಕುಮಾರ್ ಶಾಬಾದಿ ಮಾತನಾಡುತ್ತಾ ಎಂ ಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಸಿಗುತ್ತಿರುವ ಅದ್ಭುತ ಸೌಲಭ್ಯಗಳ ಜೊತೆಗೆ ನಿರಂತರ ಕಲಿಕೆಯಲ್ಲಿ ತೊಡಗಿದ್ದೆ ಆದರೆ ಇಲ್ಲಿರುವ ವೈದ್ಯ ವಿದ್ಯಾರ್ಥಿಗಳೆಲ್ಲರೂ ಭವಿಷ್ಯದಲ್ಲಿ ಉತ್ತಮ ವೈದ್ಯರಾಗಲು ಸಹಾಯಕ ಎಂದರು.
ಅತಿಥಿ ಭಾಷಣಕಾರರಾಗಿ ಆಗಮಿಸಿದ್ದ ಹಾಸನ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾಕ್ಟರ್ ಎನ್ ಎಸ್ ನಿತಿನ್ ಮಾತನಾಡುತ್ತಾ ವೈದ್ಯ ವಿದ್ಯಾರ್ಥಿಗಳು ತಮ್ಮ ನಿರ್ದಿಷ್ಟ ಶ್ರೇಷ್ಠ ಗುರಿಯನ್ನು ತಲುಪಲು ಶ್ರಮವಹಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ತೇಜಸ್ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಾಧುರಿ ಮುಧೋಳ್ ಮಾತನಾಡುತ್ತಾ ಪ್ರತಿಯೊಬ್ಬ ವೈದ್ಯ ವಿದ್ಯಾರ್ಥಿಗಳು ನಯ ವಿನಯ ಜೊತೆಗೆ ವೈದ್ಯ ವೃತ್ತಿಯ ಪಾಂಡಿತ್ಯವನ್ನು ಪಡೆದಿದ್ದೆ ಆದರೆ ನೀವೆಲ್ಲರೂ ಭವಿಷ್ಯದ ಶ್ರೇಷ್ಠ ವೈದ್ಯರಾಗುತ್ತಿರೆಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಎಂ ಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಡೀನ್ ಆದ ಡಾ. ಶಿವಕುಮಾರ್ ಗಂಗಾಲ, ಕಾಲೇಜಿನ ಪ್ರಾಚಾರ್ಯರಾದ ಡಾ.ಪ್ರಹ್ಲಾದ ಗಂಗಾವತಿ, ತುಮಕೂರು ಮೆಡಿಕಲ್ ಕಾಲೇಜಿನ ಡಾ.ಜಗದೀಶ್ ಡಿ, ಡಾ.ವಿಜಯಕುಮಾರ್ ಚವಡಿ, ಡಾ. ದೀಪಾ ಗಂಗಾಲ, ಡಾ.ಸಪ್ನಾ ರಜಪೂತ, ಡಾ. ರಜನಿ ಡಾ.ಅತಿರ ಕೆ , ಡಾ. ಅತಿರ ಎಸ್, ಆಚಾರ್ಯ ಸ್ವರ್ಣ ಮಂದಾರ ಹಾಜರಿದ್ದರು.
ವಿದ್ಯಾರ್ಥಿನಿ ನಿತ್ಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಪ್ರಿಯಾಂಕ ಸ್ವಾಗತಿಸಿದರು. ವಿದ್ಯಾರ್ಥಿ ಅಜಿಂಖ್ಯ ವಂದಿಸಿದರು.
ವರದಿಗಾರರು: ಶರಣಗೌಡ ಕಂದಕೂರ