ಒಳಮಿಸಲಾತಿ ಶಿಪಾರಸ್ಸು ಹಿಂಪೆಡೆಯದಿದದ್ದರೆ ಉಗ್ರ ಹೋರಾಟ…
e-ಸುದ್ದಿ ವರದಿ:ಇಳಕಲ್
ಇಳಕಲ್: ಒಳಮಿಸಲಾತಿ ಜಾರಿಗೆ ಮಾಡಬಾರದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊರಮ,ಕೊರಚ,ಭೋವಿ, ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಹಿಗಾಗಿ ಮಿಸಲಾತಿ ಶಿಪಾರಸ್ಸು ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ವಿವಿಧ ಸಮಾಜದ ಮುಖಂಡರು ಪತ್ರಿಕಾಗೋಷ್ಠಿಯ ಮೂಲಕ ತಿಳಿಸಿದರು.
ಇನ್ನೂ ಕಾಲವಕಾಶ ಇದೆ ಹಿಗಾಗಿ ಮೀಸಲಾತಿ ಶಿಪಾರಸ್ಸು ಹಿಂಪಡೆಯದಿದ್ದರೆ ಮುಂದೆ ಬರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಮತದಾನ ಮಾಡದಿರಲು ಎಚ್ಚರಿಕೆ ನೀಡಿದರು.
ಅದೇ ರೀತಿ ಇಳಕಲ್ ನಗರದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮುಖಂಡರು ಪತ್ರಿಕಾ ಗೋಷ್ಠಿಯ ಮೂಲಕ ತಿಳಿಸಿದರು.
ವರದಿಗಾರರು; ಶರಣಗೌಡ ಕಂದಕೂರ