ಆಧ್ಯಾತ್ಮವನ್ನು ಮೈಗೂಡಿಸಿಕೊಂಡು ಬಂದವರು ಶರಣೆ ಅಕ್ಕಮಹಾದೇ- ವಿ. ಪಿ. ವೀರಭದ್ರಪ್ಪ ಕುರಕುಂದಿ

ಆಧ್ಯಾತ್ಮವನ್ನು ಮೈಗೂಡಿಸಿಕೊಂಡು ಬಂದವರು ಶರಣೆ ಅಕ್ಕಮಹಾದೇ- ವಿ. ಪಿ. ವೀರಭದ್ರಪ್ಪ ಕುರಕುಂದಿ

e-ಸುದ್ದಿ ಸಿಂಧನೂರು

ಮನುಷ್ಯನು ಲೌಕಿಕದ ಜೋತೆಯಲಿ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು, ಶರಣರು ಹೇಳಿದ್ದು ‌ ಸಂಸಾರದೊಂದಿಗೆ ಸದ್ಗತಿ ಕಾಣಬೇಕು ತನ್ನ ಅರಿವು ತಾ ತಿಳಿಯಬೇಕು, ಮನುಷ್ಯ ಜನ್ಮ ಶ್ರೇಷ್ಠವಾಗಿದೆ ಅರಿವಿನ ಈ ಜನ್ಮದಲ್ಲಿ ಜನಿಸಿ ಬಂದಮೇಲೆ ಮೂಲ ತತ್ವ ಅರಿಯಬೇಕು ಎಂದು ಆಧ್ಯಾತ್ಮಿಕ ಜೀವಿ ವೀರಭದ್ರಪ್ಪ ಕುರಕುಂದಿ ಹೇಳಿದರು.

ಅವರು ಸಿಂಧನೂರು ತಾಲೂಕ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಶ್ರೀ ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಆಯೋಜನೆ ಮಾಡಿದ ಲಿಂ. ಶ್ರೀ ಮಲ್ಲಯ್ಯಸ್ವಾಮಿ ಸಗರಮಠ ಸ್ಮಾರಕ ದತ್ತಿ. ಹಾಗೂ ಲಿಂ ಶ್ರೀಮತಿ ಅನ್ನಪೂರ್ಣೇಶ್ವರಿ ಗಂ ಧರಯ್ಯ ರಾರಾವಿ ಸ್ಮಾರಕ ದತ್ತಿ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಹಾಗೂ ವೈಚಾರಿಕತೆಯನ್ನು ಉದ್ದೇಶಿಸಿ ಉಪನ್ಯಾಸ ನೀಡಿದರು.

ಹಳ್ಳ ಕೊಳ್ಳ ನದಿಗಳು ಸಮುದ್ರ ಸೇರುವಂತೆ ಮನುಷ್ಯನು ಸಹ ಮೂಲ ತತ್ವದೊಂದಿಗೆ ನಿತ್ಯ ಮುಕ್ತಿ ಕಾಣಬೇಕು. ಹನ್ನೆರಡನೇ ಶತಮಾನದ ಶರಣರು ಸಹ ಸಂಸಾರದೊಂದಿ ಕಾಯಕ ದಾಸೋಹ ಅನುಭವದಲ್ಲಿ ಸತ್ಯ ಸುಖವನು ಉಂಡವರು ಹದಿನಾರನೇ ವಯಸ್ಸಿನಲ್ಲಿ ಅಕ್ಕಮಹಾದೇವಿಯು ಸಹ ಕ್ಷಣಿಕ ಸುಖಕ್ಕಾಗಿ ಆಸೆ ಪಡದೆ ಚೆನ್ನಮಲ್ಲಿಕಾರ್ಜುನನ ಎನ್ನ ಪತಿ ಎಂದು ಮಾನಸಿಕ ಸುಖ ಉಂಡು ತೃಪ್ತಿ ಪಟ್ಟವಳು ನಿಜವಾದ ಅದಿಅರೆಯದ ವಯಸ್ಸಿನಲ್ಲಿ ಆಧ್ಯಾತ್ಮಿಕ ಸುಖದಲ್ಲಿ ಕಾಲ ಕಳೆದು ವೈಚಾರಿಕತೆಯನ್ನು ಮೈಗೂಡಿಸಿಕೊಂಡು ಸಮ ಸಮಾಜ ಕಟ್ಟುವಲ್ಲಿ ಯಶಸ್ವಿಯಾದಳು, ಒಟ್ಟಾರೆ ಶರಣರ ವಚನಗಳನ್ನು ಮೈಗೂಡಿಸಿಕೊಂಡು ಬದುಕಿದರೆ ಆಧ್ಯಾತ್ಮಿಕ ಹಾಗೂ ವೈಚಾರಿಕತೆಯನ್ನು ಬೆಲೆ ತರಬಹುದು ಎಂದು ರಾಯಚೂರು ಜಿಲ್ಲೆ ಬಸವಕೇಂದ್ರಗಳ ಜಿಲ್ಲಾಧ್ಯಕ್ಷ ಶರಣ ಶ್ರೀ ಪಿ. ವೀರಭದ್ರಪ್ಪ ಕುರಕುಂದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ದತ್ತಿ ದಾನಿಗಳಾದ ಶ್ರೀ ಧರಯ್ಯ ರಾರಾವಿ ನಿವೃತ್ತ ಶಿಕ್ಷಕರು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಕಮಲಾ ಜೋಶಿ ವಾರ್ಡನ್, ಶ್ರೀಮತಿ ಅಮರಮ್ಮ ಭಂಗಿ. ತತ್ವಪದಕಾರ ನಾರಾಯಣಪ್ಪ ಮಾಡಶಿರಿವಾರ. ಉಪನ್ಯಾಸಕ ವೈಜನಾಥ ಸಗರಮಠ, ತಬಲವಾದಕ ಶ್ರೀ ಬಸವರಾಜ ಮೋತಿ. ಶ್ರೀ ಹುಲುಗಪ್ಪ ಮೇದಾರ. ಚಾಂದಸಾಬ ಬಸವ ನಗರ. ಮತ್ತಿತರರು ಭಾಗವಹಿಸಿದ್ದರು,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಪಂಪಯ್ಯಸ್ವಾಮಿ ಸಾಲಿಮಠ ವಹಿಸಿದ್ದರು, ವಸತಿ ನಿಲಯದ ವಿದ್ಯಾರ್ಥಿಗಳು ಸ್ವಾಗತಿ ಪ್ರಾರ್ಥನೆ ಸಲ್ಲಿಸಿದರು, ಶ್ರೀಮತಿ ಸಂಗೀತಾ ಸಾರಂಗಮಠ ನಿರೂಪಿಸಿ ವಂದಿಸಿದರು.

Don`t copy text!