ಚುನಾವಣೆ ಘೋಷಣೆ – ಪುರಸಭೆಯಿಂದ ನೀತಿ ಸಂಹಿತೆ ಜಾರಿ

 

ಚುನಾವಣೆ ಘೋಷಣೆ – ಪುರಸಭೆಯಿಂದ ನೀತಿ ಸಂಹಿತೆ ಜಾರಿ

e-ಸುದ್ದಿ ಮಸ್ಕಿ

ಮಸ್ಕಿ: ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆ ಜಾರಿಯಾದ ಬೆನ್ನಲ್ಲೆ ಪುರಸಭೆ ಇಂದಿನಿಂದ ನೀತಿ ಸಂಹಿತೆ ಜಾರಿಗೆ ಮುಂದಾಗಿದೆ,
ಪುರಸಭೆಯ ಅಡಿಗಲ್ಲು ಹಾಗೂ ಉದ್ಘಾಟನೆ ಸಮಾರಂಭ ನಾಮಫಲಕಗಳಿಗೆ ಪುರಸಭೆ ಸಿಬ್ಬಂದಿ ಪೇಪರ್ ಅಂಟಿಸಿದ್ದಾರೆ, ವಿವಿಧೆಡೆ ಇರುವ ಸರ್ಕಾರದ ಗೋಡೆ ಬರಹ ಹಾಗೂ ನಾಮಫಲಗಳನ್ನುಅಳಸಿ ಹಾಕಲಾಗುತ್ತಿದೆ.
ವಿವಿಧೆಡೆ ಕಟ್ಟಿರುವ ಬ್ಯಾನರ್ ಹಾಗೂ ಕಟೌಟ್ ಗಳನ್ನು ಎತ್ತಂಗಡಿ ಮಾಡಲಾಗುತ್ತಿದೆ.
ನೀತಿ ಸಂಹಿತೆ ಜಾರಿಯಾಗುತ್ತಲೇ ರಸ್ತೆಗೆ ಇಳಿದ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಪಟ್ಟಣದಲ್ಲಿ ಸಂಚರಿಸಿ ಎಲ್ಲೆಲ್ಲಿ ಕಟೌಟ್, ಗೋಡೆ ಬರಹಗಳನ್ನು ತೆಗೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ, ಚುನಾವಣೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಬುಧವಾರ ಮಸ್ಕಿಯ ಪುರಸಭೆಯ ಪಕ್ಕದಲ್ಲಿ ಬರೆಸಲಾಗಿದ್ದ ಸರ್ಕಾರದ ಸಾಧನೆಯ ಗೊಡೆಯ ಬರಹಕ್ಕೆ ಪುರಸಭೆ ಸಿಬ್ಬಂದಿ ಪೇಪರ್ ಅಂಟಿಸಿದರು.

Don`t copy text!