ಕುಡಿಯುವ ನೀರಿನ ಪೈಪ್ ಒಡೆದು ಹರಿಯುತ್ತಿದ್ದರು ಕಣ್ಮುಚ್ಚಿ ಕುಳಿತ ನಗರಸಭೆ ಅಧಿಕಾರಿಗಳು

e-ಸುದ್ದಿ ವರದಿ;ಇಳಕಲ್

ಬೇಸಿಗೆಕಾಲ ಬಂತಂದರೆ ನೀರಿಗೆ ಎಲ್ಲೆಡೆ ಆಹಾಕಾರ ಅದಕ್ಕೆ ವಿಪರ್ಯಾಸ ಎಂಬಂತೆ ಇಲ್ಕಲ್ ನಗರದಲ್ಲಿ 24 / 7 ಕುಡಿಯುವ ನೀರಿನ ಪೈಪ್ ನಗರದ ಶ್ರೀನಿವಾಸ್ ಟಾಕೀಸ್ ಹತ್ತಿರ ಇರುವ ಹುಲಿಗೆರಿ ರಸ್ತೆಯ ಪಕ್ಕದಲ್ಲಿ ಪೈಪ್ ಒಡೆದು ನೀರು ಬೆಳಗ್ಗೆಯಿಂದಲೇ ಹರಿಯುತ್ತಿದ್ದರು, ನಗರಸಭೆ ಅಧಿಕಾರಿಗಳು ಮಾತ್ರ ಇತ್ತ ಕಡೆ ಗಮನ ಹರಿಸಿಲ್ಲ. ಅಲ್ಲದೆ ಈ ಪೈಪ್ ಒಡೆದ ಕಾರಣ ಮುಂದಿನ ಫ್ಲಾಟ್ ಗಳಿಗೆ ನೀರು ಹೋಗದ ಕಾರಣ ನೀರಿಗಾಗಿ ಜನ ತತ್ತರಿಸಿದರು.

ಇದನ್ನು ಆದಷ್ಟು ಬೇಗನೆ ಸರಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡಬೆಕೆಂಬುದು ನಮ್ಮ ಆಶಯ…

ವರದಿಗಾರರು: ಶರಣಗೌಡ ಕಂದಕೂರ

Don`t copy text!