ನಮ್ಮೂರು
ನಮ್ಮೂರು ಭಾಳ ಚಂದ
ಅದನ್ನು ನೆನೆದರೆ ಆನಂದವೋ ಆನಂದ
ಊರ ಸುತ್ತಲೂ ಇರುವ ಗಿಡ ಮರ
ಅಗಸದೆತ್ತರಕ್ಕೆ ತೆಂಗು ಕಂಗಿನ ಮರ
ಸುತ್ತಲೂ ಹರಿವ ನದಿ ನೀರ ಝರಿ
ನಾಲ್ಕು ವಿಭಾಗದಿ ಬೀಳುವ ಜಲಪಾತದ ಪರಿ
ಇದೇ ಇದೇ ನಮ್ಮೂರ ಸುಂದರ ಸಿರಿ
ವರ್ಣಿಸಲು ಪದಗಳ ಅಭಾವ ನೋಡಿರಿ
ಎಲ್ಲೆಲ್ಲೂ ಹಾರಾಡುವ ಬಾನಾಡಿ ಹಿಂಡು
ಅಲ್ಲಲ್ಲಿ ಹುಲ್ಲು ಮೇಯುವ ಕುರಿ
ಹಿಂಡು
ಅಲ್ಲೇ ಆಟವಾಡುವ ಮಕ್ಕಳ
ತಂಡ
ನೋಡಿಯೇ ಇದನು ಮನಕೆ
ಆನಂದ
ರೈತ ಬೆಳೆದು ಪೈರು ಬಂತು ಮನೆಗೆ
ಸಂತಸದ ವಾತಾವರಣ ಇಡೀ ಊರಿಗೆ
ಎಲ್ಲರ ಮುಖದಲಿ ಕೊರತೆಯಿಲ್ಲ ಖುಷಿಗೆ
ಅರಳುತಿಹುದು ಮೊಗದಿ ನಗೆಬುಗ್ಗೆ
✍️ರೇಖಾ.ಮುತಾಲಿಕ್
ಬಾಗಲಕೋಟ