ಹಾಯ್ಕು ಗಳು.
ಶುರುವಾಯಿತು
ಇಂದಿನಿಂದ ಪರೀಕ್ಷೆ
ಹೆದರದಿರಿ.
ಬೇಗನೆ ಏಳಿ
ಸುಮ್ಮನೆ ಕಣ್ಣಾಡಿಸಿ
ಪುಸ್ತಕದಲಿ.
ಓದಿದ್ದು ಮತ್ತೆ
ಮರುಕಳಿಸುವಂತೆ.
ಮರೆಯದಂತೆ.
ಮುತ್ತಿನ ಹಾರ
ಪೋಣಿಸಿದ ಅಕ್ಷರ
ನಿಮ್ಮದಾಗಲಿ.
ಕಿಟಕಿ ಮೇಲೆ
ದೃಷ್ಟಿ ಬೇಡವೇ ಬೇಡ
ನಂಬದೆ ಕಾಪಿ.
ಆತ್ಮ ವಿಶ್ವಾಸ
ಇರಲಿ ನಿನ್ನ ಮೇಲೆ
ಬರೆ ಚೆನ್ನಾಗಿ.
ಹೆತ್ತವರಿಗೆ
ಹುಲ್ಲ ತರದಿರು ನೀ
ಹೂ ತಂದು ಕೊಡು.
ಮನದಲಿ ನೀ
ಸ್ಮರಿಸು ಪರಮಾತ್ಮಾ
ಬರೆ ಚಿತ್ತದಿ.
ಕನ್ನಡ ಕಂದ
ಪಸರಿಸು ಕಂಪನು
ಸುತ್ತ ಮುತ್ತಲು.
ಸುಂದರ ಬಾಳು
ಕಾಯುತಿದೆ ಮಕ್ಕಳೆ
ಏಳ್ಗೆ ಹೊಂದಿರಿ.
ಭಾವಿ ಭವಿಷ್ಯ
ನಿಮ್ಮ ಕೈಯಲ್ಲಿ ಇದೆ.
ಹಾಳಾಗದಿರಿ
ಅಪ್ಪ ಅಮ್ಮನ
ಕ್ಷಣವೂ ನೆನೆದರೆ
ಹಾದಿ ಸುಗಮ
ನಿರೀಕ್ಷೆ ಇಟ್ಟು
ಕಾಯುತ ಫಲಿತಾಂಶ
ಗುರಿ ಮುಟ್ಟಿರಿ.
–ಜಯಶ್ರೀ ಭ ಭಂಡಾರಿ
ಬಾದಾಮಿ