ನಿತ್ಯ ವಂದಿಪರು
ನಿದ್ದೆಯಿಂದೆದ್ದ ಸಿದ್ಧ
ಬುದ್ಧನಾದ
ಸಂಸಾರವನು ಗೆದ್ದ ವರ್ಧಮಾನ
ಮಹಾವೀರನಾದ ||
ಕಾಯಕವೇ ಕೈಲಾಸವೆಂದ
ಬಸವ ದೇವಮಾನವನಾದ
ಸತ್ಯವೇ ನಿತ್ಯವೆಂದ ಗಾಂಧಿ
ಮಹಾತ್ಮನಾದ ||
ಎಲ್ಲರಲೂ ಕಂಡದ್ದು
ವೈರಾಗ್ಯ ಭಾಗ್ಯ
ಸರಳ ಜೀವನ ಮಾರ್ಗ
ತರವಲ್ಲ ಭೋಗ ಲಾಲಸೆ
ಆಸೆ ತೊರೆದು ಬದುಕುವುದೇ ಯೋಗ್ಯ ||
ದಾರ್ಶನಿಕರ ಬದುಕ ನೋಡಿಯೂ
ಮನುಜ
ಭೋಗ ಭಾಗ್ಯಗಳ ತೊರೆದು
ಬದುಕಲಾರ
ಬುದ್ಧ, ಬಸವ, ಮಹಾವೀರ ಗಾಂಧಿಯ
ತಿಳಿದು ಕಲಿಯಲಾರ ||
ಮೂಢ ಮತಿಗಳ ಮನ್ನಿಸಿ
ಜಗಕೆ ಆ ದಿವ್ಯ ಚೇತನಗಳು
ಕೃಪೆ ತೋರುತಲಿರಲಿ
ಮನುಜನರಿವಿನ ಬುತ್ತಿ
ಆರದಿರಲಿ
ನಿತ್ಯ ವಂದಿಪರು ಭುವಿಗೆ
ಅವತರಿಸುತಲೇ ಇರಲಿ||
✍️ ಆದಪ್ಪ ಹೆಂಬಾ ಮಸ್ಕಿ