ಮಲ್ಲಿಗೆ…

ಮಲ್ಲಿಗೆ….

ಘಮ ಘಮಾಡಿಸ್ತಾವ ಮಲ್ಲಿಗೆ ಆಹಾ ನೀ ಹೊರಟಿದ್ದೆ ಈಗ ಎಲ್ಲಿಗೆ.
ನಾನು ಘಮಾಡಿಸಲು ಹೊರಟಿದ್ದೆ ಈಗ ಸಂಪ್ರದಾಯದ
ಅರಮನೆಗೆ.

ಮಲ್ಲಿಗೆಯನ್ನು ಹೂವುಗಳ ರಾಣಿ ಎನ್ನುತ್ತಾರೆ. ಇದರ ಪರಿಮಳ ಮನಸ್ಸಿಗೆ ಉಲ್ಲಾಸ ಉಂಟು ಮಾಡುತ್ತದೆ. ಹಾಗಾಗಿ ಸುಗಂಧ ರಾಣಿ ಎಂಬ ಬಿರುದಾ oಕಿತೆ.
ಭಾರತದ ವಿವಿಧ ಭಾಗಗಳಲ್ಲಿ ಇದನ್ನು ಮೊಗ್ರಾ. ಮೋಟಿಯ. ಚಮೇಲಿ. ಮಲ್ಲಿ. ಜಾಟಿ. ಜಾಸ್ಮಿನ. ಜೂಹಿ ಎನ್ನುತ್ತಾರೆ. ಮಲ್ಲಿಗೆಯಲ್ಲಿ 200ವಿಧಗಳಿವೆ.
ಕರ್ನಾಟಕದಲ್ಲಿ ಹಲವಾರು ಜಾತಿಯ ಮಲ್ಲಿಗೆ ಬೆಳೆಯುತ್ತಾರೆ.
ಅಲಿಯೇಸಿ ಕುಟುಂಬದ ಮೈಸೂರಮಲ್ಲಿಗೆ ಹೆಚ್ಚು ಪ್ರಖ್ಯಾತಿ ಪಡೆದಿದೆ.
ಕರ್ನಾಟಕದಲ್ಲಿ ಮೂರುವಿಧಗಳು ಜನಪ್ರಿಯವಾಗಿವೆ.1)ಹಡಗಲಿ ಮಲ್ಲಿಗೆ 2)ಉಡುಪಿ ಮಲ್ಲಿಗೆ 3)ಮೈಸೂರಮಲ್ಲಿಗೆ.

1)ಮೈಸೂರ ಮಲ್ಲಿಗೆ..ಮೈಸೂರನಗರದ ಸುತ್ತ ಮುತ್ತ ಮಂಡ್ಯ. ಶ್ರೀರಂಗಪಟ್ಟಣ ದಲ್ಲಿ ಹೆಚ್ಚು. ಮೈಸೂರ ಮಲ್ಲಿಗೆ ಯನ್ನು ಮೈಸೂರ ಸಾಮ್ರಾಜ್ಯದ ಒಡೆಯರ್ ಪೋಷಿಸಿದರು. ಇದನ್ನು ಮನೆಯಲ್ಲಿ ಹೆರಳವಾಗಿ ಬೆಳೆಯಬಹುದು.
ಮಲ್ಲಿಗೆಯನ್ನು ಸುಗಂಧ ದ್ರವ್ಯ ತಯಾರಿಸಲು. ಸೌಂದರ್ಯ ವರ್ಧಕ. ಧೂಪ. ಅರೊಮಾಥೆರಪಿಗಾಗಿ ಬಳಸುತ್ತಾರೆ. ಎಷ್ಟೋ ಕೂಟುo ಬಗಳು ಮಲ್ಲಿಗೆ ಬೆಳೆದು ಬದುಕು ಸಾಗಿಸುತ್ತಿದ್ದಾರೆ.

2)ಹಡಗಲಿ ಮಲ್ಲಿಗೆ….ಹೆಚ್ಚು ಪರಿಮಳ ಹಾಗೂ ಹೆಚ್ಚು ದಿನ ಬಾಡದೇ ಇರುವದಕ್ಕೆ ಹೆಸರುವಾಸಿ. ಇದನ್ನು ಹೂವಿನ ಹಡಗಲಿ. ತಿಪ್ಪಪುರ. ತಿಮ್ಲಪುರ. ಹೊನ್ನೂರ್ ಗ್ರಾಮದಲ್ಲಿ ಬೆಳೆಯುತ್ತಾರೆ. ಇದಕ್ಕೆ ವಾಸನೆ ಮಲ್ಲಿಗೆ ಅಂತ ಕೂಡ ಕರೆಯುತ್ತಾರೆ.ಇದು ಆರು ತಿoಗಳು ಹೂ ಬಿಡುತ್ತದೆ.

3)ಉಡುಪಿ ಮಲ್ಲಿಗೆ. ಮ್ಯಾಂಗಲೋರ್ ಮಲ್ಲಿಗೆ…ಉಡುಪಿ. ದಕ್ಷಿಣ ಕನ್ನಡ ವ್ಯಾಪಾಕವಾಗಿ ಬೆಳೆಯುತ್ತೆ. ಇದು ಹೆಚ್ಚು ಆರ್ಥಿಕ ಲಾಭ ತಂದು ಕೊಡುವ ಮಲ್ಲಿಗೆ. ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಉಡುಪಿಯ ಶಂಕರಪುರದ ಬೆಳೆಗಾರರ ಸಂಘ ಇದರ ದೈನಂದಿನ ಬೆಲೆ ನಿರ್ಧಾರಿಸುತ್ತೆ.
ಮಲ್ಲಿಗೆಯ ಉಪಯೋಗ…

ಇದನ್ನು ಮದುವೆ. ಮಂಗಳಕರ ಸಂಧರ್ಭ. ದೇವಾಲಯಗಳಲ್ಲಿ. ಮುಡಿಯಲು. ಬಸುರಿಯ ಮೊಗ್ಗಿನ ಜಡೇಗಾಗಿ. ದಿನನಿತ್ಯ ಮುಡಿಯಲು. ಹಾರವಾಗಿ ಉಪಯೋಗಿಸುತ್ತಾರೆ.
ಹೂವುಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲಿ ಬೆಲೆಯಿದೆ.ಮಲ್ಲಿಗೆಯಲ್ಲಿ ಹಲವು ವಿಧಗಳಿವೆ.. ಕಾಡು ಮಲ್ಲಿಗೆ. ಸೂಜಿ ಮಲ್ಲಿಗೆ.. ಜಾಜಿ ಮಲ್ಲಿಗೆ.. ದುಂಡು ಮಲ್ಲಿಗೆ.. ಮೈಸೂರಮಲ್ಲಿಗೆ.. ಮ್ಯಾಂಗಲೋರ್ ಮಲ್ಲಿಗೆ.. ಮುತ್ತು ಮಲ್ಲಿಗೆ. ಏಳು ಸುತ್ತಿನ ಮಲ್ಲಿಗೆ.
ಮಲ್ಲಿಗೆಯಿಂದಾ ತಯಾರಿಸಿದಾ ತೈಲವನ್ನು ಕಿವಿ. ಮೂಗಿನ ರೋಗಗಳಲ್ಲಿ ಬಳಸುತ್ತಾರೆ. ಚಹಾ ಕ್ಕೆ ಸುಗಂಧ ತರಿಸಲು ಬಳಸುತ್ತಾರೆ. ಗಾಯ. ಹುಣ್ಣುಗಳಿಗೆ ಒಣಗಿದ ಮಲ್ಲಿಗೆಯ ಎಲೆ ನೀರಲ್ಲಿ ನೆನೆಇಟ್ಟು ಪೋಲ್ಟಿಸ್ ಕಟ್ಟುತ್ತಾರೆ. ನೇತ್ರ ರೋಗ. ದಂತ ರೋಗ. ಶಿರೋರೋಗ ದಲ್ಲಿ ಉಪಯೋಗಿಸುತ್ತಾರೆ.
ಪೊದೆ. ಬಳ್ಳಿ ರೂಪದಲ್ಲಿ ಬೆಳೆಯುತ್ತೆ. ಒಮ್ಮೆ ನಾಟಿ ಮಾಡಿದರೆ ಕನಿಷ್ಠ 20ವರ್ಷ ಹೂವು ಪಡೆಯಬಹುದು.3.4ದಿನಗಳಿಗೊಮ್ಮೆ ನೀರು ಹಾಕಿದರೆ ಸಾಕು. ಪ್ರತಿ ಚಳಿಗಾಲದಲ್ಲಿ ಕಟಾವು ಮಾಡಿದರೆ ಇಳುವರಿ ಹೆಚ್ಚು. ನಮ್ಮ ಸಂಪ್ರದಾಯ ಕುಟುಂಬಗಳ ಹೆಚ್ಚಿನ ಮನೆ… ಮಲ್ಲಿಗೆ ಬಳ್ಳಿಯಿಂದ ಶೋಭಿಸುತ್ತಿರುತ್ತದೆ. ಅಂಗಳ ಇದ್ದರೆ ಅಲ್ಲಿ ಮಲ್ಲಿಗೆಗೆ ಪ್ರಥಮ ಆದ್ಯತೆ. ಮಲ್ಲಿಗೆ ಹೂ ಚಿಕ್ಕದಾದರೂ ಅದರ ಪರಿಮಳ ಎಲ್ಲರನ್ನೂ ಆಕರ್ಷಿಸುತ್ತೆ.
ಸೋಜುಗದ ಸೂಜು ಮಲ್ಲಿಗೆ
ಮಹದೇವ ನಿನ್ನ ಮಂಡೆ ಮ್ಯಾಲೆ ದುಂಡು ಮಲ್ಲಿಗೆ…..
ನನ್ನಅಚ್ಚು ಮೆಚ್ಚಿನ ಹೂವು ಬೆಳ್ಳನೆಯ. ಶುಭ್ರ. ಪರಿಮಳ ಬೀರಿ ಆಕರ್ಷಿಸುವ ಮಲ್ಲೆ.ಮದುವೆ. ನಿಶ್ಚಿತಾರ್ಥದ ಸಂದರ್ಭದಲ್ಲಿ ಮಲ್ಲಿಗೆ ದಂಡೆ ಕಟ್ಟುತ್ತೇವೆ. ಮಲ್ಲಿಗೆ ಘಮ ಪೂಜೆ ಮಾಡುವಾಗ ಮನಸ್ಸನ್ನು ಕೇಂದ್ರೀಕರಿಸಿ ಪೂಜೆಗೆ ಭಕ್ತಿ ಭಾವ ಉಂಟು ಮಾಡುತ್ತೆ.

✍️ಶ್ರೀಮತಿ. ವಿದ್ಯಾ. ಹುಂಡೇಕರ.

 

 

.

Don`t copy text!