ಅನುಭಾವಿ ಅಕ್ಕ
ಉಟ್ಟ ಸೀರೆಯ ಕಿತ್ತೆಸೆದು
ಬಟ್ಟ ಬತ್ತಲೆಯಾಗಿ
ದಟ್ಟ ಕತ್ತಲೆಯ ನಡುವೆ
ಪೂರ್ಣ ಚಂದಿರನಂತೆ
ಬಯಲ ಬೆಳದಿಂಗಳಾದ
ಉಡುತಡಿಯ ದಿಟ್ಟ ಮಗಳು…
ತೆರೆಸರಿಸಿ ಮೋಹದಾಸೆಗಳ
ಹರಿದೊಗೆದು ಭವ-ಬಂಧನವ
ಮದವ ಮುರಿದು ಹರೆಯದ
ಕಳಚಿ ರೂಪಿನ ಕವಚವ
ಮೆಟ್ಟಿ ತುಳಿದು ಕಾಮನ
ಗೆದ್ದ ಏರುಜವ್ವನದ ಧೀರೆ..!
ವೈರಾಗ್ಯ ನಿಧಿಯಾಗಿ
ಉರಿವ ಕರ್ಪೂರವಾಗಿ
ಅರಿವಿಂಗೆ ನೀನು ಗುರುವಾದೆ ಅಕ್ಕ
ಚನ್ನಮಲ್ಲಿಕಾರ್ಜುನನ
ಆತ್ಮ-ನಲ್ಲೆಯು ನೀನು
ಕದಳಿಯಲಿ ಕರಗಿದೆ *ಅನುಭಾವಿ ಅಕ್ಕ* ..
ಶರಣು ನನ್ನಕ್ಕ ಶರಣು ಶರಣು
ಮಹಾದೇವಿ ಅಕ್ಕ ಶರಣು ಶರಣು..🙏
🌿 ಹಮೀದಾಬೇಗಂ ದೇಸಾಯಿ. ಸಂಕೇಶ್ವರ. 🙏