ತ್ರಿಪದಿಗಳು
೧)
ಅಕ್ಕನೆಂದರೆ ಭಾವ ಅಕ್ಕನೆಂದರೆ ಬಯಲು
ಅಕ್ಕನೆಂದರೆ ಆಧ್ಯಾತ್ಮ ಅರಗಿಳಿಯು
ಅಕ್ಕನೇ ಸ್ರ್ತೀಕುಲಕೆ ಹೆದ್ದಾರಿ.
೨)
ಅಕ್ಕನೆಂದರೆ ಸಿಡಿಲು ಅಕ್ಕನೆಂದರೆ ಕಡಲು
ಅಕ್ಕ ಅರಿವಿನ ಬೆಳ್ಮುಗಿಲು ಮಹಾದೇವಿ
ಅಕ್ಕನೇ ಛಲಗಾರ್ತಿ ಜಗಕೆಲ್ಲ.
೩)
ಆತ್ಮಜ್ಞಾನಿಯು ನೀನು ಆತ್ಮಸ್ಥೈರ್ಯವು ನೀನು
ಆತ್ಮದ ಜ್ಯೋತಿ ಮಹದೇವಿ ಮಲ್ಲಯ್ಯನ
ಆತ್ಮಸಂಗಾತಿ ನೀನವ್ವ.
೪)
ಹಸಿವು ತೃಷೆಗಳ ಬಿಟ್ಟೆ ಕಾಮಕ್ರೋಧವ ಸುಟ್ಟೆ
ಬಸವನ ಮಹಾಮನೆ ಮಗಳಾದೆ ಮಹದೇವಿ
ವಸುಧೆಯಲಿ ಸ್ತ್ರೀ ರತ್ನ ನೀನವ್ವ.