ವಜ್ಜಲ ಗ್ರಾಮದ ಪುರಾಣ ಪ್ರವಚನದಲ್ಲಿ ಭಾಗಿಯಾದ ಪೂಜ್ಯರು…
e-ಸುದ್ದಿ ವರದಿ:ಇಳಕಲ್
ಇಳಕಲ್; ತಾಲೂಕಿನ ವಜ್ಜಲ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ನಡೆಯುತ್ತಿರುವ ಪುರಾಣ ಪ್ರವಚನ ದಿನನಿತ್ಯ ನಡೆಯುತ್ತಿದೆ.
ಒಂದು ವಾರಗಳ ಕಾಲ ನಡೆದ ಪುರಾಣ ಪ್ರವಚನದಲ್ಲಿ ಕುಷ್ಟಗಿಯ ಕರಿಬಸವ ಶಿವಾಚಾರ್ಯರು, ನಂದವಾಡಗಿಯ ಡಾ, ಚನ್ನಬಸವ ದೇಶಿ ಕೇಂದ್ರ ಶಿವಾಚಾರ್ಯರು, ಅಂಕಲಿಮಠದ ಪೂಜ್ಯರು, ಇಲ್ಕಲ್ ಡಾ, ಗುರುಮಹಂತ ಸ್ವಾಮೀಜಿಗಳು ದಿನನಿತ್ಯ ನಡೆದ ಪುರಾಣ ಪ್ರವಚನದಲ್ಲಿ ಭಾಗಿಯಾಗಿ ಭಕ್ತರಿಗೆ ದಿವ್ಯ ಸಂದೇಶ ನೀಡಿದರು.
ಈ ಪುರಾಣ ಪ್ರವಚನದಲ್ಲಿ ವಜ್ಜಲ ಗ್ರಾಮದ ಗುರುಹಿರಿಯರು ಮಹಿಳೆಯರು ಯುವಕರು, ಸುತ್ತಮುತ್ತಲಿನ ಗ್ರಾಮದ ಜನರು ಆಗಮಿಸಿದ್ದರು.
ವರದಿಗಾರರು: ಶರಣಗೌಡ ಕಂದಕೂರ