ಸಿಂಧನೂರು ಬಣಜಿಗ ಸಮಾಜದಿಂದ ಅಕ್ಕಮಹಾದೇವಿ ಜಯಂತಿ ಆಚರಣೆ
e-ಸುದ್ದಿ ಸಿಂಧನೂರು
ಬಣಜಿಗ ತಾಲೂಕು ಘಟಕ ಹಾಗೂ ಯುವ ಘಟಕದ ವತಿಯಿಂದ ಶಿವಶರಣೆ ಅಕ್ಕಮಹಾದೇವಿ ಜಯಂತಿಯನ್ನು ಸರಳವಾಗಿ ಗುರುವಾರ ಆಚರಿಸಲಾಯಿತು. . ಈ ವೇಳೆ ಸಮಾಜದ ಮಾಜಿ ಅಧ್ಯಕ್ಷ ಗುಂಡಪ್ಪ ಬಳಿಗಾರ ಮಾತನಾಡಿ ಅಕ್ಕಮಹಾದೇವಿಯವರ ಆಚಾರ ವಿಚಾರಗಳು ಪ್ರತಿಯೊಬ್ಬರು ಪಾಲಿಸಬೇಕು ಎಂದರು. . ತಾಲೂಕು ಯುವ ಘಟಕದ ಅಧ್ಯಕ್ಷ ಚಂದ್ರಶೇಖರ ಯರದಿಹಾಳ ಮಾತನಾಡಿ ಅಕ್ಕಮಹಾದೇವಿಯವರು ಮಹಿಳೆಯರಿಗೆ ಸ್ಪೂರ್ತಿ ಆಗಿದ್ದಾರೆ ಅವರ ವಚನಗಳು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಆಗ ಮಾತ್ರ ಜೀವನ ಸುಂದರವಾಗುತ್ತದೆ ಎಂದರು. .
ಸರ್ಕಾರಿ ಜಯಂತಿ ಆಚರಣೆ ಮಾಡಲು ಮನವಿ ಅಕ್ಕಮಹಾದೇವಿಯವರು ಒಂದು ಜಾತಿ ಸೀಮಿತ ಆಗಿಲ್ಲ ಅವರು ಎಲ್ಲಾ ಸಮುದಾಯದವರಿಗೂ ವಚನಗಾರ್ತಿ ಆಗಿದ್ದಾರೆ, ಅಕ್ಕಮಹಾದೇವಿ ಅವರ ಜಯಂತಿ ರಾಜ್ಯ ಮಟ್ಟದಲ್ಲಿ ಸರ್ಕಾರಿ ಜಯಂತಿ ಹಾಗೆ ಆಚರಣೆ ಮಾಡುತ್ತಿದ್ದಾರೆ, ಎಲ್ಲಾ ತಾಲೂಕು ಜಿಲ್ಲಾ ಕೇಂದ್ರದಲ್ಲಿ ಸಹ ಸರ್ಕಾರಿ ಜಯಂತಿ ಮಾಡಲು ಒತ್ತಾಯ ಮಾಡಿದರು.
. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಅಮರೇಶ್ ಸಾಹುಕಾರ್ ಮಾಡಿಶಿರವಾರ, ಶಿವಕುಮಾರ್ ಜವಳಿ, ಟಿ.ಬಸವರಾಜಪ್ಪ, ವೀರೇಂದ್ರ ಪ್ರಸಾದ್, ರವಿ ಮಾಲಿ ಪಾಟೀಲ್, ಮುದುಕಪ್ಪ ಉಪ್ಪಳ, ವೀರೇಶ್ ಮಾಲಿ ಪಾಟೀಲ್, ವೀರೇಶ್ ದಿದ್ದಿಗೆ, ರಂಗನಾಥ ಗೊಮ್ಮರ್ಸಿ, ಶಿವು ಜವಳಿ, ಉಪನ್ಯಾಸಕ ಚನ್ನಬಸವ, ಪಿ.ಬಸವಲಿಂಗ ಜವಳಗೇರಾ, ಸಂತೋಷ್ ಅಂಗಡಿ, ಶೇಖರ ಉಪ್ಪಳ ಸೇರಿದಂತೆ ಇತರರು ಇದ್ದರು