ಲಿಂಗಸುಗೂರು ತಾಲ್ಲೂಕಿನಲ್ಲೊಂದು ಆಕರ್ಷಕ ಮತದಾನ ಕೇಂದ್ರ
e- ಸುದ್ದಿ ಲಿಂಗಸುಗೂರು
ವರದಿ ವೀರೇಶ ಅಂಗಡಿ ಗೌಡೂರು
ಕರ್ನಾಟಕದ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ. ಮತದಾರರು ಮತದಾನದಿಂದ ವಂಚಿತವಾಗದೆ ತಪ್ಪದೆ ಮತದಾನ ಮಾಡಲು ಚುನಾವಣೆ ಆಯೋಗ ಮತ್ತು ಜಿಲ್ಲಾಡಳಿತದಿಂದ ಮತದಾನದ ಕುರಿತು ಜಾಗೃತಿ ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಲ್ಲದೇ ಮತಯಂತ್ರ ಪ್ರಾತ್ಯಕ್ಷಿಕೆ ಕೂಡಾ ಬಹುತೇಕ ಕಡೆ ನಡೆಸಲಾಗುತ್ತಿದೆ.
ತಾಲೂಕು ಕೇಂದ್ರದಿಂದ ಅನತಿ ದೂರದಲ್ಲಿರುವ ಬೆಂಡೋಣಿ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿರುವ ಮತದಾನ ಕೇಂದ್ರ ಸಂಖ್ಯೆ 143 ರನ್ನು ಆಕರ್ಷಿಸುವಂತೆ ಮಾಡಿದವರು ಅದೇ ಶಾಲೆಯ ಶಿಕ್ಷಕರಾದ ಚಂದ್ರುರವರು .ತಮ್ಮ ಕೈಯಲ್ಲಿ ಅಂದವಾಗಿ ಹಳ್ಳಿಯ ಜಾನಪದ ಕಲೆಯನ್ನು ಬಿಂಬಿಸುವ ಬಿತ್ತಿ ಚಿತ್ರಗಳನ್ನು ಬಿಡಿಸುವ ಮೂಲಕ “ನನ್ನ ಮತ ನನ್ನ ಹಕ್ಕು “ಎಂಬ ತಲೆಬರಹದೊಂದಿಗೆ ಮತದಾನ ಕೇಂದ್ರವನ್ನು ಅತ್ಯಂತ ಆಕರ್ಷಣೀಯವಾಗಿ ನಿರ್ಮಾಣ ಮಾಡಿದ್ದಾರೆ.
*ಮತದಾನದ ಹಕ್ಕು ಹೊಂದಿರುವ ಪ್ರತಿಯೊಬ್ಬ ಪ್ರಜೆಯೂ ಮತದಾನದಿಂದ ದೂರು ಉಳಿಯದೇ ಮತದಾನ ಮಾಡುವಂತಾಗಲೂ ಮತದಾನ ಕೇಂದ್ರಕ್ಕೆ ನನ್ನ ಮತ ನನ್ನ ಹಕ್ಕು ಎಂಬ ತಲೆಬರಹದಲ್ಲಿ ಕೇಂದ್ರವನ್ನು ಚಿತ್ರಿಕರಿಸಲಾಗಿದೆ – ಚಂದ್ರು. ವೈ ಶಿಕ್ಷಕರು* .(ಬಿ.ಎಲ್.ಒ ಬೆಂಡೋಣಿ)