ಸೆರಗಿನ ಬೆರಗು ಕಂಡಿರಾ

ಸೆರಗಿನ ಬೆರಗು ಕಂಡಿರಾ

 

ಹುಟ್ಟಿದ ಮುದ್ದು ಮಗುವಿನ ಮುಷ್ಠಿ
ಬಿಚ್ಚಿ ಒರೆಸುವ ಮಮತೆಯ ಸೆರಗು
ಎದೆಹಾಲು ಕುಡಿದ ಮಗುವಿನ ಬಾಯಿ
ಒರೆಸುವ ವಾತ್ಸಲ್ಯದ ಅಮ್ಮನ ಸೆರಗು.

ಜೋಗುಳ ಹಾಡುತ ತಟ್ಟಿ ಮಲಗಿಸುವಾಗ
ಗಾಳಿ ಹಾಕುವ ಆಪ್ಯಾಯಮಾನ ಸೆರಗು.
ಚಂದ್ರನ ತೋರಿಸುತ ರಮಿಸಿ ಉಣಿಸಿದ
ನಂತರ ಬಾಯಿ ಒರೆಸುವ ಅಮ್ಮನ ಸೆರಗು.

ಬೆಳೆದ ಮಕ್ಕಳು ಕೈ ಬಾಯಿ ಒರೆಸುಕೊಳ್ಳು ಸೆರಗು
ದಣಿದ ಪತಿರಾಯ ಊಟ ಮಾಡುವಾಗ
ಬೀಸಣಿಕೆಯಂತೆ ತಂಪನ್ನೀಯುವುವ ಸೆರಗು
ಮೊಮ್ಮಕ್ಕಳು ಆಡುವಾಗ ಅವಿತುಕೊಳ್ಳುವ ಸೆರಗು.

ಮದುಮಕ್ಕಳ ನಡುವೆ ಬ್ರಹ್ಮಗಂಟಿನ ಸೆರಗು
ನವವಧು ಹೊದ್ದಿರುವ ಸೆರಗೇ ಒಂದು ಬೆರಗು
ಗಂಡ ಓಲೈಸಲು ಆಗಾಗ ಹಿಡಿಯುತ್ತಿರುತ್ತಾನೆ
ಮುದ್ದಿನ ಹೆಂಡತಿಯ ಮುದ್ದಾದ ಸೆರಗು

ಮನೆಯೊಡತಿಯ ಗಾಂಭೀರ್ಯ ಹೆಚ್ಚಿಸುವ ಸೆರಗು
ಬಿಸಲಿನ ಝಳಕೆ ಮುಡಿಯೆರುವ ಬಿಂಕದ ಸೆರಗು
ಹಿರಿಯರು ಎದುರಿಗೆ ಬಂದಾಗ ಗೌರವದ ಸೆರಗು
ಅಳು,ನಗುವಿನ ನಡುವಿನ ಸಂಕೋಲೆಯ ಸೆರಗು

ರ್ಯಾಂಪ ಕ್ಯಾಟವಾಕಿನ ಲಲನೆಯರು ತೋರುವ
ಫ್ಯಾಶನ್ ಪರೇಡಿನ ಮನಮೋಹಕ ಪಲ್ಲೂ
ಇನ್ನೂ ಮುಂದುವರೆದು ಸ್ವಾತಂತ್ರ್ಯ ಹೋರಾಟದಲ್ಲಿ
ಭೀಕಾಜಿ ಕಾಮಾಳಿಗೆ ಸೆರಗೇ ರಾಷ್ಟ್ರಪತಾಕೆಯಾದದ್ದು.

ಪ್ರತಿ ಭಾರತೀಯ ಸ್ರ್ತೀ ಸಹಜ ಗೌರವಾನ್ವಿತ ಸಂಸ್ಕ್ರತಿಯ
ಬೆರಗು ಈ ಸೆರಗಿನಲ್ಲಡಗಿದೆ…
ಅಸಹನೀಯ ಎನಿಸುವ ಪದಮಾತ್ರ ಸೆರಗು ಹಾಸು
ಸಮಾಜದ ಓರೆ-ಕೋರೆಗಳಲ್ಲಿ ಒಂದಾಗಿದೆ.

ಜಯಶ್ರೀ. ಭ.ಭಂಡಾರಿ.
ಬಾದಾಮಿ

Don`t copy text!