ಅಮೂಲ್ ಕಂಪನಿಯ ಉತ್ಪನ್ನಗಳನ್ನು ಬಹಿಷ್ಕರಿಸುತ್ತೆವೆ ;ಕರವೇ ಅದ್ಯಕ್ಷ ಮಹಾಂತೇಶ ವಂಕಲಕುಂಟಿ…

ಅಮೂಲ್ ಕಂಪನಿಯ ಉತ್ಪನ್ನಗಳನ್ನು ಬಹಿಷ್ಕರಿಸುತ್ತೆವೆ ;ಕರವೇ ಅದ್ಯಕ್ಷ ಮಹಾಂತೇಶ ವಂಕಲಕುಂಟಿ…

 

e-ಸುದ್ದಿ ಇಳಕಲ್

ಕನ್ನಡಿಗರು ಕಷ್ಟಪಟ್ಟು ಕಟ್ಟಿ ಬೆಳೆಸಿದ ಸಂಸ್ಥೆ ಕೆಎಂಎಫ್ (ನಂದಿನಿ). ಈ ಸಂಸ್ಥೆಯನ್ನು ನಾಶಪಡಿಸಿ ಗುಜರಾತ್ ನ ಅಮೂಲ್ ಸಂಸ್ಥೆಯನ್ನು ಅಕ್ರಮವಾಗಿ, ಅನೈತಿಕವಾಗಿ ಕರ್ನಾಟಕದ ಒಳಗೆ ತರಲಾಗುತ್ತಿದೆ.
ಅಮೂಲ್ ಮತ್ತು ನಂದಿನಿಯನ್ನು ವಿಲೀನಗೊಳಿಸುವುದಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಿಸಿದ್ದರು. ಆನಂತರ ಅಮುಲ್ ಸಂಸ್ಥೆ ತನ್ನ ಹಾಲು, ಮೊಸರನ್ನು ಕರ್ನಾಟಕದಲ್ಲಿ ಮಾರಾಟ ಮಾಡುವುದಾಗಿ ಘೋಷಿಸಿದೆ.
ಒಂದುವೇಳೆ ಅಮೂಲ್ ತೆಕ್ಕೆಗೆ ನಂದಿನಿ ಹೋದಲ್ಲಿ, ಕರ್ನಾಟಕದ ಲಕ್ಷಾಂತರ ರೈತರು ಬೀದಿಪಾಲಾಗುತ್ತಾರೆ. ಕನ್ನಡಿಗರು ಕಟ್ಟಿದ ಬ್ಯಾಂಕುಗಳನ್ನು ಕಬಳಿಸಿದವರು ಈಗ ಕನ್ನಡಿಗರ ಹೆಮ್ಮೆಯ ಸಂಸ್ಥೆ ನಂದಿನಿಯನ್ನು ನುಂಗುತ್ತಿದ್ದಾರೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಸಹಿಸಿಕೊಳ್ಳುವುದಿಲ್ಲ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಈಗಾಗಲೇ ಅಮೂಲ್ ವಿರುದ್ಧ ಚಳವಳಿ ಆರಂಭಿಸಿದೆ. ಇ-ಕಾಮರ್ಸ್ ಸಂಸ್ಥೆಗಳ ಮೂಲಕ ಅಮೂಲ್ ಹಾಲು-ಮೊಸರು ವ್ಯಾಪಾರ ನಡೆಸಲು ಮುಂದಾದರೆ, ಕರವೇ ಅಂಥ ಸಂಸ್ಥೆಗಳ ವಿರುದ್ಧ ಚಳವಳಿ ರೂಪಿಸಲಿದೆ, ಆಗುವ ಅನಾಹುತಗಳಿಗೆ ಆ ಸಂಸ್ಥೆಗಳೇ ಜವಾಬ್ದಾರಿ ಹೊರಬೇಕು ಎಂದು ಟಿ.ಎ.ನಾರಾಯಣಗೌಡರು ಎಚ್ಚರಿಸಿದ್ದಾರೆ. ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಮಾರ್ಗದರ್ಶನದಂತೆ ಇಲಕಲ್ಲ
ತಾಲ್ಲೂಕಿನಲ್ಲಿ ಯಾವುದೇ ಕಾರಣಕ್ಕೂ ಅಮೂಲ್ ಹಾಲು-ಮೊಸರು ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ರಾಜ್ಯಾಧ್ಯಕ್ಷರು ಆದೇಶ ನೀಡಿದ್ದಲ್ಲಿ, ಅಮೂಲ್ ಸಂಸ್ಥೆಯ ಎಲ್ಲ ಉತ್ಪನ್ನಗಳಿಗೂ ಇಲಕಲ್ಲ ತಾಲ್ಲೂಕಿನಲ್ಲಿ ಬಹಿಷ್ಕಾರ ಹಾಕಲಾಗುವುದು. ಎಂದು ಕರವೇ ತಾಲುಕಾದ್ಯಕ್ಷ ಮಹಾಂತೇಶ ವಂಕಲಕುಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವರದಿಗಾರರು: ಶರಣಗೌಡ ಕಂದಕೂರ.

Don`t copy text!