ಬಾಳು ನೀ ಬಾಳು
ಮತಿಯಿಂದ ನೀ ಮಿತಿಯಲಿ
ಇರುತಲಿ
ಹಿತವಾದ ರುಚಿ ನುಡಿಗಳನು
ನುಡಿಯುತಲಿ
ವಿಕಳ ಮತಿಗಳನು ಬದಿಗೆ ಸರಿ
ಸುತಲಿ
ಹಿತ ಮಿತದಿ ಸುಖವಾಗಿ ನೀ
ಇರುತಲಿ,
ಬಾಳು ನೀ ಒಂದಾಗಿ ಚೆಂದಾಗಿ
ಬಾಳು.
ಸಂಸಾರ ಬಂಧನಗಳಲಿ ನೀ
ಬೆರೆಯುತ
ಮಧುರ ಸಂಸಾರಕೆ ಸುಂದರ ರೂಪ ಕೊಡುತ
ಸರ್ವ ಜನಾಂಗಕೆ ನೀ ಒಳಿತು
ಬಯಸುತ
ಜೀವಿಸು ನೀ ಮನುಜ ಅಹುದು
ಅಹುದೆಂದೆ ನಿಸುತ
ಬಾಳು ನೀ ಒಂದಾಗಿ ಚೆಂದಾಗಿ
ಬಾಳು.
ಭುವಿಯ ಪರಿಸರಕೆ ನೀ
ಹೊಂದಿಕೊಳುತ
ಹಚ್ಚ ಹೊಸ ಹಸಿರಿನಲಿ ನೀ
ಒಂದಾಗುತ
ತುಂಬು ಹೃದಯದಿ ಎಲ್ಲರಲಿ
ನೀ ಸೇರುತ
ಮುಂದು ಮುಂದಾಗಿ ಬಲ್ಲವರ ಲಿ ನೀನಿರುತ
ಬಾಳು ನೀ, ಒಂದಾಗಿ ಚೆಂದಾಗಿ
ಬಾಳು.
–ಕೃಷ್ಣ ಬೀಡಕರ. ವಿಜಯಪುರ