ನಿವಾರ್ ಚಂಡಮಾರುತ ಹೊಡೆತಕ್ಕೆ ನೆಲಕ್ಕಚ್ಚಿದ ಭತ್ತ

 

e-ಸುದ್ದಿ, ಮಸ್ಕಿ

ಕಳೆದ ಎರಡು ದಿನಗಳಿಂದ ಬೀಸುತ್ತಿರುವ ನಿವಾರ್ ಚಂಡ ಮಾರುತದಿಂದ ಮಸ್ಕಿ ಸುತ್ತಮೂತ್ತ ಹಾಲಪೂರ, ಜಂಗಮರಗಹಳ್ಳಿ, ತೊರಣದಿನ್ನಿ, ಬಸಾಪುರ, ಹಾರಪೂರ, ಪೈಕ್ಯಾಂಪ್, ಶಂಕರನಗರ ಕ್ಯಾಂಪ್ ಸೇರಿದಂತೆ ಅನೇಕ ಕಡೆ ಭತ್ತದ ಬೆಳೆ ಸಂಪೂರ್ಣವಾಗಿ ನೆಲಕ್ಕಚ್ಚಿದೆ.
ಭತ್ತದ ಬೆಳೆ ಕಟಾವು ಹಂತದಲ್ಲಿರುವಾಗ ನಿವಾರ್ ಚಂಡಮಾರುತದಿಂದ ಸುರಿಯುತ್ತಿರುವ ಮಳೆಗೆ ಭತ್ತ ನೆಲಕುರುಳಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಭತ್ತ ಬೆಳೆಯಲು ರೈತರು ಎಕರೆಗೆ 25-30 ಸಾವಿರ ರೂ.ಖರ್ಚು ಮಾಡುತ್ತಿದ್ದಾರೆ. ಆದರೆ ಬೆಳೆದ ಬೆಳೆಗೆ ಅತ್ತ ಬೆಲೆ ಇಲ್ಲ. ಇತ್ತ ಚಂಡ ಮಾರುತದಿಂದ ಬೆಳೆ ಹಾಳಾಗಿದ್ದು ರೈತರು ಬಹಳ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಹಗಲು ರಾತ್ರಿ ಜಿಟಿ ಜಿಟಿ ಸುರಿಯುತ್ತಿರುವ ಮಳೆ ಹಾಗೂ ಶೀತ ಗಾಳಿಯಿಂದಾಗಿ ಜನ ಜೀವನ ಕೂಡ ಅಸ್ತವ್ಯಸ್ತವಾಗಿದೆ.
ಕೂಡಲೇ ಅಧಿಕಾರಿಗಳು ಹಾಳದ ಭತ್ತವನ್ನು ವಿಕ್ಷಣೆ ಮಾಡಿ ರೈತರಿಗೆ ಆದ ಹಾನಿಯನ್ನು ಭರಿಸಬೇಕೆಂದು ರೈತರಾದ ವೆಂಕಟೇಶ್ವರ್ ರಾವ್, ಮಲ್ಲಿಕಾರ್ಜುನ, ಕಾಂತಣ್ಣ ಹಾಗೂ ಇತರರು ಒತ್ತಾಯಿಸಿದ್ದಾರೆ.

 

Don`t copy text!