e-ಸುದ್ದಿ, ಮಸ್ಕಿ
ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ನಡೆಸಲಾದ ಸಂಗೀತೋತ್ಸವ GRAND FINALE ಕಾರ್ಯಕ್ರಮವು ದಿನಾಂಕ ಶುಕ್ರವಾರ ಸಂಜೆ 6 ಗಂಟೆಗೆ ಮಸ್ಕಿಯ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ಮಹಾದೇವಪ್ಪಗೌಡ ಪಾಟೀಲ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪಿ.ಎಸ್.ಐ ಸಣ್ಣ ಈರೇಶ ಮಾತನಾಡಿ ಅಭಿನಂದನ್ ಸಂಸ್ಥೆಯು ಸಾಮಾಜಿಕ ಕಳಕಳಿ ಹೊಂದಿದ್ದು, ರಾಮಣ್ಣ ಹಂಪರಗುಂದಿಯವರ ನಿರಂತರ ಪರಿಶ್ರಮದಿಂದ ಈ ಭಾಗದ ಪ್ರತಿಭೆಗಳಿಗೆ ಸಂಜೀವಿನಿಯಾಗಿ ಹೊರಹೊಮ್ಮುತ್ತಿದ್ದಾರೆ ಎಂದರು. ನಂತರ ಪ್ರಸನ್ನ ಪಾಟೀಲ್ ಮಾತನಾಡಿ ಹೊಸತನ ನೀಡುವಲ್ಲಿ ರಾಮಣ್ಣ ಹಂಪರಗುಂದಿ ಅವರು ಮುಂದಾಗಿದ್ದು ಅವರಿಗೆ ಮಸ್ಕಿಯ ಜನತೆಯು ಸಹಕಾರ ನೀಡಬೇಕು ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ ಒಟ್ಟು 104 ಸ್ಪರ್ಧಾರ್ಥಿಗಳಲ್ಲಿ GRAND FINALE ಗೆ 21 ಸ್ಪರ್ಧಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು.
GRAND FINALE ಯಲ್ಲಿ ಪ್ರಥಮ ಸ್ಥಾನವನ್ನು ಪ್ರಿಯದರ್ಶಿನಿ ಗಂಗಾವತಿ ಹಾಗೂ ದ್ವಿತೀಯ ಸ್ಥಾನವನ್ನು ಕಾವೇರಿ ಹುಬ್ಬಳ್ಳಿ ಅವರು ಪಡೆದುಕೊಂಡರೆ, ತೃತೀಯ ಸ್ಥಾನವನ್ನು ಮಲ್ಲಿಕಾರ್ಜುನ ಕೊಪ್ಪಳ ಮತ್ತು ಸುಜಾತ ಸಿರವಾರ ಅವರು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪ್ರಕಾಶ ದಾರಿವಾಲ್, ಅಪ್ಪಾಜಿಗೌಡ, ತಾಲ್ಲೂಕು ಪಂಚಾಯತ ಅಧ್ಯಕ್ಷರಾದ ಶಿವಣ್ಣ ನಾಯಕ, ಡಾ.ನಾಗನೌಡ ಬಿ ಪಾಟೀಲ್, ಪುರಸಭೆ ಉಪಾಧ್ಯಕ್ಷರಾದ ಕವಿತಾ ಮಾಟೂರ್, ಪುರಸಭಾ ಸದಸ್ಯರಾದ ಪುಷ್ಪಾವತಿ ಸೊಪ್ಪಿಮಠ, ಮೌನೇಶ ನಾಯಕ, ಮಲ್ಲಯ್ಯ ಬಳ್ಳಾ, ಧರ್ಮ ಗುರುಗಳಾದ ಜಿಲಾನಿ ಖಾಜಿ, ಅಭಿಜಿತ್ ಪಾಟೀಲ್, ಸರಿಗಮಪ ಖ್ಯಾತಿಯ ಅಕ್ಷತಾ ಎಸ್ ಕಾಳಹಸ್ತಿಮಠ, ಬಸವಾಜ ಗಸ್ತಿ, ರಾಘವೇಂದ್ರ ಬದಿ ಸಿಂದನೂರು, ಭಕ್ಷಿ ದರ್ವೇಸ್ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಅಮರಪ್ಪ ಹಂಪರಗುಂದಿ, ಕಾರ್ಯದರ್ಶಿಗಳಾದ ರಾಮಣ್ಣ ಹಂಪರಗುಂದಿ ಭಾಗವಹಿಸಿದ್ದರು.