ಹರಿದಾಸರ ಪರಿಯಿದು
ಹರಿದಾಸರ ಭಜನೆ
ಹರಿದಾಸರ ಕೀರ್ತನೆ
ರಂಗು ರಂಗೇರಿದೆ ಇಂದು.
ಕುಣಿಯುವರು ಗೆಜ್ಜೆ ಕಟ್ಟಿ
ಹಾಡುವರು ಚಿಪ್ಪಾಳೆ ತಟ್ಟಿ
ನರ್ತಿಸುವರು ತಂಬೂರಿ ಮೀಟಿ.
ಹರಿಗಾನದಲಿ ಪೂರ್ಣ ಮೈ
ಮರೆಸುತ
ಹರಿಕಥೆಯ ಸುಧೆಯ ಪಾನ
ಮಾಡಿಸುತ
ತನ್ಮಯ ರಾಗುತ ತನ್ಮಯ
ರಾಗಿಸುತ.
ಭಕ್ತ ವೃಂದವ ಸುರಲೋಕಕೆ
ಒಯ್ಯುತ
ಲೌಕಿಕ ಕರ್ಮಗಳನೆಲ್ಲ ಮನದಿಂದ ಮರೆಸುತ
ಕಣ್ಮುಚ್ಚಿ ಕಣ್ಮುಚ್ಚಿ ಭಕ್ತಿಯಲಿ
ರೋಮಾಂಚನಗೊಳಿಸುತ.
ಶ್ರೀ ಪಾಂಡುರಂಗನ ಪಾದಗಳಲಿ
ವಂದಿಸುತ
ತಂದೆ ಶ್ರೀ ಕೃಷ್ಣನಲಿ ಸಿಲುಕಿ
ಒಂದಾಗುತ ಒಂದಾಗಿಸುತ.
–ಕೃಷ್ಣ ಬೀಡಕರ.. ವಿಜಯಪುರ.
ಹರೇ ಕೃಷ್ಣ
ಹರೇ ಕೃಷ್ಣ