😓 *ಬಳಲುತ್ತಿದೆ ಭೂಮಿ* 😓
ಉರಿ ಬಿಸಿಲ ತಾಪವ ಸಹಿಸದೆ
ಕಾದ ಹಂಚಿನಂತಾಗಿದೆ ಅವನಿಯ ಒಡಲು
ಧರೆಯ ನೀರೆಲ್ಲಾ ಬಸವಳಿದು ಬತ್ತಿ
ಬಿರುಕು ಬಿಟ್ಟು ಬಳಲುತ್ತಿದೆ ಭೂಮಿ…
ನೆತ್ತಿ ಸುಡುವ ಬಿಸಿಲಿಗೆ ಕಂಗಾಲಾದ ರೈತ
ಹಿಡಿ ಕಾಳಿಗಾಗಿ ಒಡಲ ತುಂಬಿಸಲು
ನೀರಿಗಾಗಿ ಭೂತಾಯಿಯ ಉದರವ ಸೀಳಿ, ಸೀಳಿ
ಜಲವೇ ಸಿಗದೆ ಬಳಲುತ್ತಿದೆ ಭೂಮಿ…
ಸಾವಿಗೆ ಸೆಡ್ಡು ಹೊಡೆದ ಮಾನವ
ಎಲ್ಲರ ಬಳಿ ಕುರುಡು ಕಾಂಚಾಣ
ಪರಿಣಾಮ ಜನಸಂಖ್ಯೆಯ ಆಸ್ಫೋಟ
ಹೊರಲಾರದ ಭಾರಕ್ಕೆ ಬಳಲುತ್ತಿದೆ ಭೂಮಿ…
ಮಾನವನ ದುಷ್ಕೃತ್ಯಕ್ಕೆ ಮಾಯವಾಗಿದೆ ಹಸಿರು
ದ್ವೇಷ, ಅಸೂಯೆ ಕೊಲೆ, ಸುಲಿಗೆ
ಹಸಿಮಾಂಸ ಕುಕ್ಕುವ ರಣಹದ್ದುಗಳು
ಪ್ರಾಣಿಬಲಿಗೆ ಹರಿಯುತ್ತಿದೆ ನೆತ್ತರು
ಪಾಪದ ಕೊಡ ತುಂಬಿ ಬಳಲುತ್ತಿದೆ ಭೂಮಿ…
–ಗೀತಾ.ಜಿ.ಎಸ್
ಹರಮಘಟ್ಟ.ಶಿವಮೊಗ್ಗ
Good Expression Madam