ಮಕ್ಕಳಿರಲೆವ್ವ ಮನೆ ತುಂಬ
ಮಕ್ಕಳು ಮನೆಗೆ
ಚೆಂದ ಅಂದ !
ಹೆತ್ತವರಿಗೆ
ಕಣ್ತುಂಬ ಆನಂದ !!
ಮಕ್ಕಳೇ
ಮನೆಯ ಆಸ್ತಿ !
ಉಳಿದಿದ್ದೆಲ್ಲವೂ
ಬರೀ ನಾಸ್ತಿ !!
ಮಕ್ಕಳು
ದೇವರ ರೂಪ !
ಮನೆಮನೆಗೆ
ಅವರೇ ನಂದಾದೀಪ !!
ಮಕ್ಕಳಿಲ್ಲದ
ಮನೆ ಮಸಣ !
ತಂದೆ ತಾಯಿಗಳಿಗೆ
ಎಂಥಾ ಬೇಸರ ಅನುದಿನ !!
ಕಲ್ಮಶವಿಲ್ಲದ ಮಗು
ಭಗವಾನ್ ಬುದ್ಧ !
ದೇವಾನುದೇವತೆಗಳ
ಆಶೀರ್ವಾದ ಶತಸಿದ್ಧ !!
ಪ್ರೋ. ಶ್ರೀ ಸಾವಳಸಂಗರವರು ವಾಸ್ತವದ ಅರಿವು ಮೂಡಿಸುವ, ಸಮಾಜಮುಖಿ ಚಿಂತನೆಯ ಮೂಸೆಯಲ್ಲಿ ಮೂಡಿದ ಹನಿಗವನಗಳನ್ನು ಬರೆಯುತ್ತಾರೆ. ಅವರ ಲೇಖನಿಯಿಂದ ಇನ್ನೂ ಹೆಚ್ಚಿನ ಕವನಗಳು ಹೊರಬರಲಿ.
ಎಸ್ ಆರ್ ಬಿರಾದಾರ ಭೌತಶಾಸ್ತ್ರ ಉಪನ್ಯಾಸಕರು ಬಾಲಿಕೆಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಜಯಪುರ