ಬದುಕು ಭಾರವಲ್ಲ 2
ಋಣಾತ್ಮಕ ವಿಚಾರಗಳನ್ನು ತಲೆಯಿಂದ ಹೊರ ಹಾಕಬೇಕು.
ಪ್ರತಿಯೊಬ್ಬರಲ್ಲೂ ಋಣಾತ್ಮಕ ವಿಚಾರಗಳು ಇದ್ದೇ ಇರುತ್ತವೆ ಅಂತಹ ಋಣಾತ್ಮಕ ವಿಚಾರಗಳನ್ನು ನಮ್ಮ ತಲೆಯಿಂದ ತೆಗೆದುಹಾಬೇಕು
ಕೊಟ್ಟ ಕೆಲಸ ಪೂರೈಸುವ ಮುಂಚೆಯೇ ಅದು ನನ್ನಿಂದ ಆಗುವುದೇ ? ಆಗದಿದ್ದರೆ ಅವರು ಎನಾದರೂ ಅನ್ನುವರೇ? ನಾನು ಸೋತರೇ ? ನಾನು ಫೇಲಾದರೆ ? ಅವರು ಹೊಡೆದರೆ ? ಅವರು ಬೈದರೇ ? ಹೀಗೆ ನಾನಾ ರೀತಿಯಿಂದ ಮನದಲ್ಲಿ ಗೊಂದಲ ಉಂಟಾದರೆ ಆಗುವ ಕೆಲಸಗಳು ಕೂಡಾ ಸರಿಯಾಗಿ ಆಗುವುದಿಲ್ಲ.
ಮಾಡುವ ಕೆಲಸಗಳು ನಿಂತು ಹೋದಾಗ ಬದುಕು ಬೇಸರಾಗಿ ಹೋಗುತ್ತದೆ.
ಹಿರಿಯರು ಈ ಬದುಕು ಬಾಳ ಬ್ಯಾಸರ್ ಆಗೈತಿ ಸಾಕಾಗಿ ಹೋಗೈತಿ ಅಂತಾ ಮಾತನಾಡುವವರನ್ನು ನಾವೆಲ್ಲ ಕೇಳಿದ್ದೇವೆ.
ಬದುಕು ಬೇಸರ ಅಲ್ಲವೇ ಅಲ್ಲ . ನಾವು ಬದುಕುವ ಕಲೆ ತಪ್ಪು .ಋಣಾತ್ಮಕ ವಿಚಾರಗಳನ್ನು ನಮ್ಮ ಮನಸ್ಸಿನಿಂದ ತೆಗೆದುಹಾಕಲೇಬೇಕು.
ಎಲ್ಲ ಕೆಲಸಗಳು ನನ್ನಿಂದ ಸಾಧ್ಯ;-
ಯಾವ ಕೆಲಸ ಕೊಟ್ಟರೂ ಮಾಡೇ ಮಾಡುತ್ತೇನೆ ಎನ್ನುವ ಧೃಢ ಸಂಕಲ್ಪ ಇಟ್ಟುಕೊಂಡಿರಬೇಕು. ಈಜಗತ್ತಿನಲ್ಲಿ ಮೂರು ವರ್ಗದ ಜನ ಇರುವರು
ಆಗುವುದು ಅನ್ನುವರು_ಎಲ್ಲವನ್ನೂ ಸಾಧಿಸುವರು .
ಆಗುವುದಿಲ್ಲ -ಎನ್ನುವರು _ಎಲ್ಲವನ್ನೂ ವಿರೋಧಿಸುವರು. ಆಗಲಾರದು -ಎನ್ನುವರು ಪ್ರತಿಯೊಂದರಲ್ಲಿಯೂ ಸೋಲುತ್ತಾರೆ .
ಯಾವುದೇ ಕೆಲಸ ಇದ್ದರೂ ಮಾಡುವ ಮನಸ್ಸು ಇರಬೇಕು .
ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ಶ್ರದ್ಧಾಭಕ್ತಿ ಯಿಂದ ಮಾಡಿದಾಗ ದೇವರು ಮೆಚ್ಚೆ ಮೆಚ್ಚುವನು .
ದೇವರು ಮೆಚ್ಚುವ ನೆಪದಲ್ಲಿ ಆಡಂಭರ ಆಡಂಭರತೆ ಇರಬಾರದು.
ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿ ಮುಗಿಸುವ ಕೆಚ್ಚೆದೆ ಇರಬೇಕು ಅನೀತಿ ಅನ್ಯಾಯ ಅಸಂಪಾದನೆ ಇರಬಾರದು
ಅತಿಯಾದ ಸಂಪಾದನೆ ಅನಾಹುತಕ್ಕೆ ಹಾದಿಯಾಗಬಾರದು. ಇದ್ದ ಸಂಪಾದನೆಯಲ್ಲಿ ಜೀವನ ನಡೆಸುವ ಜಾಣ್ಮೆ ಕಲೆಗಾರಿಕೆ ಇರಬೇಕು.ನಮ್ಮ ಎದುರು ಮನೆಯವರು ಕಾರು ತೆಗೆದುಕೊಂಡರು .ಮನೆ ಕೊಂಡುಕೊಂಡರು. ಹೊಲ ಕೊಂಡುಕೊಂಡರು ಎಂದು ಆ ವಸ್ತು ಈ ವಸ್ತು ಕೊಂಡುಕೊಂಡು ದೊಡ್ಡಸ್ತಿಕೆಗಾಗಿ ಸಾಲ ಸೋಲ ಮಾಡಿ ಉಪಯೋಗಕ್ಕೆ ಬಂದರೂ ಸರಿ ಬಾರದಿದ್ದರೂ ಸರಿ ಕೊಂಡುಕೊಂಡು ಕೂಡಿಡಬಾರದು .
ಮಾಡಿದ ಸಾಲ ತೀರಿಸಲಾಗದೇ ಒದ್ದಾಡಿದಾಗ ಬದುಕು ಭಾರವಾಗುತ್ತದೆ ಬೇಸರವಾಗುತ್ತದೆ. ಜೀವನವೇ ಬೇಡ ಬದುಕುವುದೇ ಬೇಡ ಎನ್ನುವ ವಂತೆ ಆಗುತ್ತದೆ.
ಬೇಡ ನಮಗೆ ಭಾರವಾದ ಜೀವನ
ನಮಗೆ ನಾವೇ ಮಾಡಿಕೊಂಡ ಭಾರ
ತುಸು ಇಳಿಸಿಕೊಂಡು ಸುಂದರ ದಿನಗಳಿಗಾಗಿ ನೆಮ್ಮದಿಯಿಂದ ಜೀವನ ಸಾಗಿಸೋಣ…….
ಮುಂದುವರೆಯುತ್ತದೆ