ಇಳೆ – ಮಳೆ.
ಕಸು ಬಿಟ್ಟ, ಇಳೆಗೆ
ಕಸುವಿಟ್ಟ , ಮಳೆ ತಾನು
ಹಸಿರುಟ್ಟು, ಮೆರೆಯೆಂದು
ಧರೆಗೆ ತಾ , ಸುರಿದು
ಒಣಗಿದ ಹೂಬಳ್ಳಿ
ಗಿಡಮರಗಳಿಗೆಲ್ಲ
ಜೀವನದ ಆಸರೆಯ
ಚಿಗುರಿಸಿತು ಇಂದು
ಸಮಯ ಸಮಯದಿ
ವನಸಿರಿಯು ಹಸಿರಾಗಿ
ಹಸಿರು ಸೀರೆಯನುಟ್ಟು
ಇಳೆಯ ಬೆಳೆ ಸಿರಿಗೆ
ಇಂಬುಗೊಟ್ಟು
ಇಳೆಗೆ ಆಧಾರ ಇದು
ಜೀವಿತದ ಕ್ಷಣ ಕ್ಷಣವು
ಜೀವನದಿ ಕಂಗೊಳಿಸಿ
ಬೆಳೆಯಲೆಂದು
–ಕೃಷ್ಣ ಬೀಡಕರ.ವಿಜಯಪುರ
ಮೋ. 9972087473