ನಂಬಿಕೆಯೇ ಮುಖ್ಯ

ಬದುಕು ಭಾರವಲ್ಲ 3

ನಂಬಿಕೆಯೇ ಮುಖ್ಯ

ಬದುಕು ಭಾರವಲ್ಲ. ಸಮಾಜದಲ್ಲಿ ಪ್ರತಿ ಜೀವಿಯೂ ಇನ್ನೊಂದು ಜೀವಿಯ ಮೇಲೆ ನಂಬಿಕೆ.ವಿಶ್ವಾಸವನ್ನು ಇಟ್ಟಿರುತ್ತದೆ ಅದು ಪ್ರಾಣಿಯೇ ಆಗಿರಬಹುದು ,ಪಕ್ಷಿಯೇ ಆಗಿರಬಹುದು ಅಥವಾ ಮಾನವನೇ ಆಗಿರಬಹುದು.ಪ್ರಾಣಿ ಪಕ್ಷಿಗಳು ಸಾಕಿದ ಒಡೆಯನ ಮೇಲೆ ಅತ್ಯಂತ ವಿಶ್ವಾಸ ನಂಬಿಕೆಯನ್ನು ಇಟ್ಟಿರುತ್ತವೆ. ಇವತ್ತು ಒಡೆಯ ಬಂದು ನನಗೆ ನೀರು ಆಹಾರ ಕೊಡುವನು ಎನ್ನುವ ವಿಶ್ವಾಸದಿಂದ ಇರುತ್ತದೆ ಮಗು ತಾಯಿಯ ಮೇಲೆ ,
ಗಂಡ ಹೆಂಡತಿಯ ಮೇಲೆ, ಹೆಂಡತಿ ಗಂಡನ ಮೇಲೆ ,ತಂದೆ ತಾಯಿ ಮಕ್ಕಳ ಮೇಲೆ ,ಮಕ್ಕಳು ತಾಯಿ ತಂದೆಯ ಮೇಲೆ ,ಗುರುಗಳು ತಮ್ಮ ಶಿಷ್ಯರ ಮೇಲೆ, ಶಿಷ್ಯರು ತಮ್ಮ ಗುರುಗಳ ಮೇಲೆ ,ಸ್ನೇಹಿತರು ತಮ್ಮ ಸ್ನೇಹಿತರ ಮೇಲೆ ರೋಗಿ ವೈದ್ಯನ ಮೇಲೆ ಹೀಗೆ ಸಮಾಜದಲ್ಲಿ ಪರಸ್ಪರ ನಂಬಿಕೆ ವಿಶ್ವಾಸವಿಟ್ಟು ಬದುಕು ನಡೆಸಬೇಕಾಗುತ್ತದೆ.
ಯಾವ ವ್ಯಕ್ತಿಯು ಮತ್ತೊಬ್ಬರ ಮೇಲೆ ನಂಬಿಕೆ ವಿಶ್ವಾಸ ಇಡುವುದಿಲ್ಲವೋ ಸದಾ ಸಂಶಯ ದಿಂದ ನೋಡಿದಾಗ ಬದುಕು ಬೇಸರ ಆಗುತ್ತದೆ ಜೀವನ ಭಾರವಾಗುತ್ತದೆ
ಮನುಷ್ಯ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ಅಷ್ಟೇ ಮುಖ್ಯ. ಯಾವ ವ್ಯಕ್ತಿ ಒಮ್ಮೆ ನಂಬಿಕೆಯನ್ನು ಕಳೆದುಕೊಳ್ಳುವ ಕೆಲಸ ಮಾಡುತ್ತಾನೆಯೋ ಕೊನೆಯವರೆಗೂ ಆ ವ್ಯಕ್ತಿಯನ್ನು ನಂಬಲು ಅನುಮಾನ ಉಂಟಾಗುತ್ತದೆ .ಕೆಲವೊಮ್ಮೆ ಕೆಲವು ಸಂಗತಿಗಳಲ್ಲಿ ಮನುಷ್ಯನ ನಂಬಿಕೆಯನ್ನು ಪರೀಕ್ಷಿಸಿ ನೋಡುತ್ತಾರೆ .

ಹೊಸದಾಗಿ ನಾನು ಗಂಡನ ಮನೆಗೆ ಹೋದಾಗ ಗಂಡನ ಮನೆಯವರು ನನ್ನನ್ನು ಪರೀಕ್ಷಿಸುತ್ತಾರೆ ಎನ್ನುವ ವಿಚಾರ ನನಗೆ ಗೊತ್ತಿರಲಿಲ್ಲ.
ನಮ್ಮ ಮಾವನವರು ಅಂದರೆ ನಮ್ಮ ಯಜಮಾನರ ತಂದೆಯವರು ನನ್ನನ್ನು ಪರೀಕ್ಷಿಸಲು ಪ್ರೀಜ್ ಮೇಲೆ ಹಣ ಇಟ್ಟಿದ್ದರು ನಾನು ಪ್ರೀಜ್ ತೆಗೆಯಲು ಹೋಗಿ ಇಟ್ಟ ಹಣವೆಲ್ಲ ಕೆಳಗೆ ಬಿದ್ದವು. ಹಣ ಬಿದ್ದಾಗ ಮನೆಯಲ್ಲಿ ಯಾರೂ ಇರಲಿಲ್ಲ. ನಾನು ಎತ್ತಿಕೊಂಡು ಪುನಃ ಯಾವ ಸ್ಥಳದಲ್ಲಿ ಹೇಗಿತ್ತೋ ಹಾಗೇ ಎತ್ತಿ ಇಟ್ಟೆ .
ಮತ್ತೊಂದು ಸಲ ನಮ್ಮ ಯಜಮಾನರ ತಮ್ಮ ನ ಹೆಂಡತಿಯು ಅಂದರೆ ನನಗೆ ನೆಗೆನ್ನಿ ಆಗಬೇಕು.ಅವಳ
ಬಂಗಾರದ ನೆಕ್ಲೇಸ್ ವು ಬ್ಯಾಗಿನಿಂದ ಯಾವಾಗ ಬಿದ್ದಿತ್ತೋ ನನಗೆ ಗೊತ್ತಿಲ್ಲ ನಾವು ಓಡಾಡುವ ಜಾಗ ಮನೆಯಲ್ಲಿಯೇ ಹಾಗೇ ಬಿದ್ದಿತ್ತು .ನಾನು ಬೈದು ಸರಿಯಾಗಿ ಇಟ್ಟು ಕೊಳ್ಳಬಾರದಾ? ಬಂಗಾರವನ್ನು ಕಾಲಲ್ಲಿ ಎಷ್ಟು ಬೇಜವಾಬ್ದಾರಿ ಸೀಮಾ ಎಂದು ಹಾಗೇ ಎತ್ತುಕೊಟ್ಟೆ.
ಅಷ್ಟೇ ಅಲ್ಲದೇ ನನ್ನ ಅಂಟಿ ಅಂದರೆ ನಮ್ಮ ಯಜಮಾನರ ಅಕ್ಕನವರ ಮನೆಗೆ ಕರೆದುಕೊಂಡು ಹೋಗಿದ್ದರು ಹಾಗೇ ಸೋಪಾದ ಮೇಲೆ ಬಂಗಾರದ ಉಂಗುರ ಹಾಗೂ ಕೊರಳು ಸರ ವನ್ನು ಹಾಗೇ ಇಟ್ಟಿದ್ದರು .ನಮ್ಮ ಮೇಲೆ ಇಟ್ಟ ವಿಶ್ವಾಸ ವನ್ನು ನಾವು ಎಲ್ಲೇ ಹೋದರೂ ಉಳಿಸಿಕೊಳ್ಳುವ ಹಾಗೆ ಇರಬೇಕು.
ಇದಷ್ಟೇ ಅಲ್ಲ ಅನೇಕ ವಿಚಾರದಲ್ಲಿ ಅನೇಕ ಸಂಗತಿಗಳಲ್ಲಿ ಅನೇಕ ಕೆಲಸಲ್ಲಿ ನಮ್ಮ ನಂಬಿಕೆ ಹಾಗೂ ವಿಶ್ವಾಸವನ್ನು ಉಳಿಸಿಕೊಳ್ಳುವ ಗಳಿಸಿಕೊಳ್ಳುವ ಕೆಲಸ ಕಾರ್ಯವನ್ನು ಮಾಡುತ್ತ ಹೋಗಬೇಕು.
ಅಪತ್ಕಾಲ ದಲ್ಲಿ ಇನ್ನೊಬ್ಬರಿಗೆ ನೆರವಾಗಬೇಕು. ಸಹಾಯ ಸಹಕಾರ ಮಾಡಿ ನಂಬಿಕೆಯನ್ನು ಉಳಿಸಿ ಗಳಿಸಿಕೊಳ್ಳುತ್ತ ಸಾಗಬೇಕು.
ವಿಶ್ವಾಸದಿಂದ ಕೊಟ್ಟ ಕೆಲಸವನ್ನು ವಿಶ್ವಾಸದಿಂದ ಮಾಡಿ ಮುಗಿಸಬೇಕು
ಈ ಜಗತ್ತು ನಿಂತಿರುವುದೇ ನಂಬಿಕೆ ಹಾಗೂ ವಿಶ್ವಾಸದ ಮೇಲೆ ಇವಾಗಿನ ಪ್ರಸ್ತುತ ಸಂದರ್ಭದಲ್ಲಿ ವಿಶ್ವಾಸ ನಂಬಿಕೆ ಕಡಿಮೆ ಆಗುತ್ತ ಬರುತ್ತಿದೆ .ವಿಶ್ವಾಸ ನಂಬಿಕೆಗೆ ಬೆಲೆ ಇಲ್ಲವಾಗಿದೆ.ತಮ್ಮ ಮೇಲೆ ತಮಗೆ ವಿಶ್ವಾಸ ನಂಬಿಕೆ ಇಲ್ಲದ ಹಾಗೆ ಆಗಿದೆ .ಯಾರು ಬದುಕಿನಲ್ಲಿ ವಿಶ್ವಾಸ ನಂಬಿಕೆಯನ್ನು ಕಳೆದುಕೊಂಡಿರುತ್ತಾರೆಯೋ ಅವರಿಗೆ ಬದುಕು ಭಾರವಾಗುತ್ತದೆ.
ಭಾರವಾದ ಮನಸ್ಸನ್ನು ನಂಬಿಕೆ ವಿಶ್ವಾಸ ದಿಂದ ಮುನ್ನ ಡೆಯಿಸಿಕೊಂಡು ಸಾಗೋಣ.
ವಿಶ್ವಾಸವನ್ನು ಗಳಿಸೋಣ
ಗಳಿಸಿದ ವಿಶ್ವಾಸವನ್ನು ಉಳಿಸಿಕೊಂಡು ಹೋದಾಗ ಬದುಕು ಭಾರವಾಗಲಾರದು ಅಲ್ಲವೇ ?

—–ಮುಂದುವರೆಯುತ್ತದೆ.

ಡಾ .ಸಾವಿತ್ರಿ ಮ ಕಮಲಾಪೂರ

Don`t copy text!