ನಬೀ ಸಂತ ಸೂಫಿ
ನಬೀ ಜನುಮ ದಿನ ತಂದಿದೆ ಹರುಷ
ನಗು ನಗುತಾ ಬಾಳು ನೀನು ಶತವರುಷ ಜೊತೆಯಲಿ ಇರಲು ನಿಶ್ಯಬ್ಧ ಸಿರಿರಾಶಿ
ತಂದಿದೆ ಸ್ವಗ೯ವ ಇಲ್ಲಿಯೇ ಈ ವರುಷ !
ಸುಂದರ ಕ್ಷಣಗಳು ತುಂಬಿ ಬಂದಿವೆ
ಇಂದಿನ ಈ ಶುಭ್ರ ಬೆಳ್ಳಕ್ಕಿ ಗಳಿಗೆಯಲಿ
ಸಂಭ್ರಮ ತುಂಬಿದೆ ಸಾಹಿತ್ಯಲೋಕದಲಿ
ಗಜಲ್ ರುಬಾಯಿ ಕಾವ್ಯಾರಾಧನೆಯಲಿ!
ಶುಭವಾಗಲಿ ಎಲ್ಲ ಸಂತೋಷ ನೀಡಿ
ನೀ ಜಗದ ತಾರೆಯಾಗು ಸೂಫಿಸಂತ
ಅದ ಕಂಡು ಹೃದಯ ಪಿಸು ಮಾತಾಡುತ
ಕವಿ ಕಾವ್ಯ ಗುಚ್ಛ ಗುಲ್ಮೋಹರಾದೀತು!
ದೇವರೊಲುಮೆ ನಿನ್ನ ಮೇಲಿರಲಿ ಸದಾ
ಅಲ್ಲಾಹು ಕರುಣಿಸಿ ಕನಸು ನನಸಾಗಲಿ
ಜಾಲವಾದಿ ಕಾವ್ಯದ ರಂಗೋಲಿ ಹರಡಿ ಮಮಕಾರದ ಬೆಳದಿಂಗಳ ಮಂದಹಾಸ
ಜೊತೆ ಜೊತೆ ಸಂತಸ ಅರಳುವ ಸಮಯ
ಮುಪ್ಪುರಿ ಗುರುಬಸವ ಶಾ ಮದಾರಿಯಾ
ಓ ಸುರಭಿ ಸುಹಾಸ ಆಧ್ಯಾತ್ಮದ ಶಿಖರವೇ!
.ಶ್ರೀನಿವಾಸ ಜಾಲವಾದಿ
ಸುರಪುರ