ದ್ವಿತೀಯ ಪಿಯುಸಿಯಲ್ಲಿ ಸಾಧನೈಗೈದ ವಿದ್ಯಾರ್ಥಿಗಳಿಗೆ ಸ್ಪಂದನಾ ಕಾಲೇಜ್‌ನಲ್ಲಿ ಸತ್ಕಾರ….
e-ಸುದ್ದಿ ಇಳಕಲ್
ಇಳಕಲ್ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸ್ಪಂದನಾ ಕಾಲೇಜ್ ನಲ್ಲಿ ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಕಾಲೇಜ್ ನ ವತಿಯಿಂದ ಸತ್ಕರಿಸಲಾಯಿತು.
ಸನ್ಮಾನ ಕಾರ್ಯಕ್ರಮದ ಕುರಿತು ಮಾತನಾಡಿದ ಉಪನ್ಯಾಸಕರಾದ ವಿರೇಶ ಗುರುಗಳು ಮಾತಾನಾಡುತ್ತಾ ನಮ್ಮ ಸ್ಪಂದನಾ ಕಾಲೇಜ್ ನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಅವಳಿ ತಾಲೂಕಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ಮೂಲಕ ನಮ್ಮ ಸ್ಪಂದನಾ ಕಾಲೇಜಿನ ಸಾಧನೆ ಎಂದರು.
ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ 10 ವಿದ್ಯಾರ್ಥಿಗಳಿಗೆ ಕಾಲೇಜ್ ವತಿಯಿಂದ ಸತ್ಕರಿಸಿದರು.
ಸಾಧನೆಗೈದ ವಿದ್ಯಾರ್ಥಿನಿಯರು ಮಾತಾನಾಡಿ ನನ್ನ ಈ ಸಾಧನೆಗೆ ನಮ್ಮ ತಂದೆ ತಾಯಿಯೇ ಕಾರಣ.ಅದೇ ರೀತಿ ಕಾಲೇಜನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಜಿಲ್ಲೆಗೆ ರ್ಯಾಂಕ್ ಮಾಡುವ ಮೂಲಕ ಉತ್ತಮ ರೀತಿಯಲ್ಲಿ ನಮಗೆ ಕಲಿಸಿದ್ದಾರೆ.ಹಿಗಾಗಿ ಉತ್ತಮ ರೀತಿಯಲ್ಲಿ ಸ್ಕೋರ್ ಮಾಡಲು ಅನುಕೂಲವಾಯಿತು ಎಂದರು.
ಈ ಸಂದರ್ಭದಲ್ಲಿ ಸ್ಪಂದನಾ ಕಾಲೇಜ್ ನ ಪ್ರಾಂಶುಪಾಲರಾದ ಅಮರೇಶ ಕೌದಿ,ವಿರೇಶ ಸರ್,ಅರಿಸಿದ್ದಿ ಸರ್ ಹಾಗೂ ಮುಂತಾದ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ