ಸ್ನೇಹ ಸಂಬಂಧ

ಬದುಕು ಭಾರವಲ್ಲ 7

ಸ್ನೇಹ ಸಂಬಂಧ

ನಿನ್ನೆಯ ದಿವಸ ಸ್ನೇಹದ ಬಗ್ಗೆ ಹೇಳುವಾಗ ಬಾಲ್ಯದ ಘಟನೆಗಳನ್ನು ನಾವು ನೆನಪಿಸಿಕೊಂಡಾಗ ನಾವು ಹಾಗೆ ಇದ್ದೇವು ಹೀಗೆ ಇದ್ದೇವು. ಎಂದು ನಮ್ಮ ನಮ್ಮ ಮಕ್ಕಳಿಗೆ ಹೇಳಿದಾಗ ಮಮ್ಮಿ ಇದು ಇವತ್ತಿನ ಕಾಲ ನಿಮ್ಮ ಕಾಲ ಅಲ್ಲ ಅವಾಗೆಲ್ಲಿ ಇದ್ದವು ಕಂಪ್ಯೂಟರ್ ಮೊಬೈಲ್  ನಿಜ.

ನಿಜಕ್ಕೂ ಸತ್ಯ ಚಿನ್ನು ಅವಾಗ ಅವರವರ ಸಂಬಂಧಿಕರ ಮನೆಗೆ .ಸ್ನೇಹಿತರ ಮನೆಗೆ ಹೋಗಿ ಬೆರೆತು ಭಾರವಾದ ಬದುಕನ್ನು ಹಗುರ ಗೊಳಿಸಿಕೊಳ್ಳುತ್ತಿದ್ದರು. ಇವಾಗ ಮೊಬೈಲ್ ನ ನಿಮಗ ಸ್ನೇಹಿತರ ಆಗಿ ಬಿಟ್ಟಾರ. ಅಲ್ಲವೇ ಹೌದು ಮಮ್ಮಿ ನಾವು ಮೊಬೈಲ್ನಲ್ಲಿ ಎಲ್ಲವನ್ನೂ ಎಲ್ಲರನ್ನೂ ಕಾಣುತ್ತೇವೆ ಅಂದಳು. ಒಂದೆರಡು ತಿಂಗಳು ಕಳೆದ ನಂತರ ನಾನು ಕಲಿತ ಹಳೇಯ ಬಾಲ್ಯದ ಸ್ನೇಹಿತೆ ಶಕುಂತಲಾ ಪೋನ್ ಮಾಡಿ ಲೇ ಸಾವಿತ್ರಿ ಸದು ಅಣ್ಣಾ ಪೋನ್ ಮಾಡಿದ್ದ ನಿನಗೂ ಹಚ್ಚುತ್ತೇನೆ ಅಂದಾ ಮುರಗೋಡದ ಮಹಾಂತಜ್ಜನ 75 ನೇ ವರ್ಷದ ಅಮೃತ ಮಹೋತ್ಸವ ಇದೆ ಅಂತ ಬಸವ ಪುರಾಣ ಹಚ್ಚಿದ್ದಾರು ಒಂದ್ಸಲ ಎಲ್ಲ ಗೆಳತಿಯರು ಸೇರೋಣ ಅಂತಾ ನಾನೂ ಕೂಡ ಅದನ್ನೇ ಯೋಚಿಸಿದೆ ಮೊನ್ನೆಯ ದಿನ ನೀಲಮ್ಮನ ಮನೆಗೆ ಹೋಗಿ ಬಂದೆವು ಅವಳು ಹೇಳಿದಳು. ಮಹಾನಂದಾ. ಕಸ್ತೂರಿ ಅವತ್ತು ನನಗೆ ಪೋನ್ ಮಾಡಿ ಲೇ 28 ನೇ ತಾರೀಖಿಗೆ ನಾವೆಲ್ಲರೂ ಸೇರೋಣ ಅಂತಾ .ನಮ್ಮ ಯೋಚನೆ ನಿಜವಾಯಿತು. ಸಂಸಾರ ನೌಕರಿ ಗಂಡ ಮನೆ ಮಕ್ಕಳು ಎಂದು ಭಾರವಾದ ಮನಸ್ಸಿಗೆ ನವ ಚೈತನ್ಯ ಮೂಡಿ ಬಂತು .

ತಾಯಿಲ್ಲದ ತವರೂರು ಎಲ್ಲರ ಅಕ್ಕರೆ ವಾವ್ ಎಲ್ಲಾ ಬಾಲ್ಯದ ಸ್ನೇಹಿತರು 30 ವರ್ಷದ ಹಿಂದಿನ ಮುಖ ಎಷ್ಟು ಖುಷಿ ನಿಜಕ್ಕೂ ಎಂತಹ ಆನಂದ ಗೆಳತಿ ನೀಲಮ್ಮನ ಮನೆಯು ಮಹಾಮನೆ ಎಲ್ಲರೂ ತಮ್ಮ ತಮ್ಮ ವಿಚಾರ ವಿನಿಮಯ ನಕ್ಕಿದ್ದೆ ನಕ್ಕಿದ್ದು ಸಹೋದರ ಬಾಲ್ಯದ ಗೆಳೆಯ ಮಹಾಂತೇಶನ ಮನೆ 12 ನೇ ಶತಮಾನಕ್ಕೆ ಕರೆದುಕೊಂಡು ಹೋಗಿತ್ತು ಸದಾನಂದ ಎಲ್ಲ ಸ್ನೇಹಿತರು /ಶ್ರೀ ನೀಲಕಂಠ ಸ್ವಾಮಿ ಯವರಿಂದ ಸತ್ಕಾರ ಡಾ ಸಾವಿತ್ರಿಯಾಗಿ ಕಳೆದ ಆ ಮಧುರ ದಿನ ಹೇಗೆ ಮರೆಯಲು ಸಾಧ್ಯ. ಧನ್ಯ ನಾವೆಲ್ಲ ಸ್ನೇಹಿತರು ಬಾಲ್ಯದ ನೆನಪಿನ ಚಿತ್ತಾರ ಕಷ್ಟ ಸುಖ ಸಂತೋಷ ಮಕ್ಕಳು ಮೊಮ್ಮಕ್ಕಳು ನಗುವಿನ ಉಯ್ಯಾಲೆ ಜೀಕಿದ ಹಾಗೆ ಭಾರವಾದ ಬದುಕು ಇಳಿದು ಹೋಯಿತು .

ಮತ್ತೆ ಮತ್ತೆ ಇಂತಹ ದಿನಗಳು ನಿಮ್ಮೆಲ್ಲರಿಗೆ ಬರಲಿ.ಹರಡಿಕೊಂಡ ನಿಮ್ಮ ನಿಮ್ಮ ಸ್ನೇಹದ ಬೇರು ಸುತ್ತೆಲ್ಲ ಪಸರಿಸಲಿ ಎನ್ನುವ ಹಿರಿಯರ ಹಾರೈಕೆ ಅದಕ್ಕೆ ಹೇಳುವುದು ಸ್ನೇಹಕ್ಕೆ ಬೆಲೆ ಕಟ್ಟಲಾಗದು .
ತವಿರಿಲ್ಲದವರಿಗೆ ತವರಾಗಿ ಅಣ್ಣ-ತಮ್ಮ ಇಲ್ಲದವರಿಗೆ ಅಣ್ಣ ತಮ್ಮರಾಗಿ ಅಕ್ಕ ತಂಗಿ ಇಲ್ಲದವರಿಗೆ ಅಕ್ಕ ತಂಗಿಯರಾಗಿ ಸ್ನೇಹ ಸಂಬಂಧವು ಕೃಷ್ಣ _ಸುಧಾಮರ ಸ್ನೇಹದ ಮೆಲಕು ನಮ್ಮೆಲ್ಲರಿಗೂ ಆಗೇ ಆಗುತ್ತದೆ .
ಕೂಡಿ ಕಲಿತು ಉಂಡು ತಿಂದು ಆಟ ಆಡಿ ಮನೆಯ ಸದಸ್ಯರಲ್ಲಿ ನಾವೂ ಒಬ್ಬರಾಗಿ ಬೆರೆತಾಗ ಉಂಟಾಗುವ ಮಧುರ ಸ್ನೇಹ ಸಂಬಂಧ ಅಗಲಿದಾಗ ಮರೆಯಲಾಗದ ದಿನಗಳು ಮನಕ್ಕೆ ಗಾಯವಾಗಿ ವಾಸಿಯಾಗದಿರುವಾಗ ಬದುಕು ಭಾರವಾಗುತ್ತದೆ ಬದುಕೇ ಬೇಡವೆನಿಸುತ್ತದೆ.
ಬೇಡವಾದ ಮತ್ತು ಭಾರವಾದ ಬದುಕಿಗೆ ಮತ್ತೆ ಸ್ನೇಹ ಸಂಬಂಧದ ತಂಪು ತಂಗಾಳಿ ಬೀಸಿದಂತೆ ಆಗುತ್ತದೆ.
ಬೆರೆತಸ್ನೇಹ ಸಂಬಂಧದಲ್ಲಿ ಬಿರುಗಾಳಿ ಬೀಸಬಾರದು.
ಸ್ನೇಹಕ್ಕೆ ಹುಳಿ ಹಿಂಡಬಾರದು. ತಮ್ಮ ಸ್ವಾರ್ಥ ಮನೋಭಾವದಿಂದ ಗೊತ್ತಿಲ್ಲದಂತೆ ನಟಿಸಿ ಬೆನ್ನಿಗೆ ಚೂರಿ ಚುಚ್ಚಬಾರದು.
ಸ್ನೇಹಿತರನ್ನು ಪದೇ ಪದೇ ಅವಮಾನಿಸಬಾರದು. ಅವಮಾನಕ್ಕೆ ಒಳಗಾದ ಸ್ನೇಹಿತರಿಗೆ ಬೆಂಬಲ ಕಟ್ಟಬೇಕೇ ವಿನಃ ತಿರು ತಿರುಚಿ ಮಾತನಾಡಬಾರದು.
ವ್ಯಂಗ್ಯ ನುಡಿ ಆಡಬಾರದು.
ಶಿಕ್ಷಣ ವಂತರಾದ ನಾವು ತಿಳುವಳಿಕೆ ಇಲ್ಲದ ಹಾಗೆ ವರ್ತಿಸಬಾರದು.
ಒಂಟಿಯನ್ನಾಗಿ ಮಾಡಿ ಅವಮಾನಿಸಬಾರದು.
ಬದುಕು ಸಾಗಿಸುವ ಈ ಬಂಡಿಗೆ ಸ್ನೇಹದ ಕೊಂಡಿ ಸದಾ ಬೆಸೆದುಕೊಂಡಂತೆ ಇರಬೇಕು .ಸಾಗುವ ಬಂಡಿ ಭಾರವಾಗಲಾರದು ಅಲ್ಲವೇ ?

ಮುಂದುವರಿಯುವುದು

-ಡಾ ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು
ಕರ್ನಾಟಕ ಪಬ್ಲಿಕ್ ಸ್ಕೂಲ್

Don`t copy text!