ಕಾವ್ಯ ಕನ್ನಿಕೆ

ಮೆಲ್ಲನೆ ಬಂದು ಕರವ ತೋರಿದೆ ಗೆಳತಿ
ಝಲ್ಲನೆ ಹೃದಯ ನವಿರಾಗಿ ನಲಿಯಿತು
ಸಂಜೆಯ ಹಾಡಿಗೆ ಹರುಷ ಕಡಲಾಯಿತು
ಕಾಮನಬಿಲ್ಲು ಒಲವ ಸುಧೆಯ ಸುರಿಸಿತು.

ಬಾಳ ಗೀತೆಗೆ ಮುನ್ನುಡಿ ಬರೆದಿದೆ
ಹಸೆಮಣೆ ಹೂವ ಚೆಲ್ಲುತ ಕರೆದಿದೆ
ಮಧುರವಿ ಮೈತ್ರಿ ಪಲ್ಲವಿ ಹಾಡುತಿದೆ
ಧರೆಯ ಸೌಂದರ್ಯ ಎರಕ ಹೊಯ್ದಿದೆ.

ನಳಿನ ತೋಳುಗಳ ಬಳಸುವಾಸೆ
ತಂಬೆಳಲ ತಂಪಲಿ ತೀರದ ದಾಹ
ಕೊರಳ ಕೊಂಕಿಸಿ ನಕ್ಕು ನಿಂತ ಪರಿಗೆ
ಮರುಳಾಗಿ ಮೈಮರೆತೆ ನಿನ್ನೊಲವಿಗೆ.

ಚಂದದಿ ಹಾರುವ ಹಕ್ಕಿಗಳೂ ನಾಚಿವೆ
ಅಂದದ ಅಪ್ಸರೆ ದಂತದ ಬೊಂಬೆ ಕಂಡು
ಇರುಳು ಸೆರಗು ಹಾಸಿ ಹಾರೈಸಿದೆ ಜೋಡಿಗೆ.
ಅಂಬರ ಚಪ್ಪರ ಹಾಕಿ ಸಂಭ್ರಮ ತಂದಿದೆ.

ಹೊಸ ಕಾವ್ಯ ಬರೆಯಲಿ ನವದಂಪತಿ
ನಂದನವಾಗಲಿ ಬದುಕು ಪ್ರತಿ ನಿಮಿಷ
ಪಲ್ಲಕ್ಕಿಯಲಿ ನಲಿದು ಬರಲಿ ನವವಧು
ಕನಸುಗಳೆಲ್ಲ ನನಸಾಗಿ ಮಡಿಲ ತುಂಬಲಿ

ಜಯಶ್ರೀ ಭ ಭಂಡಾರಿ
ಬಾದಾಮಿ.

Don`t copy text!