ಮಹತ್ವಾಕಾಂಕ್ಷೆ

ಬದುಕು ಭಾರವಲ್ಲ 8

ಮಹತ್ವಾಕಾಂಕ್ಷೆ

ಮಹತ್ವಾಕಾಂಕ್ಷೆಯೆಂದರೆ ಯಾರೂ ಮಾಡದ ಸಾಧನೆಯನ್ನು ಮಾಡುವುದು. ಅಂದರೆ ದೊಡ್ಡದಾದ ಆಸೆ.
ಪ್ರತಿ ವ್ಯಕ್ತಿಗಳಲ್ಲಿಯೂ ಒಂದೊಂದು ಹಿರಿದಾದ ಮಹತ್ವಾಕಾಂಕ್ಷೆ ಇದ್ದೇ ಇರುತ್ತದೆ.
ಮನದಲ್ಲಿ ಯಾರೂ ಮಾಡದ ಸಾಧನೆ ಮಾಡಬೇಕು.ಇಲ್ಲದಿದ್ದರೆ ಸಾಧನೆಯ ಸಮೀಪಕ್ಕಾದರೂ ನಾವು ಹೋಗಿ ಪ್ರಯತ್ನಶೀಲರಾಗುವ ತುಡಿತ ಮಿಡಿತ. ಇದ್ದೇ ಇರುತ್ತದೆ .ಈ ರೀತಿಯ ತುಡಿತ ಮಿಡಿತ ಇರುವವರು .ಯಾರಿಗಾಗಿಯೂ ಕಾಯುವುದಿಲ್ಲ .ತಮ್ಮ ಹಿರಿದಾದ ಆಸೆಯನ್ನು ಇಡೇರಿಸಿಕೊಳ್ಳುವರು.ವಿವಿಧ ಸಾಧನೆಯ ಮೂಲಕ ತಮ್ಮ ಹಿರಿದಾದ ಆಸೆಯನ್ನು ಈಡೇರಿಸಿಕೊಳ್ಳಲು ಹಗಲಿರುಳು ಆಲೋಚನೆಯೆಡೆಗೆ ತೊಡಗಿದಾಗ ಬದುಕು ಭಾರವಾಗುತ್ತದೆ .
ನೂರಾರು ಸಲ ದೊಡ್ಡ ಆಸೆಯನ್ನು ಇಡೇರಿಸಿಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ಪ್ರಯತ್ನ ತಪ್ಪಿದಾಗ ಮನಸ್ಸಿಗೆ ಬೇಸರ ಆಗಿ ಬಿಡುತ್ತದೆ.ಮರಳಿ ಯತ್ನವ ಮಾಡು ಎನ್ನುವಂತೆ ಮರಳಿ ಮರಳಿ ನಮ್ಮ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಮನಸ್ಸು ಹಾತೊರೆಯುತ್ತದೆ
ಸಣ್ಣ ಸಣ್ಣ ವ್ಯಕ್ತಿಗಳು ಸಣ್ಣ ಸಣ್ಣ ಆಸೆಯನ್ನು ಹೊಂದಿರುತ್ತಾರೆ ದೊಡ್ಡ ದೊಡ್ಡ ವ್ಯಕ್ತಿಗಳಲ್ಲಿ ದೊಡ್ಡದಾದ ಮಹತ್ವಾಕಾಂಕ್ಷೆ ಇರುವಂತೆ ಸಣ್ಣ ಸಣ್ಣ ವ್ಯಕ್ತಿಗಳಲ್ಲಿ ಸಣ್ಣ ಮಹತ್ವಾಕಾಂಕ್ಷೆಗಳು ಇರುತ್ತವೆ
ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕು ಎಂದು ಅನೇಕ ದೇಶಭಕ್ತರು ದೊಡ್ಡ ದಾದ ಆಸೆಯನ್ನು ಹೊಂದಿದ್ದರೆ ಸಣ್ಣ ವ್ಯಕ್ತಿಗಳಿಗೆ ಆ ದೇಶವನ್ನು ಕಾಯುವ ಒಬ್ಬ ವೀರಸೈನಿಕ ಆಗುವ ಆಸೆ ಇರುತ್ತದೆ.
ಮೌಂಟ್ ಎವರೆಸ್ಟ್ ನ್ಬು ಹತ್ತುವಂತಹ ಆಸೆಯೂ ಇರುತ್ತದೆ.
ಅಲೆಕ್ಸಾಂಡರನಿಗೆ ಹೇಗೆ ಇಡೀ ಜಗತ್ತನ್ನು ಗೆಲ್ಲುವ ಆಸಕ್ತಿ ಇತ್ತೋ ಹಾಗೆ ಇಡೀ ಜಗತ್ತನ್ನು ಕಾಣುವ ಹಿರಿದಾದ ಆಸೆಯನ್ನು ಹೊತ್ತು ಅದೆಷ್ಟೋ ಜನರ ಆಸೆಗಳು ನನಸಾಗಿಲ್ಲ.

ಯಾವ ವ್ಯಕ್ತಿಯು ಆಸೆಯನ್ನು ಇಟ್ಟುಕೊಂಡು ತನ್ನ ಆಸೆಗಳು ಇಡೇರದಿದ್ದಾಗ ಬದುಕು ಭಾರವಾಗುತ್ತದೆ.ಭಾರವಾದ ದೊಡ್ಡ ಕನಸನ್ನು ಹೊತ್ತ ಮಕ್ಕಳಿಗೆ ನಾವು ಕೈಜೋಡಿಸಿ ಆವರ ಆಸೆಯನ್ನು ನನಸು ಮಾಡಬೇಕಾಗುತ್ತದೆ .

*ಮಹತ್ವಾಕಾಂಕ್ಷೆಯ ನ್ನು ಹೊಂದಿದ ವ್ಯಕ್ತಿಗೆ ಅಡ್ಡಿ ಆತಂಕಗಳು ಬಂದಾಗ ಅವುಗಳನ್ನು ಧೈರ್ಯ ದಿಂದ ಎದುರಿಸಬೇಕಾಗುತ್ತದೆ .*

ಇನ್ನೊಬ್ಬರ ಆಸೆ ಕನಸುಗಳಿಗೆ
ಅವರ ಆಸೆಗಳ ಇಡೀರಿಕೆಗೆ ಬೆಂಬಲಾಗಿರಬೇಕು.

ಅವಮಾನ ಅಪಮಾನ ವ್ಯಂಗ ಮನಸ್ಸಿನ ಚಂಚಲತೆಗೆ ಕಾರಣರಾಗಬಾರದು .

ಸೋತರೂ ಮತ್ತೆ ಮತ್ತೆ ಪ್ರಯತ್ನಿಸುವ ಗುಣ ಇರಬೇಕು.

ಒಳ್ಳೆಯವರ ಸ್ನೇಹ ಸಂಬಂಧ ಇಲ್ಲಿ ತುಂಬಾ ಮುಖ್ಯ
ಕೆಟ್ಟವರ ಸಹವಾಸ ಅವರ ಜೊತೆ ಬೆರೆಯುವುದರಿಂದ ದೂರನೇ ಇದ್ದಿರಬೇಕು.

ಒಂಟಿಯಾದರೂ ಪರವಾಗಿಲ್ಲ ತನ್ನ ಮಹತ್ವಾಕಾಂಕ್ಷೆಯನ್ನು ಇಡೇರಿಸಿಕೊಳ್ಳಬೇಕು.

ಸತ್ಯ ನ್ಯಾಯ ಧರ್ಮ ದೈರ್ಯ ದಿಂದ ಮುನ್ನಡೆಯಬೇಕು.

ಇನ್ನೊಬ್ಬರ ಟೀಕೆ ಟಿಪ್ಪಣಿಗಳಿಗೆ ದುಃಖಿತ ರಾಗಬಾರದು.

ನಿಮ್ಮನ್ನು ಅವಮಾನಿಸುವವರ .ನಿಮ್ಮನ್ನು ಕಡೆಗಣಿಸುವವರಿಂದ ಸದಾ ದೂರ ವಿದ್ದುಬಿಡಿ.

ನಿಮಗಾಗಿ ಶ್ರಮಿಸುವ ನಿಮಗೆ ಗೌರವ ಕೊಡುವ ನಿಮ್ಮ ಕಷ್ಟ ಸುಖ ಗಳಲ್ಲಿ ಭಾಗಿಯಾಗುವ ಸ್ನೇಹವನ್ನು ಸದಾ ಕಾಪಾಡಿಕೊಂಡು ಹೋಗಿ .

ಸ್ನೇಹದ ಹೆಸರಿನಲ್ಲಿ ಮೋಸಮಾಡಿ ಅವಮಾನ ಮಾಡುವ ಅವಮಾನಿದವರನ್ನು ಯಾವತ್ತೂ ಕ್ಷಮಿಸಬೇಡಿ.

ನಿಮ್ಮ ಸ್ನೇಹ ಬೆಳೆಯಲು ಅವರ ಒಳ ಮನಸ್ಸು ತಿಳಿದು ಮುನ್ನಡಿ ಇಡಿ.

ಸಾಲ ಮಾಡಿ ನಿಮ್ಮ ಮಹತ್ವಾಕಾಂಕ್ಷೆಯನ್ನು ಇಡೇರಿಸಿಕೊಳ್ಳಲು ಬಯಸಬೇಡಿ.

ಒಳ್ಳೆಯ ಆತ್ಮೀಯರ ಹತ್ತಿರ ಬೆರೆತು ಮಾತನಾಡಿ.

ನಿಮ್ಮ ಮಹತ್ವಾಕಾಂಕ್ಷೆಯು ಅಭಿವೃದ್ಧಿಯ ಪಥದಲ್ಲಿಯೇ ಇರಲಿ.

ಪ್ರಯತ್ನ ಮಾಡುತ್ತ ಮಾಡುತ್ತ ಮುಂದೆ ಹೆಜ್ಜೆ ಹಾಗಿ .

ಅನೇಕ ವ್ಯಕ್ತಿಗಳ ಮದ್ಯ ಅನೇಕ ವಿಚಾರಗಳು ಇರುತ್ತವೆ ಕೆಲವರು ಗೌರವಿಸುವರು ಕೆಲವರು ಅವಮಾನಿಸುವರು .ಇವೆರಡರ ಮಧ್ಯ ನಮ್ಮ ಮನವನ್ನು ಏಕಚಿತ್ತ ಇಟ್ಟುಕೊಂಡು ನಿಮ್ಮ ನಿಮ್ಮ ಮಹತ್ವಾಕಾಂಕ್ಷೆಯನ್ನು ಇಡೇರಿಸಿಕೊಳ್ಳಲು ಪ್ರಯತ್ನಿಸಿ.
ಇಷ್ಟೆಲ್ಲ ವಿಚಾರಗಳನ್ನು ನಾವು ಪಾಲಿಸಿದರೂ ಕೊರ ಕೊರಗಿ ಜೀವನ ನಡೆಸಿದರೆ.ಈ ಬದುಕು ಬೇಸರವಾಗುತ್ತದೆ ಭಾರವಾಗುತ್ತದೆ ಅಲ್ಲವೇ ? ಬದುಕು ಭಾರವಾಗದಂತೆ ಮುನ್ನಡೆದಾಗ ಮಾತ್ರ ನಮ್ಮ ನಮ್ಮ ಮಹತ್ವಾಕಾಂಕ್ಷೆಗಳು ಇಡೇರಲು ಸಾಧ್ಯ ಅಲ್ಲವೇ ನವೇನಂತಿರಿ…

ಡಾ ಸಾವಿತ್ರಿ ಮ ಕಮಲಾಪೂರ

Don`t copy text!