ಬದುಕು ಭಾರವಲ್ಲ ಸಂಚಿಕೆ 13
ಮನೆಯ ಜವಾಬ್ದಾರಿ ಹೊತ್ತ ಪುಟ್ಟ ಬಾಲಕನ ಸತ್ಯ ಘಟನೆ
ಪುಟ್ಟ ಹುಡುಗ 3 /4 ವರ್ಷ ಅಷ್ಟೇ ದಿನಾಲೂ ಹಾಲಿನ ಕಿತ್ತಲಿ ಹಿಡಿದುಕೊಂಡು ಜೊತೆಯಲ್ಲಿ ಒಂದು ಕಪ್ಪು ನಾಯಿ ಬಾಗಿಲು ಬಡಿಯದೇ ಏನೂ ಮಾತನಾಡದೇ ಬಾಗಿಲ ಬಳಿ ನಿಂತು ಬಿಡುವ ಷುಟ್ಟ ಹುಡುಗ .ಏನೊಂದೂ ಮಾತನಾಡದ ನಗುವಿರಿದ ಮೊಗದ ಗಲ್ಲವನ್ನು ಅಲುಗಾಡಿಸಿ ಬಾರೋ ಒಳಗೆ ಅಂದೆ.
ತಾಯಿಯ ಹೊಟ್ಟೆಯಲ್ಲಿ ಬೆಚ್ಚಗೆ ಮಲಗುವ ಪುಟ್ಟ ಕಂದ ನಾವು ಓಳುವ ಮುಂಚೆಯೇ ಕೈಯಲ್ಲಿ ಒಂದು ಹಾಲಿನ ಕ್ಯಾನಿನಷ್ಟೇ ತೂಕ ವಿರುವ ಪುಟ್ಟ ಹುಡುಗನ ಕಾಯಕ ನಾವೆಲ್ಲರೂ ಮೆಚ್ಚಲೇ ಬೇಕು. ಸುಮಾರು ಒಂದು ಪರ್ಲಾಂಗು ಒಂಟಿಯಾಗಿ ಯಾವಾಗಲೋ ಒಂದು ಸಲ ಜೊತೆಯಲ್ಲಿ ನಾಯಿ ಬರುತ್ತಿತ್ತು.ನಿಜಕ್ಕೂ ಪುಟ್ಟ ಹುಡುಗ ನ ಕಾಯಕ ಮೆಚ್ಚಿದ ನಾನು
ನಮ್ಮ ಮನೆಯ ಕೆಲಸದಾಕಿಗೆ ಕೇಳಿದೆ . ನಮ್ಮ ಮನೆಗೆ ದಿನಾಲೂ ಈ ಹಾಲು ಕೊಡುವ ಹುಡುಗನ ವಿಷಯವನ್ನು ಹೇಳಿದೆ ಎಷ್ಟು ಸಣ್ಣ ಹುಡುಗ ಮನೆಯಲ್ಲಿ ತಿಳಿಯುವುದಿಲ್ಲವೇ ಬರುವಾಗ ರೋಡಿನಲ್ಲಿ ಎನಾದರೂ ಆದರೆ ಎಂದೆ .ಮೆಡಂ ರೀ ಆ ಹುಡುಗ ನ ಮನೆಯಲ್ಲಿ ಹುಡುಗನೇ ದೊಡ್ಡವನು ಅವರಪ್ಪನ ಕುಡಿತದ ಚಟದಿಂದ ಹುಡುಗನ ಅಜ್ಜ ಅಜ್ಜಿ ಹೊಲದಾಗ ಅದಾರು ಇವರಷ್ಟ ಈ ಊರಾಗ ಅದಾರು ನೋಡ್ರಿ ಅಂದಳು.
ಇವರಷ್ಟ್ ಅಂದರೆ ಯಾರು?
ಇವರ ಅವ್ವ ಮತ್ತು ಅಪ್ಪ ಇನ್ನೊಂದು ಬಗಲಾಗ ಒಂದು ಇವರವ್ವಗ ಕೂಸ ಐತಿ ನೋಡ್ರಿ ಅಂದಳು.
ಹುಡುಗನ ಬಗ್ಗೆ ಮನದ ಮೂಲೆಯಲ್ಲಿ ಎಲ್ಲೋ ಒಂದು ಕಡೆ ಅನುಕಂಪ ಮೂಡಿ ಬಂತು.ದಿನಾಲೂ ಏನೂ ಮಾತನಾಡದೆ ಇರುವ ಹುಡುಗ
ಬದುಕಿನ ಬಂಡಿಗೆ ತಾಯಿಗೆ ಆಧಾರ ವಾಗಿರುವ ಬಾಲಕ ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿ.
ಎಷ್ಟೋ ಮಂದಿ ಈ ಹುಡುಗನ ತರ ತಮ್ಮ ತಮ್ಮ ಕಾಯಕದಲ್ಲಿ ತೊಡಗಿ ತಂದೆ ತಾಯಿಯ ಕೆಲಸಕ್ಕೆ ಸಹಾಯ ವಾದರೆ ಅಂತಾ ಅದಕ್ಕೆ ಇರಬೇಕು ಬೇಂದ್ರೆಯವರು ಹೇಳಿದ ಮಾತು ಏಳಿ ಎದ್ದೇಳಿ ಹುಸಿ ನಿದ್ದೆ ಸಾಕು ಬೇಗ ಎದ್ದು ಅಂಗಡಿಯ ಕದವ ತೆರೆಯಲೇಳಿ.
ಈ ತುಂಬಿರುವ ಬಾಳನ್ನು ತುಂಬಿ ತುಂಬಿ ಕುಡಿಯಲೇಳಿ
ಯೌವ್ವನದಲ್ಲಿ ಇರುವಾಗಲೇ ಬೇಗ ಎದ್ದು ನಿಮ್ಮ ನಿಮ್ಮ ಕಾಯಕ ಮಾಡಲೇಳಿ ಕಳೆದ ಸಮಯ ಕಳೆದು ಹೋದ ವಯಸ್ಸು ಮತ್ತೆ ಬಾರದು
ಈ ಹುಡುಗನ ಸತ್ಯ ಕಥೆಯನ್ನು ಬರೆಯುವಾಗ ವರಕವಿ ಬೇಂದ್ರೆಯವರು ಯುವಕರಿಗೆ ಹೇಳಿದ ಮಾತುಗಳು ನೆನಪಿಗೆ ಬಂದವು.
ಮನೆಯಲ್ಲಿ ಕುಡಕ ಅಪ್ಪ ಬೇಗ ಎದ್ದು ಬರಲಾರದೇ ದೊಡ್ಡವರು ಮಾಡದ ಕೆಲಸವನ್ನು ಈ ಪುಟ್ಟ ಬಾಲಕನಿಗೆ ಬೇಂದ್ರೆ ಅಜ್ಜನ ಮಾತುಗಳು ನಿಜಕ್ಕೂ ಕೇಳಿರಬೇಕೇನೋ ಎಂದು ಅನಿಸಿತು.
ಹುಡುಗ ದಿನವೂ ಬೆಳಿಗ್ಗೆಯೇ ಬರುವ ಹುಡುಗ ಅವತ್ತು ಒಂದು ದಿನ ಲೇಟಾಗಿ ಹಾಲನ್ನು ತೆಗೆದುಕೊಂಡು ಬಂದ
ನಮ್ಮ ಕೆಲಸದಾಕಿ ಬಂದು ಪಾತ್ರೆಗಳನ್ನೆಲ್ಲ ತಿಕ್ಕಿ ಹೋದ ಮೇಲೆ ಚಹಾ ಮಾಡಬೇಕಂದ್ರ ಆಯಿ ಇನ್ನೂ ಎಕೋ ಹಾಲಿನ ಹುಡುಗ ಬಂದಿಲ್ಲ ಎಂದೆ.
ಮೆಡಂ ರೀ ನಿನ್ನೇ ರಾತ್ರಿ ಆ ಹಾಲು ಕೊಡುವ ಹುಡುಗನ ಅಪ್ಪ ರಾತ್ರಿಯ ಸತ್ತು ಹೋಗಿದಾನರೀ ಎಂದಳು.
ಪುಟ್ಟ ಬಾಲಕನನ್ನು ನೆನೆದು ನಿಜಕ್ಕೂ ಕಂಗಳಲ್ಲಿ ನೀರು ತುಂಬಿತು ಭಗವಂತ ಏನೂ ನಿನ್ನ ಪ್ರೇಮ ಪರೀಕ್ಷೆ ಎಂದೆ .ಸಕಲರನೂ ಸಲಹುವ ಭಗವಂತನ ಲೀಲೆ ಯಾರು ಬಲ್ಲವರು ಎಂದು ಕಣ್ಣನ್ನು ವರೆಸಿಕೊಳ್ಳುತ್ತ ಹುಡುಗನ ಕೈಯಲ್ಲಿರುವ ಹಾಲಿನ ಕ್ಯಾನನ್ನು ತೆಗೆದುಕೊಂಡು ಚಹಾ ಮಾಡಲು ಹೋದೆ .
-ಡಾ ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು
ಕರ್ನಾಟಕ ಪಬ್ಲಿಕ್ ಸ್ಕೂಲ್