ಕಾಯಕ ಯೋಗಿ , ಧೀಮಂತ ಸಂತ,ತುರು ಗಾಹಿ ರಾಮಣ್ಣ

ಕಾಯಕ ಯೋಗಿ , ಧೀಮಂತ ಸಂತ,ತುರು ಗಾಹಿ ರಾಮಣ್ಣ

ನಮ್ಮೆಲ್ಲರಿಗೂ ಗೊತ್ತಿರುವಂತೆ ೧೨ ನೇ ಶತಮಾನ ಕರ್ನಾಟಕದ ಇತಿಹಾಸದ ‘ ಸುವರ್ಣಕಾಲ’.ದುಡಿಯುವ ವರ್ಗ ಶೋಷಣೆಗೆ ಒಳಪಟ್ಟ ಸಂದರ್ಭದಲ್ಲಿ ಶರಣ ಸಮೂಹ ಬಂಡಾಯ ಧೋರಣೆ ರೂಪತಾಳಿ, ಸಾಹಿತಿಕ ಅಭಿವ್ಯಕ್ತಿಯ ಜೊತೆಯಲ್ಲಿ ವಚನಸಾಹಿತ್ಯ ಬೆಳಕು ಮೂಡಿಸಿದ್ದು ಅವಿಸ್ಮರಣೀಯವಾದದ್ದು. ಅಂದು ಪಾಳೆ ಗಾರಿಕೆಯಿಂದ ನಲುಗುತ್ತಿರುವ ಸಮಾಜ ಇಂದು ಬಂಡವಾಳಶಾಹಿಗಳಿಂದ ನಲುಗುತ್ತಿದೆ.

ಎಲ್ಲವೂ ಜಾತಿ, ಧರ್ಮದ ಚೌಕಟ್ಟಿನಲ್ಲಿ ಮುನ್ನಡೆಯುವ ಪ್ರಸ್ತುತ ಸಮಾಜಕ್ಕೆ ಬಸವಣ್ಣವರ ವೈಚಾರಿಕ, ನೈತಿಕ, ಸಾಮಾಜಿಕ ಮೌಲ್ಯಗಳು , ಅಂದಿಗಿಂತಲೂ ಇಂದು ಅವಶ್ಯವಾಗಿವೆ.’ ಇವನಾರವ,ಎನ್ನದೇ, ಇವಾನಮ್ಮವ, ಇವನಮ್ಮವ ಎನ್ನುವ ತಾರತಮ್ಯ ರಹಿತವಾದ ಸಮಾಜ ಕಟ್ಟಲು ಬಯಸಿದ್ದರು. ಅದಕ್ಕಾಗಿ ಎಲ್ಲರನ್ನು ತನ್ನ ಮನೆ – ಮಗನೆಂದು ಸ್ವೀಕರಿಸಿದರು. ಮಹಾಮಾನವತಾವಾದಿ. ಅವರ ಪ್ರಖರ ಚಿಂತನೆಗಳು ಸಾರ್ವಕಾಲಿಕ ಸತ್ಯವಾಗಿ ಉಳಿಯಲು..ಎಲ್ಲರೂ ‘ ಕಾಯಕವೇ – ಕೈಲಾಸ’ ತತ್ವವನ್ನು ನಿಷ್ಠೆಯಿಂದ ಅಳವಡಿಸಿದಾಗ- ಕಲ್ಯಾಣ ರಾಜ್ಯ ‘ ರೂಪ ಗೊಳ್ಳಲು ಸಾಧ್ಯವಿದೆ. ಅಂದು ಬಸವಾದಿ ಶರಣರು ವಚನಗಳ ಮೂಲಕ ಬಿತ್ತಿದ ಆದರ್ಶ ಸಮಾಜ ಪರಿಕಲ್ಪನೆ ಇಂದಿಗೂ ಪ್ರಸ್ತುತ. ಜಗತ್ತು ಇಂದು ಎದುರಿಸುವ ಹಲವು ಸಮಸ್ಯೆಗಳಿಗೆ ಶರಣರ ವಚನಗಳಲ್ಲಿ ಪರಿಹಾರವಿದೆ.

ಬಸವಣ್ಣವರ ಕಾಯಕ ತತ್ವದ ಪ್ರೇರಣೆ ಇಂದ ಬಹಳಷ್ಟು ಶರಣ,ಶರಣೆಯರು ತಮ್ಮ ಜೀವನದಲ್ಲಿ ಅಳವಡಿಸಿ,ಸಾರ್ಥಕ ಮಾಡಿಕೊಂಡಿರುವುರು.ಅಂಥವರಲ್ಲಿ ಒಬ್ಬ ಶ್ರೇಷ್ಠ ಕಾಯಕಯೋಗಿ ತುರುಗಾಹಿ ರಾಮಣ್ಣ ೧೨ ನೇ ಶತಮಾನದಲ್ಲಿ ಅನೇಕ ಶರಣರು,ತಮ್ಮ ವೃತ್ತಿಯಲ್ಲಿ ಬೇರೆಯಾದರೂ ಕಾಯಕ ಸಾಧನೆ ಮಾರ್ಗದಲ್ಲಿ ಒಂದೇ ಆಗಿದ್ದರು.’

ಕಾಯಕದಲ್ಲಿ ನಿರತನಾದಡೆ ಗುರು ದರ್ಶನ ವಾದರೂ ಮರೆಯಬೇಕು, ಲಿಂಗಪೂಜೆ ಯಾದರೂ ಮರೆಯಬೇಕು

.’ ಕಾಯಕ ವೆಂಬುದು ಲಿಂಗಾಯತ ಧರ್ಮದ ಮೌಲ್ಯಯುತ,ವೈಚಾರಿಕ,ನೈತಿಕ ಹಾಗೂ ಸ್ವಾಭಿಮಾನದ ಒಂದು ಶ್ರೇಷ್ಠ ಪದ.ತನಗಾಗಿ,ಶರಣಾರ್ಪಿತ ಭಾವದಿಂದ ಕಾರ್ಯ ಕೈಗೊಂಡು,ತಮ್ಮ ಕಾಯಕದಲ್ಲಿ ಭಕ್ತಿ,ಶ್ರದ್ಧೆ ಇಂದ ನಿರತರಾಗಿರ ಬೇಕೆಂಬುದೇ ಬಸವಣ್ಣರ ಆಶಯ.

ಶರಣರಿಗೆ ಕಾಯಕ ಕೇವಲ ದುಡಿಮೆಯಾಗಿರಲಿಲ್ಲ, ಅದೊಂದು ಸುಂದರ ಅನುಭಾವದ ಮಾರ್ಗವಾಗಿತ್ತು. ವಚನಕಾರರು,ದೇವಾಲಯವನ್ನು ದೇಹದಲ್ಲಿ ಕಂಡರು ಕಾಯಕವನ್ನೆ ರೂಪಕ ವನ್ನಾಗಿ ಮಾಡಿಕೊಂದವರಲ್ಲೀ ಆಯ್ದಕ್ಕಿ ಲಕ್ಕಮ್ಮ,ಅಂಬಿಗರ ಚೌಡಯ್ಯ, ಮದಾರ ಚೆನ್ನಯ್ಯ,ಹಡಪದ ಅಪ್ಪಣ್ಣ, ತುರುಗಾಹಿ ರಾಮಣ್ಣ,ಡೋಹರ ಕಕ್ಕಯ್ಯ, ಸೋಳೆ ಸಂಕ್ಕವ ಇನ್ನೂ ಹಲವಾರು ಶರಣ ಶರಣೆಯರು. ವಚನಕಾರರು, ತಮ್ಮ ಕಾಯಕಗಳಿಂದ ಪಡೆದ ಅನುಭವ ವನ್ನು ಕಾಯಕದ ಪರಿಭಾಷೆ ಯಲ್ಲಿಯೇ, ಅನುಭಾವಕ್ಕೆರಿಸುವ ಕ್ರಮವನ್ನು ಅನುಸರಿಸಿದರು. ಇಲ್ಲಿ ಶಿವಶರಣರ ಗೋವು ಗಳನ್ನ ಕಾಯುವ ಕಾಯಕದ ಅನುಭಾವದ ಮೂಲಕವೇ ತರುಗಾಹಿ ರಾಮಣ್ಣ,ಅನುಭಾವದ ದರ್ಶನ ಮಾಡಿಸುತ್ತಾರೆ. ಇವರ ಕಾಲ ೧೧೬೦,ಊರು,ಉಪ್ಪಾರ ಗುಡಿ,ಯಾದಗಿರಿ ಜಿಲ್ಲೆಯಲ್ಲಿ ಅವರ ಸ್ಮಾರಕ ದೊರೆಯಬಹುದು.ಇವರ ಊರು,ತಂದೆ, ತಾಯಿಯ ಹೆಸರು ಎಲ್ಲಿಯೂ ಸ್ಪಷ್ಟ ಉಲ್ಲೇಖ ವಿಲ್ಲ. ತುರುಗಾಹಿ- ಎಂದರೆ ಹಸು/ ಗೋವುಗಳನ್ನು ಮೇಯಿಸುವ,ಕಾಪಾಡುವ ಸಂರಕ್ಷಿಸುವ. ಗೋಪತಿನಾಥ ವಿಶ್ವೇಶ್ವರ ಲಿಂಗ ಎಂಬ ಅಂಕಿತದಲ್ಲಿ ಇವರ ಒಟ್ಟು ೪೬ ವಚನಗಳು ದೊರೆತಿದ್ದು,ಅವುಗಳಲ್ಲಿ ೧೭ ವಚನಗಳು ಕಾಯಕಕ್ಕೆ ಸಂಬಂಧಿಸಿದರೆ ಉಳಿದ ವಚನಗಳು ಭಾವಶುದ್ಧಿ, ಚಿತ್ತಶುದ್ಧಿ,ನಿಷ್ಠೆ ಮುಂತಾದ ಮೌಲಿಕ ವಿಷಯಗಳನ್ನು ಪ್ರತಿಪಾದಿಸಿದ್ದಾರೆ. ಬಸವ ಸಮಕಾಲೀನರಾದ ರಾಮಣ್ಣ ಕುರಿತು ಏನೂ ಅಷ್ಟೊಂದು ತಿಳಿಯದಿರುವುದು,ದುರದೃಷ್ಟದ ಸಂಗತಿ, ಗೊಲ್ಲ ಸಮುದಾಯದ ರಾಮಣ್ಣ ಅಂಥ ವ್ಯಕ್ತಿ ವಚನಗಳನ್ನು ರಚಿಸಿದ್ದಾರೆ ಎಂದರೆ,” ಇವರು ಜೀವಿಸಿದ್ದ ೧೨ ನೇ ಶತಮಾನದಲ್ಲಿ,ಕರ್ನಾಟಕದಲ್ಲಿ ಅಕ್ಷರ,ವಿದ್ಯಾ ಪ್ರಚಾರ ಎಷ್ಟು ಹುರುಪು ಹುಮ್ಮಸ್ಸಿನಿಂದ ನಡೆದಿರಬೇಕು.ಬಸವಣ್ಣರ ಪ್ರಭಾವದಿಂದ ಶಿಕ್ಷಣ ಕ್ರಾಂತಿ ಎಷ್ಟು ಹುಮ್ಮಸ್ಸಿನಿಂದ ಸಾಗಿತ್ತು ಎಂದು ಗೊತ್ತಾಗುತ್ತೆ. ದನಕಾಯುವ ತುರುಗಾಹಿ ರಾಮಣ್ಣ ವಚನಗಳನ್ನು ರಚಿಸುವಷ್ಟು ಸಾಹಿತ್ಯ ಸಂಪನ್ನರಾಗಿದ್ದರು.ಇವರ ವಚನಗಳಲ್ಲಿ ವೃತ್ತಿ ಗೌರವ ಬಲು ಗಮನಿಸುವಂಥದ್ದು.ತನ್ನ ಕಾಯಕ ಕೀಳು ಅರಿಮೆ ಭಾವನೆಯ ಅಂಶ ಎಂದಿಗೂ ಅವರಲ್ಲಿ ಸುಳಿದಿಲ್ಲ. ತಮ್ಮ ವೃತ್ತಿ ವಲಯದ ಅನುಭವಗಳನ್ನು ಆಧಾತ್ಮದ ಅನುಭಾವದ ಜೊತೆಗೆ ಸಮೀಕರಿಸಿ,ಹೇಳಿದ ರೀತಿ ಬಲು ಸೊಗಸು,ಅರ್ಥಪೂರ್ಣ.ಶಿವ ಶರಣರ ಕುರಿತು ಹೇಳೋದಾದ್ರೆ ಗ್ರಂಥ ಪ್ರಮಣ್ಯಕ್ಕಿಂತ ಶಾಸನಾ ಧರಕ್ಕಿಂತ ಮುಖ್ಯವಾದ ಆಕರ ಸಂಗತಿಗಳು – ಅವರ ವಚನಗಳು. ಬಸವಣ್ಣ,ಅಲ್ಲಮಪ್ರಭು,ಅಕ್ಕಮಹಾದೇವಿ..ಲಿಂಗೈಕ್ಯರಾದ ಸಮಯದಲ್ಲಿ ಜೀವಿಸಿದ್ದರೆಂದು – ತದನಂತರ ಲಿಂಗೈಕ್ಯರಾದರೆಂದು ಈ ವಚನದಿಂದ ತಿಳಿದು ಬರುತ್ತದೆ. *ಬಂದಿತ್ತು ದಿನ ಬಸವಣ್ಣ ಕಲ್ಲಿಗೆ,ಚೆನ್ನಬಸವಣ್ಣ ಉಳುವೆಯಲ್ಲಿಗೆ,ಪ್ರಭು,ಅಕ್ಕ ಕದಳಿಡಿದ್ವಾರಕ್ಕೆ, ಮಿಕ್ಕಾದ ಪ್ರಥಮರೆಲ್ಲರೂ ತಮ್ಮ ಲಕ್ಷಕ್ಕೆ..ನಾ ತುರುವಿನ ಬೆಂಬಳಿ ಯಲ್ಲಿ ಹೋದ ಮರೆಯಲ್ಲಿ ಅಡಗಿಹರೆಲ್ಲರೂ ಅಡಗಿದ ಕೆಳಿನಾ. ” ಗೋಪಿನಾಥ ವಿಶ್ವೇಶ್ವರ ಲಿಂಗದಲ್ಲಿಯೇ ಉಡುಗುವೆನು”*ಐತಿಹಾಸಿಕ ವಿವರವನ್ನು ಒಳಗೊಂಡ ಅವರ ಈ ವಚನ ಬಲು ಮೌಲಿಕವಾಗಿದೆ.ಕಾರಣ.. ಕಲ್ಯಾಣ ಕ್ರಾಂತಿಯ ನಂತರದ ದಿನಗಳನ್ನು ಈ ವಚನ ಕಟ್ಟಿಕೊಡುತ್ತದೆ.ಬಸವಣ್ಣ – ಕೂಡಲ ಸಂಗಮಕ್ಕೆ,ಚೆನ್ನಬಸವಣ್ಣ – ಉಳಿವಿಗೆ,ಅಲ್ಲಮ – ಅಕ್ಕರು,ಶ್ರೀಶೈಲ ಕದಳಿಗೆ,ಉಳಿದ ಶರಣರು ತಮ್ಮ ವಚನಗಳ ಕಟ್ಟುಗಳೊಂದಿಗೆ, ತಮಗಿಷ್ಟ ಬಂದ ಸ್ಥಳ ಗಳಿಗೆ ಹೋದದ್ದು ಕಣ್ಣಾರೆ ಕಂಡು ಹೇಳಿರುವ ತುರುಗಾಹಿ ರಾಮಣ್ಣ,ತಾವು ಮಾತ್ರ ತುರುಗಳ ಬೆಂಬಲಿಯಲ್ಲಿ ಉಳಿದು ಗೋಪತಿನಾಥನ ವಿಶ್ವೇಶ ನಲ್ಲಿ ಉಡುಗುತ್ತೆನೆಂದು, ಹೇಳುವ ಮೂಲಕ ತಮ್ಮ ಇಷ್ಟಲಿಂಗದಲ್ಲಿ ತಾವಿಟ್ಟಿರುವ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.. ಬಸವಣ್ಣ,ಅಲ್ಲಮರು, ಅಕ್ಕಮಹಾದೇವಿ ಮುಂತಾದವರು ಲಿಂಗೈಕ್ಯ ರಾದ ಸಮಯದಲ್ಲಿ ಜೀವಿಸಿದ್ದರೆಂದು ತದನಂತರ ರಾಮಣ್ಣ ಲಿಂಗೈಕ್ಯ ರಾದರೆಂದು ತಿಳಿದು ಬರುತ್ತದೆ. ಇನ್ನೊಂದು ವಚನದಲ್ಲಿ —.

*ಕೊಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲ್ಲಿಸುವಂತೆ. ಏಕಚಿತ್ತನಾಗಿ ಸರ್ವವಿಕಾರಂಗಳ ಕಟ್ಟುವಡೆದು.. ಇಂದ್ರೀಯಂಗಳ ಇಚ್ಚೆಯಲ್ಲಿ ತ್ರಿವಿಧವ ಹಿಡಿದಿರುವರ ಸಂದಿಯಲ್ಲಿ ನುಸುಳದೆ..ವಸ್ತುವಿನ ಅಂಗದಲ್ಲಿಯೇ ತನ್ನಂಗೆ ತಲ್ಲಿಯವಾಗಿಪ್ಪುದೆ ಮಹನಿಜದ ನೆಲೆ,ಗೋಪತಿನಾಥ ವಿಶ್ವೇಶ್ವರ ಲಿಂಗ ವರಿವುದಕ್ಕೆ ಇದೆ ಬಟ್ಟೆ. ವ್ಯಕ್ತಿಯೊಬ್ಬರು, ಕೋಲನ್ನು ಹಿಡಿದು ಏಮ್ಮ,ಕರು,ಹಸುಗಳನ್ನು ಹೇಗೆ ಸಂಬಾಲಿಸುವನೋ ಹಾಗೆ ನಮ್ಮ ಮನಸ್ಸನ್ನು ಎಕಾಗೃತ ಗೊಳಿಸಿದರೆ,ಎಲ್ಲ ಇಂದ್ರಿಯಗಳನ್ನು ನಿಯಂತ್ರಿಸಬಹುದು, ನಿಗ್ರಹಿಸ ಬದುದು. ಲೌಕಿಕ ಪ್ರಪಂಚದ ಸುಳಿಯಲ್ಲಿ ಸಿಲುಕುವ ,ಅದರಲ್ಲಿ ನುಸುಳುವದರ ಬಿಟ್ಟು,ಅವುಗಳಿಂದ ದೂರವಿರಲು ಸರ್ವೆಂದ್ರಿಯಗಳನ್ನು,ನಿಗ್ರಹಿಸಬೇಕು. ನಿಗ್ರಹಿಸಿದವನೆ ಯೋಗಿ ಯಾಗುತ್ತಾನೆ. ದನಗಾಹಿ ಒಂದು ಕೋಲಿನಿಂದ ಎಲ್ಲ ಹಸುಗಳನ್ನು ನಿಗ್ರ ಮನುಷ್ಯ ತನ್ನ ಹಲವು ಹದಿನೆಂಟು, ಇಂದ್ರೀಯ ವಿಕಾರಗಳೆಂಬ ದನಗಳನ್ನು ಎಕಚಿತ್ತ ವೆಂಬ ಕೋಲಿನಿಂದ ತನ್ನ ವಶದಲ್ಲಿ ಇಟ್ಟು ಕೊಳ್ಳಬೇಕೆಂದು ತಿಳಿಸಿದ್ದಾರೆ..ಆದ್ದರಿಂದ ನಾವು ಮನಸ್ಸನ್ನು ಎಕಾಗ್ರತ ಗೊಳಿಸಬೇಕಾದರೆ ಅಂಗದ ದಿವ್ಯವಾದ ಲಿಂಗವನ್ನು ಪೂಜಿಸಿ ಆರಾಧಿಸಬೇಕು. ಶರಣರಿಗೆ ತ್ರಿವಿಧ ಕಲ್ಪನೆ ದೊಡ್ಡದು .ಕಾಯಾ,ವಾಚಾ, ಮಾನಸಾ ಶುದ್ಹವಾಗಿರಬೇಕು.ಕೈಗೊಳ್ಳುವ ಕಾಯಕ ಶುದ್ಧ ಭಾವ ವಿರಬೇಕು.ಮನುಷ್ಯ ನೈತಿಕ ವಾಗಿ ಬದುಕಲಿ ಎಂಬ ಅಂಶ ಈ ವಚನದಲ್ಲಿ ರಾಮಣ್ಣ ಹೇಳಿದ್ದಾರೆ.ಕಾಯಕದ ಕುರಿತು ಇವರು ಹೊಂದಿದ ಗೌರವ ಹಾಗೂ ಅನನ್ಯ ನಿಷ್ಠೆಯನ್ನು ಅವರ ವಚನಗಳಲ್ಲಿ ಗಮನಿಸಬಹುದು. ತುರುಗಾಹೀ ಕೈಯಲ್ಲಿರುವ ಕೋಲು ನೂರಾರು ಹಸುಗಳ ಮಂದೆಯನ್ನೇ ನಿಯಂತ್ರಿಸುವ ಶಕ್ತಿ ಕೋಲಿಗಿದೆ,ಎಂದಾಗ ಮನುಷ್ಯನ ಮನದ ವಿಚಾರಗಳನ್ನು,ಅತ್ತಿತ್ತ ಹರಿದಾಡುವ ಪಂಚೇಂದ್ರಿಯಗಳನ್ನು ಸರಿ ದಾರಿಗೆ ತರುವ ಶಕ್ತಿ ಮನಸ್ಸಿಗೆ ಇದೆ ಎನ್ನುತ್ತಾರೆ.ಅವರು ತಮ್ಮ ಬದುಕನ್ನೇ ಹಸುಗಳೊಂದಿಗೆ ಕಳೆದವರು.ಅವರಿಗೆ ಕಾಯಕವೇ ಸರ್ವಸ್ವ.ಆದರೆ ವಿಶೇಷ ವೆಂದರೆ,ತುರುಗಾಹಿ ಯಾದರೂ ಅನುಭವಗಳ ಜೊತೆಗೆ,ಜೀವನಾನುಭವಿಗಳೂ ಕೂಡ.ಆಧ್ಯಾತ್ಮಿಕ ಚಿಂತನೆ ಯಲ್ಲೂ ಅವರ ಗಮನ ಮಾತ್ರ ಗೋವುಗಳನ್ನು ಕಾಪಾಡುವುದರಲ್ಲಿಇತ್ತು. ಗೋವುಗಳ ಗುಣಸ್ವಭಾವ,ಅವುಗಳನ್ನು ಏಚ್ಚರಿಸುವ ವಿಧಾನ,ಅತ್ತಲಿತ್ತ ಹೋಗದಂತೆ ಕಾಯುವ ರೀತಿ,ಬೆಟ್ಟದ ದಟ್ಟ ಅಭಯಾರಣ್ಯದಲ್ಲಿ ಗೋವುಗಳು ಮೆeಯುವಾಗ ಕ್ರೂರ ಪ್ರಾಣಿಗಳಿಂದ ರಕ್ಷಿಸುವ ಕೌಶಲ್ಯ,ವ್ಯೂಹ ರಚನೆ,ರಕ್ಷಣೆ ಎಲ್ಲವೂ ಅವರ ವಚನಗಳಲ್ಲಿವೆ. ಬಸವಣ್ಣ ಅವರ ಭಕ್ತಿ ಪಂಥಕ್ಕೆ ಸೇರಿದ,ರಾಮಣ್ಣ ಶಿವಶರಣರ ಗೋವುಗಳನ್ನು ಕಾಯುವುದೇ ಅವರ ಕಾಯಕವಾಗಿತ್ತು. ಪ್ರತಿನಿತ್ಯ ಭಗವನ್ನ ನಾಮಸ್ಮರಣೆಗಳೊಂದಿಗೆ ಶಿವಶರಣರ ಮನೆಗಳಿಗೆ ಹೋಗಿ “ಕಟ್ಟಿದ ಹಸು ಕೂಡಿದ ಹಸು,ಬಿಡಿರಿ ಎಂದು ಕೂಗುತ್ತಿದ್ದರು. ಹಸುವಿಗೆ ಹಾಗ,ಏತ್ತಿಂಗೆ ಹಣವಡ್ಡ,ಕರುವಿಗೆ ಮೂರು ಹಣ ಹೀಗೆ ಕೂಲಿಯನ್ನು ತಗೆದುಕೊಂಡು,ಊರಿನ ಶಿವಶರಣರ ದನಕಾಯುವ ಕೆಲಸದಲ್ಲಿಯೇ ಪಾವಿತ್ರ್ಯತೆ ಕಂಡು ಕೊಂಡು ಮುಕ್ತಿ ಹೊಂದಿದರು. ಶರಣ ಸತಿಯರು,ಬಿಟ್ಟದನಗಳನ್ನು, ದಿನವಿಡೀ ಶ್ರದ್ಧೆಯಿಂದ ಕಾಯ್ದು,ಸಂಜೆ ಅವರವರ ದೊಡ್ಡಿ ಗಳಿಗೆ ತಂದು ಕೊಡುತ್ತಿದ್ದರು.ಗೋವುಗಳ ಸ್ವಭಾವಕ್ಕೆ ತಕ್ಕಂತೆ – ಗಂಗೆ,ಗೌರಿ,ಕಾವೇರಿ,ತುಂಗೆ, ನಂದಿನಿ ಮೊದಲಾದ ಹೆಸರುಗಳಿಂದ,ಅಕ್ಕರೆ ಇಂದ ಕರೆಯುತ್ತ,ಮುದ್ದಾಡುತ್ತಾ, ಸಮಯಕ್ಕೆ ಸನ್ನೆ,ಗರ್ಜನೆ, ತಾಡನೆ ಮೂಲಕ ಕೈಯಲ್ಲಿನ,ಕೋಲಿನಿಂದ ನಿಯಂತ್ರಿಸಿ,ಅಗತ್ಯವಿದ್ದಾಗ ಪ್ರೀತಿ ಇಂದ ದಂಡಿಸಿ ಅವುಗಳೊಂದಿಗೆ ಕಾಯಕ ಜೊತೆಗೆ, ದಷೆಂದ್ರಿಯಗಳನ್ನು ಏಕಕಾಲಕ್ಕೆ ಕಾಯುತ್ತ ದಾರಿ ತೋರಿದ ಮಹಾನ್ ಸಂತ ತುರುಗಾಹಿ ರಾಮಣ್ಣ. ಸತ್ಯ ಶುದ್ಧ ಕಾಯಕ ದಾಸೋಹಗಳನ್ನು ನಡೆಸುತ್ತಲೇ ದೇವಭಾವವನ್ನು ಅಳವಡಿಸಿಕೊಂಡು,ಸಾಧಿಸಿದ ಮಹದಾಸೋಹಿಗಳು ರಾಮಣ್ಣರು. ಅವರ ಕಾಯಕದ ಮಹತ್ವ ಸಾರುವ ಈ ವಚನ —-

ಕ್ರೀ ಶುದ್ಧತೆಯಾದಲ್ಲಿ ಭಾವ ಶುದ್ಧವಾಗಿಪುದು.ಭಾವ ಶುದ್ಧ ವಾಗಿಪ್ಪಲ್ಲಿ ಸರ್ವೇoಧ್ರಿಯoಗಳು ಏಕೇಂದ್ರೀಯವಾಗೀ ಚೀತ್ತಶುದ್ಧ,ಸಿದ್ಧಿಯಾದಲ್ಲಿ ಸರ್ವ ಜ್ಞಾನ ಸಂಪನ್ನನಪ್ಪನು.ಆ ಗುಣ ನಿಜನೆಲೆಯಾದಲ್ಲಿ ಗೋಪಿನಾಥ ವಿಶ್ವೇಶ್ವರಲಿಂಗ ವಚಿಚ್ಚoತಿಪ್ಪನು..

ತುರುಗಾಹಿ ರಾಮಣ್ಣರು ಗೋವುಗಳನ್ನು ಕಾಯುತ್ತಲೇ ತಾವು ಪಡೆದ ದಿವ್ಯ ಅನುಭವಗಳನ್ನು ವಚನಗಳ ಮೂಲಕ ಹಂಚಿಕೊಂಡಿದ್ದಾರೆ.ಮಾಡುವ ಕಾರ್ಯಕ್ಕಿಂತಲೂ ಆ ಕಾರ್ಯ/ ಕಾಯಕದ ಹಿಂದಿನ ಘನ ಮನಕ್ಕೆ ಮಹತ್ವವಿದೆ,ಎಂದು ಶರಣರು ತೋರಿದ ದಾರಿಯಲ್ಲಿ ರಾಮಣ್ಣ ಮುನ್ನಡೆದರು. ನಾವು ಕೈಗೊಳ್ಳುವ ಕಾಯಕ ಪ್ರಾಮಾಣಿಕತೆಯಿಂದ ಕೂಡಿರಬೇಕು,ನಮ್ಮ ಆತ್ಮಸಾಕ್ಷಿ ಒಪ್ಪಿರಬೇಕು,ಮನಸಾಕ್ಷಿಇಂದ ಒಪ್ಪಿದ ಕೆಲಸ ದೇವರೂ ಮೆಚುತ್ತಾನೆ.ಭಾವ ಶುದ್ಧವಾದಾಗ ಸರ್ವೇಂದ್ರಿಯ ಗಳೂ ಚಂಚಲವಾಗದೆ ವಿಕೇಂದ್ರೀಯ ವಾಗುತ್ತವೆ. ಕಾಯಕದಿಂದ ಭಾವ ಶುದ್ಧಿ ಸರ್ವಂದ್ರಿಯಗಳು ನಿಯಂತ್ರಿಸಿ ಕೊಂಡ ಮೇಲೆ ನಿಗ್ರಹ ಸಾಧಿಸಲು ಮನುಷ್ಯನಿಗೆ ಸಾಧ್ಯ.ಚಿತ್ತ,ಶುದ್ಧ,ಸಿದ್ಧಿಯಾಗಿ ಸರ್ವಜ್ಞಾನ ಸಂಪನ್ನನ್ನಾಗಿ ತನ್ನ ದಾಗಿಸಿಕೊಂಡಾಗ ಶಿವ ಮೆಚ್ಚುವನು,ಎನ್ನುವರು ತುರುಗಾಹಿ ರಾಮಣ್ಣ. *ಕಾಯಕ* ಎಂಬ ಮಾತು,ಶರಣರು ಈ. ಪ್ರಪಂಚಕ್ಕೆ ಕೊಟ್ಟ ವಿಶಿಷ್ಟ ಕಾಣಿಕೆ, ಈ ಮಾತಿನಲ್ಲಿ ಅವರು ಕಂಡಿರುವ ಆದರ್ಶ ಮತ್ತು ಅರ್ಥ,ಇಡೀ ವಿಶ್ವವನ್ನೇ ಒಳಗೊಳ್ಳಬಲ್ಲಂತಹುದು. ಕಾಯಕ ಎಂಬ ಪದ ಕೇವಲ,ವೃತ್ತಿ/ ಉದ್ಯೋಗಕ್ಕೆ ಸೀಮಿತವಾದದ್ದಲ್ಲ .ತದೇಕ ಚಿತ್ತದಿಂದ,ತಲ್ಲೀನತೆ ಇಂದ ತನ್ನ ಸರ್ವಶಕ್ತಿಗಳನ್ನು,ಅನುಸಂಧಾನ ಮಾಡಿ ಸಮರ್ಪಣಾ ಮನೋಭಾವದಿಂದ ಮಾಡುವ ಕಾರ್ಯವೇ ಕಾಯಕ. *ಲಂಚ ವoಚನಕ್ಕೆ ಕೈಯಾನದ ಭಾಷೆ,ಬಟ್ಟೆಯಲ್ಲಿ ಹೊನ್ನು ,ವಸ್ತ್ರ ಬಿದ್ದಿದಡೆ..ಕೈಮುಟ್ಟಿ ಎತ್ತಿನಾದಡೆ,ಆಯ್ಯ ನಿಮ್ಮಾಣೆ,ನೀ ಭಿಕ್ಷೆ ಯೊಳಗಿಪ್ಪೇನಯ್ಯ..ಶಂಭೂಜಾಕ್ಕೇಶ್ವರ ದೇವಯ್ಯ! ನಿಮ್ಮಾಣೆ.*. ಎನ್ನುವ ಮೂಲಕ ಮೋಸ,ಲಂಚಗುಳಿತನ ಮುಂತಾದವು ನನಗೆ ಬೇಡ ಎಂಬ ದಿಟ್ಟ ವಚನವನ್ನು ನುಡಿದಿರುವದು ೧೩ ನೆ ಶತಮಾನದ ಶರಣರ ನುಡಿಗಳಿಂದ ಕಂಡು ಬರುತ್ತದೆ.ಶರಣೆ ಸತ್ಯಕ್ಕನ ಬದುಕು ಕಲ್ಪನೆಗೂ ನಿಲುಕಲಾರದು.ಬೇರೆಯವರ ಮನೆ ಬಾಗಿಲಿನ ಕಸ ಗುಡಿಸೂ ಕಾಯಕದಲ್ಲಿ ಜೀವನೋಪಾಯದ ಮಾರ್ಗ ಹುಡುಕಿಕೊಂಡಿ ರುವುದರ ಜೊತೆಗೆ ಶರಣರ ದಾಸೋಹಕ್ಕೆ ಕೂಲಿನಾಲಿ ಮಾಡಿ ಬಂದ ಹಣ ವಿನಿಯೋಗಿಸುತ್ತಿದ್ದ ಸಂಗತಿ ಬಲು ಮೌಲಿಕ.ವಚನ ಕಾರ್ತಿಯರ ಈ ವಚನ ಶ್ರೇಷ್ಟತೆಯ,ಚಿಂತನೆ ಅದರ ತಿರುಳನ್ನು ಕಂಡಾಗ ಅವರ ವಿಚಾರದ ಹೊಳಹು ಗೋಚರ ವಾಗುತ್ತದೆ.ಶರಣರ ಕಾಲದಲ್ಲಿಯೂ ಮೋಸ,ಲಂಚ,ಭ್ರಷ್ಟಾಚಾರ, ನಿರುದ್ಯೋಗ ಇದ್ದರೂ,ಇವೆಲ್ಲವೂ ಗಳನ್ನೂ,ಸರಿಸಿ.. ದಾಸೋಹದ ಮೂಲಕ ಕಾಯಕ ಸಿದ್ದಾಂತ ಎತ್ತಿ ಹಿಡಿದರು.ಏನಗಿಂತ ಕಿರಿಯರಿಲ್ಲ – ಶಿವಭಕ್ತರ ಗಿಂತ ಹಿರಿಯರಿಲ್ಲ ಎಂಬ ಆದರ್ಶ ಅಳವಡಿಸಿಕೊಂಡು ಬದುಕಿ ಶರಂತೇನಿಸಿಕೊಂಡರು. ನುಲಿಯ ಚಂದಯ್ಯ,ಮಡಿವಾಳ ಮಾಚಯ್ಯ,ಮೇದಾರ ಕೆತಯ್ಯ,ಹಡಪದ ಅಪ್ಪಣ್ಣ,ಅಂಬಿಗರ ಚೌಡಯ್ಯ,ತುರುಗಾಹಿ ರಾಮಣ್ಣ ಹೀಗೆ ಮುಂತಾದ ಶರಣರು,ಅವರ ಹೆಸರಿನ ಹಿಂದಿರುವ ಪದಗಳನ್ನೇ ಅವರು ಕೈಗೊಂಡ ಕಾಯಕವನ್ನು ಸೂಚಿಸುತ್ತವೆ. ಈ ರೀತಿ ಅನೇಕ ವೃತ್ತಿಗಳಲ್ಲಿದ್ದ ಶರಣರು,ಅನುಭವ ಮಂಟಪಕ್ಕೆ ಬಂದಾಗ,ಬಸವಣ್ಣ ಅವರೊಂದಿಗೆ ಸರಿಸಮವಾಗಿ ಕುಳಿತು ಆಧ್ಯಾತ್ಮಿಕ,ಚಿಂತನ – ಮಂಥನ, ಗಳಲ್ಲಿ ಭಾಗಿಯಾಗುತ್ತಿದ್ದರು.ಇಂದು ಸಂಪೂರ್ಣವಾಗಿ ಸಾಧ್ಯವಾಗದಂತಹ ಅಂಥ ಪರಿವರ್ತನೆ,ಬಸವಣ್ಣ ಆ ಕಾಲದಲ್ಲಿಯೇ ಸಾಧಿಸಿದ್ದರು. ಈಸಕ್ಕಿ ಆಸೆ ನಿಮಗೇಕೆ? ಈಶ್ವರ ನೊಪ್ಪ ಮರಯ್ಯಪ್ರೀಯ ಅಮರೇಶ್ವರ ಲಿಂಗಕ್ಕೆ ದೂರು.. ಈಸಕ್ಕಿ ಆಸೆಯನ್ನು ಆ ಶಿವನು ಮೆಚ್ಚಲ್ಲಾರ ಎಂಬ ಲಕ್ಕಮ್ಮನ ಮಾತು,ಅಂದಿನ ಕಾಯಕ ತತ್ವದ ಹಿಂದಿನ ಸದುದ್ದೇಶವನ್ನು ಮನಗಾಣಿ ಸುತ್ತದೆ.ತನಗೆ ಅಗತ್ಯವಾದು ದನ್ನ ಮಾತ್ರ ಪ್ರತಿಯೊಬ್ಬ ತಗೆದುಕೊಂಡರೆ ಲೋಕದಲಿ ಯಾರಿಗೂ ಯಾವ ಅವಶ್ಯಕತೆ ಗಳಿಗೆ ಕೊರತೆ ಬರುವದಿಲ್ಲ. ಮಹಾತ್ಮ ಗಾಂಧೀಜಿ ತಿಳಿಸುತ್ತಾರೆ..’ “Nature produces enough for our wants from day today and if everybody took enough for himself & nothing more..there would be no pauperism in this world,there would be no man dying of starvation”. ತಮಗೆ ಅಗತ್ಯ ವಿದ್ದಷ್ಟು ಮಾತ್ರ ಇಟ್ಟುಕೊಂಡು,ಉಳಿದಿದ್ದನ್ನು ನಿಸ್ವರ್ಥ ತತೆಯಿಂದ ಅಗತ್ಯವಿರುವ ಇನ್ನೊಬ್ಬರಿಗೆ ನೀಡಿದರೆ,ಸಾಮಾಜಿಕ ವ್ಯವಸ್ಥೆಯಲ್ಲಿ ಸಾಮರಸ್ಯ ಮೂಡಿ,ಲೋಕದಲ್ಲಿ ಯಾರು ಹಸಿವಿನಿಂದ ಪ್ರಾಣ ಬಿಡರು. ಕಾಯಕದ ಮೂಲಕ ಗಳಿಸಿದ ಒಂದು ಡಾಲರ್ ನ ಮೌಲ್ಯ ಪುಕ್ಕಟೆ ಸಿಕ್ಕ ೫ ಡಾಲರ್ ಗಿಂತ ಹೆಚ್ಚು ಇರುತ್ತದೆ ಎಂಬುದನ್ನು,ನನ್ನ ಮಗನಿಗೆ ಕಲಿಸಿರಿ ಎಂದು ಅಮೆರಿಕದ ಅಧ್ಯಕ್ಷರು ಆಗಿದ್ದ ಅಬ್ರಾಹಂ ಲಿಂಕನ್ ತಮ್ಮ ಪುತ್ರ ಕಲಿಯುತ್ತಿರುವ ಶಾಲಾ ಮುಖ್ಯಾಧ್ಯಾಪಕರಿಗೇ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಹೀಗೆ ಕಾಯಕ ನಮ್ಮ ನೈತಿಕ ಶಕ್ತಿ ಯನ್ನು ಹೆಚ್ಚಿಸುವುದು. ಇಂದಿನ ಕೈಗಾರಿಕ ಯುಗದ ಅನೇಕ ಸಾಮಾಜಿಕ ಕ್ಷೋಭೆಗಳಿಗೆ ದುರಾಸೆಯೇ ಕಾರಣವಾಗಿದ್ದು, ಕೆಲಸ ಮಾಡದೆ,ಸುಲಭವಾಗಿ ಹಣ ಮಾಡುವ ದುರ್ಮಾಗ ಗಳ ಹುಡುಕಾಟದಲ್ಲಿ ನಿರತರಾಗಿರುವವರ ಮಧ್ಯೆ,ಕಾಯಕದ ನಿಜ ಅರ್ಥದಲ್ಲಿ ಶ್ರಮದ ಬೆಲೆಯನ್ನು,ವಿಭೂತಿಯಾಗಿ ಪರಿಭಾವಿಸಿದ ಶರಣರ ಸಾಧನೆ ನಿಜಕ್ಕೂ ಅಸಾಮಾನ್ಯ ವಾದದ್ದೂ .ಕಾಯಕದಲ್ಲಿ ಮೇಲು,ಕೀಳು ಎಂಬುದಿಲ್ಲ.. ಮೇಲು – ಕೀಳು ಎಂಬುದು ಅವರು ನಿರ್ವಹಿಸುತ್ತಿರುವ ಮನೂಧರ್ಮದಲ್ಲಿದೆ.ಎಲ್ಲ ರೀತಿಯ ಉದ್ಯೋಗ ಗಳಿಂದ ಸಮಾಜ ಸ್ವಯಂಪೂರ್ಣ ವಾಗಬೇಕು.,ಸಮೃದ್ಧನಾಗಬೇಕು.ಬಡವ ಬಲ್ಲಿದ ನೆಂಬ ಭೇಧ ವಿಲ್ಲದೆ,ಸ್ತ್ರೀ – ಪುರುಷರೆಂಬ ತಾರತಮ್ಯ ವಿಲ್ಲದೇ,ಎಲ್ಲರೂ ಜೀವನದ ಗುರಿಯನ್ನು ತಮ್ಮದೇ ಮಾರ್ಗದಲ್ಲಿ ಸಾಧಿಸುವ ಸಮಾಜ ಸರ್ವಸಮಾನತೆ ಯನ್ನೂ ಮೇರೆಯುತ್ತಲೇ ಇಡೀ ವಿಶ್ವಕ್ಕೆ ಸಾರಿದರು,ಹಾಗೂ ಸಾಧಿಸಿ ತೋರಿಸಿದರು.

ಸಾಮಾನ್ಯರಲ್ಲಿ ಸಾಮಾನ್ಯರು ಆದ ತುರುಗಾಹಿ ರಾಮಣ್ಣ,ಊರಿನ ದಾನಕಾಯ್ದು,ಪರಿ ಶುದ್ಧ ಕಾರ್ಯ ನಡೆಸುತ್ತ,ಕಾಯಕದ ಲ್ಲೇ ಗುರು,ಲಿಂಗ,ಜಂಗಮ ಸೇವೆ ಮಾಡಿದವರು.ಸದ್ದು,ಗದ್ದಲ, ಆಡಂಬರ ವಿಲ್ಲದೆ ಆಧ್ಯಾತ್ಮಿಕ ಚಿಂತನೆ ನಡೆಸಿದವರು.ಹಾಗೂ ಆ ಮಾರ್ಗದಲ್ಲಿ ಸಾಗಿದ್ರು.ವೃತ್ತಿಯ ಬದ್ಧತೆ ಜೊತೆ ಜೊತೆಗೆ ತುಂಬಾ ಸಾಮಾಜಿಕ ಹಿನ್ನೆಲೆಯಲ್ಲಿ ತಿಳಿಸುತ್ತ,ಜನಸಾಮಾನ್ಯರಿಗೆ ಸಾಮಾಜಿಕ ಜವಾಬ್ದಾರಿ ಬಿತ್ತರಿಸುವ ಪ್ರಯತ್ನ, ಸಮಾಜಪಾರವಾದ ಆಲೋಚನೆಗಳನ್ನು ಹೇಳಿದರು. ಸರಳ,ನಿರಾಡಂಬರ ಜೀವನ, ಯವಅಪೆಕ್ಷೆಯೂ ಇಲ್ಲದೆ,ಶರಣರ ಮನೆ ದನಕಾಯ್ದು,ಬಲು ಸಾಮಾನ್ಯ ಬದುಕು ಸಾಗಿಸಿ ಆದ್ಯಾತ್ಮದ ಉನ್ನತಕ್ಕೆ ತಲುಪಿದ ಮಹಾ – ಶಿವಶರಣ.ಶುದ್ಧ ಕಾಯಕ ನಡೆಸುತ್ತಲೇ ವಚನಾನುಭವಿಗಳ ಸತ್ಸಂಗದಲ್ಲಿ ಶಿವಶರಣರ ದನಕಾಯ್ದು,ಪರಮಾತ್ಮನನ್ನು ಕಂಡವರು.ಹಲವು ಬಣ್ಣದ ಹಸುಗಳೊಂದಿಗೆ,ಹಸುವಾಗಿ, ಹಸನಾಗಿ ಬಾಳಿ,ಬದುಕಿ,ಭಕ್ತಿ ರಸದಲ್ಲಿ ಮಿಂದು,ಮಹತ್ತಿನಲ್ಲಿ ನಿಂದು,ಲಿಂಗದಲ್ಲಿ ಒಂದಾದ ಧೀಮಂತ ಕಾಯಕ ಜೀವಿ. ಪ್ರಶಾಂತವಾದ ಕಾಡಿನಲ್ಲಿ ಅರಳಿದ ಸುಗಂಧಿತ ಮಲ್ಲಿಗೆ ಮೌನವಾಗಿ,ಅರಳಿ,ತನ್ನ ಸೌರಭವನ್ನು ಎಲ್ಲೆಡೆ ಹರಡುವಂತೆ,ಎಲ್ಲಿಯೋ ಹುಟ್ಟಿ ಕಲ್ಯಾಣಕ್ಕೆ ಬಂದು,ಜಗಜ್ಯೋತಿ ಬಸೇಶ್ವರರ ಕೃಪೆಗೆ ಪಾತ್ರರಾಗಿ ತಮ್ಮನ್ನು ತಾವು ಕಂಡುಕೊಂಡ ಬಗೆ,ನಿಜಕ್ಕೂ ನಮ್ಮೆಲ್ಲರಿಗೂ ಮಾದರಿ. ಅವರ ಕಾಯಕ ನಿಷ್ಠೆ,ಬಸವ ನಿಷ್ಠೆ,ಜೀವನ ಪ್ರೀತಿ,ಅವರ ವಚನಗಳಲ್ಲಿ ಕಂಡು ಬರುವ ಉನ್ನತ ಆಧ್ಯಾತ್ಮದ ಬಿತ್ತರಗಳನ್ನು ಕಂಡಾಗ ವ್ವಿಸ್ಮಯ ಮೂಡುತ್ತದೆ. ಇಂಥ ಕಾಯಕ ಜೀವಿಗಳು ಮತ್ತೆ,ಮತ್ತೆ, ನೆನೆಯುವ ಅವರ ಆದರ್ಶಗಳ ಪಥದಲ್ಲಿ ಸಾಗುವ ಪ್ರಯತ್ನ ನಮ್ಮದಾಗಬೇಕಿದೆ.

.🙏 ಡಾ ಶಾರದಾಮಣಿ. ಏಸ್.ಹುನಶಾಳ

Don`t copy text!