ಊರುಗೋಲಾಗಿ ಬಂದ ಸತಿ

ಬದುಕು ಭಾರವಲ್ಲ ಸಂಚಿಕೆ 14

ಊರುಗೋಲಾಗಿ ಬಂದ ಸತಿ

ಮನೆಯಲ್ಲಿ ಮನೆ ಒಡೆಯ ಇದ್ದಾನೋ ಇಲ್ಲವೋ ಎನ್ನುವ ಹಾಗೆ
ಮನೆಯಲ್ಲಿ ಸತಿ ಇದ್ದಾಳೋ ಇಲ್ಲವೋ ಎನ್ನುವ ಮಾತು ಎಷ್ಟು ಸೂಕ್ತ ಎಂದು ನೀವು ಯೋಚನೆ ಮಾಡಿ ಮಾಡಿದಿರೆನೋ ಅನ್ಸುತ್ತೆ ನನಗೆ .
ಯಾವುದೇ ಒಂದು ಮನೆ ನಿಂತಿರುವುದೇ ಆ ಮನೆಯನ್ನು ಬೆಳಗುವ ಗೃಹಿಣೀಯ ಮೇಲೆ ಕತ್ತಲಾದ ಮನೆಗೆ ಬೆಳಕನ್ನು ನೀಡುವವಳು ಗೃಹಿಣಿ .ಕಣ್ಣು ಕಾಣದ ಕುರುಡನಿಗೆ ಊರು ಕೋಲಾಗಿ ನಿಂತಂತೆ ಸತಿ. ಆ ಮನೆಯ ಬೆಳಕಾಗಿ ನಿಲ್ಲುವಳು. ಪತಿಯ ಸರ್ವ ಕೆಲಸದಲ್ಲೂ ಭಾಗಿಯಾಗಿ ಪತಿಯ ಏಳಿಗೆಯನ್ನು ಬಯಸುವ ಆತನ ಕಷ್ಟ ಸುಖದಲ್ಲಿ ಭಾಗಿಯಾಗಿ ನಗುನಗುತ ಜೀವನ ಸಾಗಿಸಿದರೆ ಪತಿಗೆ ಬೇರೆ ಸ್ವರ್ಗವೇ ಬೇಕಾಗಿಲ್ಲ ತಾನೆ.
ಒಂದು ಮನೆಯನ್ನು ಬೆಳಗಲು ಬಂದ ಸತಿ ಗಂಡನಿಗೆ ನೆರಳಾಗಿ ನಿಲ್ಲಬೇಕು ನೆರಳು ಆಚೆ ಈಚೆ ಸರಿದರೂ ಅದನ್ನು ಸರಿದಾರಿಗೆ ತರುವವಳು ಸತಿಯೇ ಆಗಿರುತ್ತಾಳೆ.

ತಪ್ಪಾದ ಹಾದಿ ತುಳಿದ ಗಂಡನಿಗೆ ಸರಿದಾರಿಗೆ ಕರೆದುಕೊಂಡು ಬರುವುದು ಸತಿಯ ಆದ್ಯ ಕರ್ತವ್ಯ ಪತಿಯ ಆರೋಗ್ಯವನ್ನು ಗಮನಿಸಿ ಹೊತ್ತು ಹೊತ್ತಿಗೆ ಊಟ ನೀಡುತ್ತಾ ಇದ್ದ ಆದಾಯದಲ್ಲಿಯೇ ಚೊಕ್ಕದಾಗಿ, ನೆಮ್ಮದಿಯಿಂದ ಜೀವನ ನಡೆಸಿದರೆ ಪತಿಗೆ ಒಂದು ಶಕ್ತಿ ಬಂದಂತೆ .ಒಂದು ಬಲ ಬಂದಂತೆ . ಪತಿಯ ಸಂಬಳ ಸಾಲದಿದ್ದರೂ ಸಾಲ ಮಾಡಿ ತಂದು ಹಾಕಿ ಸಾಕುವಂತೆ ಮಾಡದೆ ಇರುವುದು ಮನೆಯನ್ನು ನಡೆಸುವ ಆ ಗೃಹಿಣಿಯ ಕೈಯಲ್ಲಿಯೇ ಇರುತ್ತದೆ. ಮಕ್ಕಳನ್ನು ಹೆತ್ತು ಹೊತ್ತು ಕೊಟ್ಟು ನಗುನಗುತ್ತ ಮಕ್ಕಳೊಂದಿಗೆ ಮಕ್ಕಳಾಗಿ ನಗುವ ಮನೆಯೋ ನಂದಗೋಕುಲವಾದಂತೆ ಯೇ ಸರಿ. ಸತಿಯಾದವಳು ಪದೇಪದೇ ತವರು ಮನೆಯನ್ನು ತವರುಮನೆಯ ಶ್ರೀಮಂತಿಕೆಯನ್ನು ಹೇಳದೆ ಶಾಂತಳಾಗಿ ಜೀವನ ನಡೆಸುವವಳಾಗಿರಬೇಕು.
ಸತಿಯು ಸಾವಧಾನದಿಂದ ತಾಳ್ಮೆಯಿಂದ ಹೊಂದಾಣಿಕೆಯಿಂದ ಜೀವನ ನಡೆಸುವವಳಾಗಿರಬೇಕು.
ಪತಿಯ ಅಂದ ಚಂದದ ಬಗ್ಗೆ ಟೀಕಿಸುವ ಗುಣ ಸತಿಗೆ ಇರಬಾರದು.
ಗಂಡನ ಮನೆ ತವರು ಮನೆ ಎರಡೂ ಸಂಬಂಧಿಕರನ್ನು ಸಮಾನವಾಗಿ ಕಾಣಬೇಕು.
ಒಳ್ಳೆಯ ನಡೆ ನುಡಿ ಸಂಸ್ಕೃತಿ ನೈತಿಕ ಮೌಲ್ಯಗಳನ್ನು ತನ್ನ ಜೀವನದಲ್ಲಿ ರೂಢಿಸಿಕೊಂಡಿರಬೇಕು .ಮತ್ತು ಅಳವಡಿಸಿಕೊಂಡಿರಬೇಕು.
ಚಾಡಿಕೋರರ ಮಾತನ್ನು ಕೇಳುತ್ತ ಕಾಲಹರಣ ಮಾಡುತ್ತ ಕೂಡಬಾರದು.
ಗುರು ಹಿರಿಯರನ್ನು ಗೌರವಿಸುವ ಗುಣ ಹೊಂದಿರಬೇಕು.
ತನ್ನ ಮನೆಯಲ್ಲಿ ತಾನೇ ಕಳುವು ಮಾಡಬಾರದು.
ಅಕ್ಕ ಪಕ್ಕದ ಜನರ ಜೊತೆಗೆ ಜಗಳ ಮಾಡದೇ ಹೊಂದಿಕೊಂಡಿರಬೇಕು.
ಮನೆಯಿಂದ ಹೊರಗೆ ಹೋಗುವಾಗ ಮನೆಯವರ ಮಾತನ್ನು ಕೇಳಬೇಕು ಮತ್ತು ಹೇಳಬೇಕು.
ಗಂಡನ ಬಗ್ಗೆ ಪದೇ ಪದೇ ತವರು ಮನೆಯವರಿಗೆ ಚಾಡಿ ಹೇಳಬಾರದು.
ತುಂಬಿದ ಗಂಡನ ಮನೆಯನ್ನು ಯಾವತ್ತೂ ಒಡೆಯಬಾರದು.
ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಜಗಳ ಆಗದಂತೆ ಎಚ್ಚರ ವಹಿಸಬೇಕು.
ಗಂಡನು ಹಾಗೂ ಗಂಡನ ಮನೆಯವರು ಅನವಶ್ಯಕವಾಗಿ ಕಿರುಕುಳ ನೀಡಬಾರದು. ಒಂದೊಂದು ಸಲ ಗಂಡನ ಮೇಲಿನ ಅತಿಯಾದ ಪ್ರೀತಿಯಿಂದ ಸತಿಯಾದವಳು ಕೋಪಿಸಿಕೊಂಡರೆ ಅದು ಕ್ಷಣಿಕವಾಗಿರಬೇಕು ಅದು ದೀರ್ಘ ಅವಧಿಯವರೆಗೆ ಸಿಟ್ಟು ಕೋಪ ಇಟ್ಟುಕೊಂಡಿರಬಾರದು .
ಗಂಡ ಹೆಂಡಿರ ಜಗಳ ಗಂಧ ತೀಡಿ ದಂಗ ಲಿಂಗಕ್ಕೆ ನೀರು ಎರೆದಂಗ ಎನ್ನುವ ಹಾಗೆ ಇರಬೇಕು .
ಗಂಡನ ತಪ್ಪು ಕಂಡು ಬಂದಾಗ ಮನೆಯ ಹಿರಿಯರಿಗೆ ಹೇಳಿ ಬಗೆಹರಿಸುವ ಪ್ರಯತ್ನ ಮಾಡಬೇಕು
ಹೊರಗಿನ ಆಹಾರ ವನ್ನು ತಿನ್ನುವುದನ್ನು ಕಡಿಮೆಮಾಡಬೇಕು.
ಗಂಡ ಮಕ್ಕಳೊಂದಿಗೆ ತಿಂಗಳಿಗೆ ಒಮ್ಮೆಯಾದರೂ ಹೊರಗಿನ ವಾತಾವರಣಕ್ಕೆ ಅಂದರೆ ಬಂಧು-ಬಳಗ ದವರ ಮನೆಗೋ ಇಲ್ಲವೇ ದೇವಸ್ಥಾನಕ್ಕೋ ಹೋಗಿ ಸುತ್ತಾಡಿ ಹೊರಗಿನ ಪರಿಸರ ಹೊರಗಿನ ವ್ಯವಹಾರದ ಅರಿವು ಮಕ್ಕಳಿಗೂ ಇರುವಂತೆ ಆಗಬೇಕು.
ಸಣ್ಣ ಪುಟ್ಟ ಆರೋಗ್ಯಕ್ಕೆಲ್ಲ ದೊಡ್ಡ ದೊಡ್ಡ ಆಸ್ಪತ್ರೆಗೆ ಹೋಗಿ ಖರ್ಚು ವೆಚ್ಚ ದ ಬಗ್ಗೆ ಸತಿಯಾದವಳು ಗಮನಿಸುತ್ತಿರಬೇಕು.
ಮನೆಯಲ್ಲಿ ಇರುವ ಗೃಹಿಣಿಯು ಮನೆಯಲ್ಲಿ ಕುಳಿತು ಮಾಡುವ ಕರಕುಶಲ ಕಲೆಯನ್ನು ಸಿಕ್ಕ ಸಮಯದಲ್ಲಿ ಉಪಯೋಗ ಮಾಡಿಕೊಳ್ಳುವ ಜಾಣ್ಮೆ ಹೊಂದಿರಬೇಕು.
ಪತಿಯಾದವನು ಸತಿಗೆ ಮೇಲಿಂದ ಮೇಲೆ ಸಂಶಯ ತಾಳುತ್ತ ಹೋದರೆ ಚೆನ್ನಾಗಿರುವ ಸಂಸಾರ ಒಡೆದು ಹೊಗದಂತೆ ನಿಗಾವಹಿಸಬೇಕು.
ಆರೋಗ್ಯಕ್ಕೆಲ್ಲ ಪ್ರಾಮಾಣಿಕವಾಗಿ ನಮ್ಮನ್ನು ನಾವೇ ಮೌಲ್ಯಮಾಪನ ಮಾಡಿಕೊಂಡು ಮುಂದಿನ ಹೆಜ್ಜೆಯನ್ನು ಇಡುವುದು . ಅಂದದ ಮಾತಿಗೆ ಚಂದದ ಅಲಂಕಾರಕ್ಕೆ ಮಾರುಹೋಗಿ ಎಷ್ಟೋ ಸಂಸಾರಗಳು ಒಡೆದು ಹೋಗಿವೆ. ಬಿರುಕು ಬಿಟ್ಟಿವೆ ಸುಂದರ ಸಂಸಾರಕ್ಕೆ ಕಲ್ಲು ಹಾಕಿ ನಗುವ ಜನರ ದೃಷ್ಟಿಗೆ ಯಾವತ್ತೂ ಕಾರಣವಾಗದಿರಲಿ ಗಂಡನ ಸುಖ ದುಃಖಗಳಲ್ಲಿ ಸಮಾನವಾಗಿ ಜೀವನ ಸಾಗಿಸುವೆ ಎಂದು ಹೇಳು ಹೆಜ್ಜೆಗಳ ಮೇಲೆ ಹೆಜ್ಜೆ ಇಟ್ಟು ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡ ಪ್ರತಿಯೊಬ್ಬ ಗೃಹಿಣಿಯು ಆಲೋಚಿಸಲೇ ಬೇಕಾಗುತ್ತದೆ ನಮ್ಮ ನಡೆ ನುಡಿಗಳು ಒಂದಾಗಿರಬೇಕು ನುಡಿದಂತೆ ನಡೆ ಇರಬೇಕು .ಅಲ್ಲವೇ ?
ಅಂದಾಗ ಪತಿಗೆ ಬದುಕು ಭಾರವಾಗಲಾರದು.

-ಡಾ ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು
ಕರ್ನಾಟಕ ಪಬ್ಲಿಕ್ ಸ್ಕೂಲ್

Don`t copy text!