ಬುದ್ಧ…
ಬದುಕಿನೆಳೆಗಳ
ನೇಯ್ವ ಜನನ
ಮರಣಗಳನರಿತು
ಬಂಧನವ ಕಿತ್ತೆಸೆದ ಬುದ್ಧ…
ಮೋಹ ವ್ಯಾಮೋಹಗಳ
ಜಾಲದಲಿ ಸಿಲುಕಿ
ಒದ್ದಾಡುವದನು
ಒದ್ದು ಹೋದ ಬುದ್ಧ…
ನೋವುಗಳ ಚಕ್ರದಲಿ
ತಿರುಗಿಸುವ ತಿರುಗಣಿಯ
ಸುಳಿಯಿಂದ ಎದ್ದು
ಹಾರಿ ಹೋದ ಬುದ್ಧ…
ಪ್ರೀತಿ ಕರುಣೆಗಳ
ಧರ್ಮ ಮಾರ್ಗವನು
ಲೋಕಕೆ ಬೋಧಿಸಿ
ಬದ್ಧ ಮಹಾತ್ಮನಾದ ಬುದ್ಧ…!
ರಚನೆ: ಹಮೀದಾ ಬೇಗಂ ದೇಸಾಯಿ. ಸಂಕೇಶ್ವರ.