ಚಂದಿರನೇರಿದ ಅಂಬರಕೆ

 

ಚಂದಿರನೇರಿದ ಅಂಬರಕೆ.

ಸುಂದರ ಚಂದಿರನು ಅಂಬರವನೇರುತ,
ಮಂದರ ಗಿರಿಯನು ಏರುತ ಏರುತ,
ಅಂದದ ಅಂದದ , ಬೆಳದಿಂಗಳ ಹರಹುತ,
ಕಂಪನು ಬೀರುತ, ತಂಪನು ಸೂಸುತ || 1 ||

ಅಂಬುಧಿ ತಣಿಯಿತು, ಚಂದಿರಗೆ ನಮಿಸುತ,
ತುಂಬಿ ತುಂಬಿ ಉಕ್ಕಿ, ಮೇಲಕೇ ಏರುತ,
ಸಂಭ್ರಮದಿ ತೆರೆಗಳ, ಏರಿಸಿ ಇಳಿಸುತ,
ಸುಂದರ ಸುಂದರ, ಸೊಬಗನು ತೋರುತ || 2 ||

ಚಂದಿರನು ಅಂಬರದಿ , ಓಡುತಿರುವನೇಕೆ,
ಬೆಂಬಿಡದ ಮೋಡಗಳಿಗೆ, ಅಂಜಿರುವನೇಕೆ,
ಉದಯಿಸಿ ಮೂಡಣದಿ, ಸಾಗುತ ಪಡುವಣಕೆ ,
ಇಳಿಯುತ ಜೀವನದ, ಪಥವ ತೋರುವನೇಕೆ || 3 ||

ಚಂದಿರನೇರಿದ ಅಂಬರಕೆ , ಚಂದಿರನೇರಿದ ಅಂಬರಕೆ.

-ಕೃಷ್ಣ ನಾರಾಯಣ ಬೀಡಕರ
ನಿವೃತ್ತಬ್ಯಾಂಕ ವ್ಯವಸ್ಥಾಪಕರು
ಕೆಎಚ್ ಬಿ ಕಾಲನಿ
ವಿಜಯಪುರ. -3
ದೂರವಾಣಿ 9972087473

Don`t copy text!