ಹೈಕುಗಳು
—————-
೧
ಸಖಿ ಪ್ರೀತಿಯು
ತಿಂಗಳಿನ ಬೆಳಕು
ಕೋಪ ಸುನಾಮಿ !!
೨
ಹರಿವ ನದಿ
ಯಾರಪ್ಪನಾಜ್ಞೆಯನು
ಕಾಯುವುದಿಲ್ಲ !!
೩
ಕೂಡಿಟ್ಟ ಹಣ
ಯಾರ ಪಾಲು ಗೊತ್ತಿಲ್ಲ
ಇಂದೇ ಬಳಸು !!
೪
ಸಂಸಾರ ಬಳ್ಳಿ
ಹೂವಾಗಲು ಒಲವು
ಒಂದೆಯೇ ಸಾಕು !!
೫
ವಯಸ್ಸು ಮಾಗಿ
ಕಾಮಸುಟ್ಟು ರಾಮನು
ಉದಯಿಸಲಿ !!
೬
ಏರಿದ ಪಟ
ಇಳಿಯಲೇ ಬೇಕಲ್ಲ
ಮಾನವ ನೀನು !!
೭
ಹಗಲಿರುಳು
ಸಖಿ ನಿನ್ನದೇ ಧ್ಯಾನ
ಮತ್ತೆಲ್ಲಿ ಯಾನ !!
೮
ಹೆದರದಿರು
ಮನವೆ,ದೇವರಿಹ
ದಾರಿ ತೋರುವ !!
೯
ಕಲ್ಲು ಮನವ
ಕರಗಿಸಬಹುದು
ಕರುಣೆಯಿಂದ !!
೧೦
ನಗುನಗುತ
ಬಾಳು ನೀ ಕಷ್ಟಗಳು
ಕಾಲಡಿಯಲಿ !!
– ಪ್ರೊ. ಸಿದ್ದು ಸಾವಳಸಂಗ,ತಾಜಪುರ
ಹಿರಿಯ ಕನ್ನಡ ಉಪನ್ಯಾಸಕರು
ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು
ವಿಜಯಪುರ – 586101
ಮೊಬೈಲ್ – 9611789355