ಅಭಿವಂದನೆ ನಿಮಗೆ…
ಜನಗಣ ಮನ ಅಧಿನಾಯಕ ಜಯಹೇ..
ನುಡಿದಾಗ ಮೈಮನ
ಪುಳಕಿತ ರೋಮಾಂಚನ…
ಹೆಮ್ಮೆಯ ನಮ್ಮ ಭಾರತ
ನೆಲ ಜಲಗಳಿಂದ ರಮಣೀಯ
ಸ್ವರ್ಗ ಸಮಾನ ಈ ದೇಶ
ಸಂಸ್ಕೃತಿ ಸಂಸ್ಕಾರ ಸಂಕೇತ..
ಅದ್ಭುತ ಪದ ಪುಂಜಗಳ
ಲಾಲಿತ್ಯದ ನವೋಲ್ಲಾಸ
ತುಂಬಿದರು ಕವಿ ರವೀಂದ್ರ
ಭಾರತಿಯ ಪ್ರಿಯ ಪುತ್ರ…
ಜನಿಸಿದರೂ ಬಂಗಾಲದಲ್ಲಿ
ವಿಶಾರದರು ವಿವಿಧ ಭಾಷೆಗಳಲ್ಲಿ
ಸಿರಿತನದ ಅಮಲೇರಲಿಲ್ಲ
ಸಜ್ಜನಿಕೆಯ ಸರಳತೆಯಲ್ಲಿ…
ಏಷ್ಯಾ ಖಂಡದ ಮೊದಲ ವಿಜೇತ
ನೋಬೆಲ್ ಪ್ರಶಸ್ತಿ ಪುರಸ್ಕೃತ
ಜ್ಞಾನದ ಮೂರ್ತಿಯೇ ರವೀಂದ್ರರು
ಶಾಂತಿನಿಕೇತನ ರೂವಾರಿಯು..
ವಂದನೆ ನಿಮಗೆ ಕವಿವರ್ಯರೇ
ಅಭಿವಂದನೆ ನಿಮಗೆ ಜನ್ಮ ದಿನದಂದೇ…
ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ