ಬದುಕು ಭಾರವಲ್ಲ 19
ಬದುಕಿಗೆ ಭಾರವಾಯಿತೇ ಅಂದ
ಒಂದು ಸತ್ಯ ಘಟನೆ ಸು 300 ವರ್ಷದ ಹಿಂದಿನ ಸತ್ಯ ಘಟನೆ
ನನ್ ಚಿಕ್ಕಪ್ಪ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಈಗ
ನಿವೃತ್ತಿ ಜೀವನವನ್ನು ಹುಬ್ಬಳ್ಳಿಯಲ್ಲಿ ನಡೆಸುತ್ತಿರುವ ನಮ್ಮ ಚಿಕ್ಕಪ್ಪ ಕಾರವಾರದಿಂದ
ನಮ್ಮ ಊರಿಗೆ ಬಂದು ಮರಳಿ ಹೋಗುವಾಗ ನನಗೆ 25 ಪೈಸೆ ಕೊಟ್ಟು ಹೋಗುತ್ತಿದ್ದರು.
ಬಹಳ ಕೆಲಸ ಹಚ್ಚ ಬೇಡ್ವಾ ಎಂದು ನನ್ನ ತಾಯಿಗೆ ಹೇಳುತ್ತಿದ್ದರು. ಸಾವಕ್ಕ ಬಹಳ ಕೆಲಸ ಮಾಡುತ್ತಾಳೆ ಎಂದು ನನ್ನ ಅಜ್ಜಿ ಪಕ್ಕೀರವ್ವನ ಸೀರೆಯನ್ನು ನಾನೇ ತೊಳೆಯುತ್ತಿದ್ದೆ ಪಾಪ ಅಜ್ಜಿ ಇವತ್ತು ಇಲ್ಲ.
ಆದರೆ ಅವಳ ಮಾತು ನನಗೆ ಮರೆಯದ ನೆನಪು.
ಸಾಲಿ ಎಷ್ಟು ಕಲಿತಿ ಮದುವೆ ಮಾಡ್ಕೋ ಎಂದು ಹೇಳಿದ್ದು ನೆನಪು. ಯಾಕಮ್ಮ ನನಗೆ ಪದೇ ಪದೇ ಮದುವೆಯ ವಿಷಯ ತೆಗೆಯುತ್ತಿ .
ಅಂದಾಗ ಚಿಕ್ಕಪ್ಪ ಹಾಗಲ್ವಾ ನಮ್ಮ ಮನೆತನದಲ್ಲಿ ಸುಮಾರು ಹಿಂದಿನ ಘಟನೆ ಅತ್ಯಂತ ಸುಂದರ ಕನ್ಯೆಹುಟ್ಟಿದ್ದಳಂತೆ ಯಾರೇ ಅವಳನ್ನು ನೋಡಿದರೆ ಸಾಕು
ಕಣ್ಣು ಕುಕ್ಕ ಬೇಕು ಅಂತ ಚಂದ ಇದ್ದಳು. ಆಮೇಲೆ ಏನಾಯ್ತು ಅಂದೆ. ಚಿಕ್ಕಪ್ಪ ಅಂದ್ರು ನಮ್ಮನೆ ಜೋಳದ ರಾಶಿ ರಾಶಿ ಹೊಲದಿಂದ ತಂದು ಹಗೆದಾಗ ಹಾಕುತ್ತಿದ್ದರು. ನಮ್ಮ ಮನೆಗೆ ಜೋಳ ತೆಗೆದುಕೊಂಡು ಹೋಗಲು ಅನೇಕ ರು ಬರುತ್ತಿದ್ದರು. ಆ ಹೆಣ್ಣು ಮಗಳ ಮೇಲೆ ಮಂದಿ ಕಣ್ಣ ಬಿದ್ರ ಅವಳನ್ನು ಕಾಣುವ ಉದ್ದೇಶ ಇಟ್ಟುಕೊಂಡು ಊರಿನ ಗೌಡರು ಬಂದರು ಅಂತೆ.ಎಷ್ಟರ ಚೆಂದ ಅದಾಳು ನೋಡೋಣ ಅಂತಾ ಮನೆಗೆ ಬಂದ ಬಿಟ್ರ ಅಂತ .ನಿಮ್ಮ ಮನಿ ಹೆಣ್ಣು ಮಗಳನ್ನು ನಾವು ಕರೆದುಕೊಂಡ ಹೋಗತ್ತೇವ ನಮ್ಮ ನಾಟಕ ಕಂಪನಿಯೊಳಗ ಸೇರಿದ ನಿಮ್ಮ ಮನೆತನಕ ಹೆಸರ ಬರತ್ತೈತಿ ಮತ್ತು ಈ ರಂಗಕಲೆ ಹಂಗ ಮುಂದುವರಿತ್ತೈತಿ ಕಳಿಸಿಕೊಡು ಅಂದಾಗ ತಲಿ ಮ್ಯಾಲ ಒಂದು ದೊಡ್ಡ ಕಲ್ಲು ಇಟ್ಟಂಗಾತಂತವಾ ನಮ್ಮ ಹೆಣ್ಣ ಮಗಳ ಮೇಲೆ ಕಣ್ಣ ದೃಷ್ಟಿ ಬಿದ್ದಾವ ಏನ್ ಮಾಡೋದು ಅಂತ ತಿಳಿದು ಮುತ್ತಾತ ಜೋಳದ ಹಗೆದಾಗ ಹಾಕಿ ಅವಳನ್ನು ಆಲ್ಲೇ ಮುಚ್ಬಿಬಿಟ್ಟಿದ್ದ .ಯಾರಿಗೂ ಕಾಣದಂತೆ ಮೇಲಕ್ಕೆ ಅವಳನ್ನು ಕರೆ ತರಲೇ ಇಲ್ಲ .ಮುತ್ತಾತ ಮತ್ತು ಮನೆಯವರೆಲ್ಲ ತಮ್ಮ ಕೆಲಸದಲ್ಲಿ ತೊಡಗುತ್ತಿದ್ದರು. ಅವಾಗ ಊರಲ್ಲಿ ಕರೆಂಟ್ ಬೇರೆ ಇದ್ದಿರಲಿಲ್ಲ .ಅವಳು ಕೂಗಿ ಕೂಗಿ ಅಲ್ಲೇ ಸತ್ತು ಹೋದಳಂತೆ
ಬಹಳ ಹಿಂದಿನ ಕಥೆವಾ ಇದು ನಮ್ಮನೆ ಹೆಣ್ಣು ಮಕ್ಕಳಿಗೆ ಕಷ್ಟ ಇದೆ ನೋಡುವಾ ಎಷ್ಟ ಕಲಿತು ಏನ್ ಮಾಡ್ತಿ ಮದುವೆ ಮಾಡ್ಕೊಂಡು ಚೆನ್ನಾಗಿ ಜೀವನ ಮಾಡು ಅಂತ.
ನನಗೆ ನಿಜಕ್ಕೂ ಅಚ್ಚರಿ ಅವಾಗಿನ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳನ್ನು ಯಾಕೆ ಹೊರಗಡೆ ಬಿಡುತ್ತಿರಲಿಲ್ಲ ಅಂತ. ಅದಕ್ಕೆ ಇರಬೇಕು ನಾವೆಲ್ಲ ಶಿಕ್ಷಣ ಕಲ್ತಿದ್ದರೂ ಇನ್ನೂ ಕೆಲವೊಂದು ಹಳ್ಳಿಗಳಲ್ಲಿ ಹೆಣ್ಮಕ್ಕಳು ಹೊರಗೆ ಬರದೇ ಇರುವುದನ್ನು ನಾನು ಕಂಡು ಕೇಳಿರುವೆ. ಅವಳು ಹೆಣ್ಣು ಮಗಳು ರಿ ನಾನು ಕಾಲೇಜಿಗೆ ಬಂದಿರುವೆ ಅವಳ ಸಹಿ ನಾನು ಮಾಡುವೆ ಎಂದರು. ಪೇರೆಂಟ್ಸ್ ಬಂದು. ಸಿಟ್ಟು ಬಂದು ನೀವೇ ಕಾಲೇಜಿಗೆ ಬಂದು ಕುಳಿತುಕೊಳ್ಳಿ. ಯಾವ ಕಾಲದಲ್ಲಿ ಇನ್ನೂ ಇದ್ದೀರಿ ಎಂದು .ನಿಮ್ಮ ಮಗಳದೇ ಸಹಿ ಬೇಕ್ರಿ ಹೋಗಿ ದಿನಾಲು ಕಾಲೇಜಿಗೆ ಬರಲು ಹೇಳಿ ತಪ್ಪಿಸಬೇಡ ಅಂತ. ಹೇಳಿ ಇಲ್ಲಾಂದ್ರೆ ಪರೀಕ್ಷೆಗೆ ಕೂಡಿಸಿ ಕೊಳ್ಳುವುದಿಲ್ಲ ಎಂದೆ .ಸ್ವಲ್ಪ ಯೋಚಿಸಿ ನೋಡಿದಾಗ ಇವತ್ತಿನ ಕಾಲ 12ನೇ ಶತಮಾನಕ್ಕೆ ನನ್ನನ್ನು ಕರೆದುಕೊಂಡು ಹೋಯಿತು. ಅಂಬಿಗರ ಚೌಡಯ್ಯ ಹೇಳಿದ ಒಂದು ವಚನ ನನಗೆ ನೆನಪಿಗೆ ಬರುತ್ತದೆ ನೋಡ್ರಿ.
ಅಂದಾದಿ ಬಿಂದುವಿನ ಹೊಂದಿದ ಹುಟ್ಟು
ಆ ಹುಟ್ಟನೆ ಹಿಡಿದು ಅಂದಚಂದದಲಿ
ತೊಳಲಾಡು ತಿದ್ದಿತು ಜಗವೆಲ್ಲ
ಅಂದಗೇಡಿಗಳೆಲ್ಲ ಬಂದೇರಿ ಹರಿಗೋಲ ಇದನೊಂದೇ ಹುಟ್ಟಿನಲ್ಲಿಳುಹುವೆನೆಂದನಂಬಿಗರಚೌಡಯ್ಯ
ನಿಜವಾದ ಸಾತ್ವಿಕತೆ ಸೌಂದರ್ಯವು ಹುಟ್ಟಿನಿಂದ ಬರುವುದಿಲ್ಲ ಅದು ಸಾಧನೆಯ ಸಿದ್ಧಿಯಿಂದ ಬರುತ್ತದೆ ಎಂದು ಎಚ್ಚರಿಸುತ್ತಾನೆ ಅಂಬಿಗರ ಚೌಡಯ್ಯ.
ಅಂದಗೆಟ್ಟವರೆಲ್ಲ ಬಂದೇರಿ ಹರಿಗೋಲು ಎಂದು ಕರೆಯುತ್ತಾನೆ. ಅವರನ್ನೆಲ್ಲ ತನ್ನಂತೆ ನಿಜಶರಣರಾಗಲು ಕರೆ ಕೊಡುತ್ತಾನೆ ಮತ್ತು ಸಹಾಯಕವಾಗುವಂತೆ ಜಾತಿ ಭ್ರಮೆಯೆಂಬ ಸಮುದ್ರದಾಟ ಬೇಕೆಂಬ ಭರವಸೆ ನೀಡುತ್ತಾನೆ. ಇನ್ನೊಂದು ಅರ್ಥದಲ್ಲಿ ಈ ಜನ್ಮದಲ್ಲಿ ಮೋಕ್ಷ ಸಾಧನೆಗೆ ಹುಟ್ಟು ಮಹತ್ವದ್ದಾಗಿದ್ದು, ದೈವಿಸಾಧನೆಯ ಮೂಲಕ ಮೋಕ್ಷ ಸಾಧಿಸಬಹುದೆಂದು ಘೋಷಿಸುತ್ತಾನೆ.
ಯಾವ ಒಂದು ದೇಶ ಹಿಂದೆ ಇದೆಯೋ ಅಲ್ಲಿನ ಮಹಿಳೆಯರಿಗೆ ಮೊದಲು ಶಿಕ್ಷಣ ಕೊಡಿ ಎಂದು ಹೇಳಿದ ಸ್ವಾಮಿವಿವೇಕಾನಂದರ ಮಾತು ನಿಜಕ್ಕೂ ಸತ್ಯ.
ಅದಕ್ಕೆ ಅಣ್ಣ ಬಸವಣ್ಣನವರು ನಾಲ್ಕು ಗೋಡೆಯ ಮಧ್ಯ ಇರುವ ಮಹಿಳೆಯರನ್ನು ಹೊರ ಬರುವಂತೆ ಮಾಡಿ ಎಲ್ಲರಿಗೂ ಸುಲಭವಾಗಿ ಅರ್ಥ ವಾಗುವ ಸರಳವಾದ ಈ ವಚನವನ್ನು ಹೊರಗೆ ತಂದು .ಮಹಿಳೆಯರು ಧ್ವನಿ ಎತ್ತಿ ಮಾತನಾಡುವಂತೆ ಮಾಡಿದ ಬಸವಾದಿ ಶಿವ ಶರಣರಣರಿಗೆ ಅನಂತ ಶರಣು ..
–ಡಾ ಸಾವಿತ್ರಿ ಮ ಕಮಲಾಪೂರ