ಅಕ್ಕಮಹಾದೇವಿಯರ ವಚನಗಳ ವಿಶ್ಲೇಷಣೆ

ಅಕ್ಕಮಹಾದೇವಿಯರ ವಚನಗಳ ವಿಶ್ಲೇಷಣೆ

ಅಕ್ಕ ಕೇಳವ್ವ ನಾನೊಂದು ಕನಸುಕಂಡೆ
ಅಕ್ಕಿ ಅಡಕೆ ಓಲೆ ತೆಂಗಿನಕಾಯಿ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ
ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು||

ಕನ್ನಡ ನಾಡು ಕಂಡ ಸೂಕ್ಷ್ ಸಂವೇದನೆಯ, ದಿಟ್ಟ ನಿಲುವಿನ, ಕನ್ನಡದ ಮೊಟ್ಟಮೊದಲ ಕವಿಯಿತ್ರಿ ಎಂಬ ಹೆಗ್ಗಳಿಕೆಯ ಶ್ರೇಷ್ಠ ಶಿವಶರಣೆ ಅನುಭಾವಿ ಅಕ್ಕಮಹಾದೇವಿಯ ವಚನ ಅತ್ಯಂತ ವೈಶಿಷ್ಟ ಪೂರ್ಣವಾದದ್ದು. ಭವಿತನವನ್ನು ತೊರೆದು ಭಕ್ತಳಾಗಿ ಸಾಗುವ ಸಾಧನೆಯ ಮಾರ್ಗ ನ ಭೂತೋ ನ ಭವಿಷ್ಯತಿ. ಅಕ್ಕನಿಗೆ ಅಕ್ಕನೇ ಸಾಟಿ. ಪರಂಪರಾ ಮುಖಿಯಾಗದೆ ಕೇವಲ ಹೆಣ್ಣಾಗಿ ತನ್ನ ಧೀಶಕ್ತಿಯನ್ನು ಪ್ರಚುರ ಪಡಿಸಿದವಳು. ತನ್ನ ಆತ್ಮೋನ್ನತಿಯ ಸಾಧನಾಪಥದಲ್ಲಿ ಪುರುಷಾಧಿಪತ್ಯದ ಪತಿಪರಸಂಸ್ಕೃತಿಯ ಎಲ್ಲವನ್ನೂ ಬಿಡುಗಡೆಗೊಳಿಸುತ್ತಾ ನಿರಾಕರಿಸುತ್ತ ನಡೆವ ಅಕ್ಕ ನಮಗೆ ವಿಶಿಷ್ಟಳಾಗುತ್ತಾಳೆ.

ಅಕ್ಕನ ಅನುಸಂಧಾನ ಅಂದಿಗೂ ಇಂದಿಗೂ ಎಂದೆದಿಗೂ ಪ್ರಸ್ತುತವೆನಿಸುವಂಥದ್ದು. ಹತ್ತರಲ್ಲಿ ಹನ್ನೊಂದಾಗದೆಇನ್ನೊಂಷಬದಾಗಿ ಬೆಳೆದುಬಂದ ಅಕ್ಕನ ಜೀವನ ಆದರ್ಶವೇ ಹೊರತು ಅನುಕರಣನೀಯವಲ್ಲ ಎಂಬ ಕವಿವಾಣಿ ಕೇಳಿಬಂದದ್ದು ಸಹಜ.

ಈ ವಚನ ಸತಿಪತಿಭಾವದ ಭಕ್ತಿಪ್ರೀತಿಗಳೆಂಬ ವಿಶಿಷ್ಟ ಭಾವೆನೆಗಳಿಂದ ಕೂಡಿ ಒಂದು ರೂಪಕ ಚಿತ್ರದಂತಿವೆ. ಶಿವನನ್ನು ಪತಿಯೆಂದು ತನ್ಮಯಳಾಗಿ ತನ್ನನ್ನು ತಾನು ತೊಡಗಿಸಿಕೊಂಡ ಪ್ರೀತಿಯ ಪ್ರತಿಕ್ರಿಯೆ, ತನ್ನ ಒಲುಮೆಗೆ ಒಳಗಾದ ಆತ್ಮಸ್ವರೂಪಿಯಾದ ಚೆನ್ನಮಲ್ಲಿಕಾರ್ಜುನನನ್ನು ಆತ್ಮಸಂಗಾತಿಯನ್ನಾಗಿ ಮಾಡಿಕೊಂಡ ಅಕ್ಕ “ನನ್ನ ಗಂಡ ಚೆನ್ನ ಮಲ್ಲಿಕಾರ್ಜುನ ದೇವರಲ್ಲದೆ ಮಿಕ್ಕಿದ ಗಂಡಸು ಮುಗಿಲ ಮರೆಯ ಬೂದಿ ಬೊಂಬೆಯಂತೆ.ಭಾವಿಸಿದಳು ಚೆನ್ನಮಲ್ಲಿಕಾರ್ಜುನನೊಬ್ಬನೇ ಏಕೈಕ ಪುರುಷ “ಇಹಕ್ಕೊಬ್ಬ ಪರಕ್ಕೊಪ್ಪ ಗಂಡನೇ? ಅಸಾಧ್ಯ. “ಚೆನ್ನಮಲ್ಲಿಕಾರ್ಜುನನೊಬ್ಬನೇ ಲಿಂಗಪತಿ, ಲೋಕದ ಗಂಡನ್ನೊಯ್ದು ಒಲೆಯೊಳಗಿಕ್ಕು” ಎಂಬ ದಿಟ್ಟ ನಿಲುವು. ವಿವಾಹದ ಆಯ್ಕೆ ಸ್ ಸ್ವಾತಂತ್ರö್ಯವನ್ನು ಕೈಗೆತ್ತಿಕೊಳ್ಳುವ ಮೂಲಕ ಸ್ತಿç ವಾದದ ನೆಲೆಯಲ್ಲಿ ಮಾದರಿಯಾಗುತ್ತಾಳೆ. ಪತಿಯನ್ನೇ ದೈವವಾಗಿ ಇರಿಸಿದ ಸಮಾಜದಲ್ಲಿ ದೇವರನ್ನೇ ಪತಿಯಾಗಿಸುವಕ್ಕನ ನಿಲುವು ಅತ್ಯಂತ ಭಿನ್ನ. ಅಲೌಕಿಕವನ್ನು ಲೌಕಿಕದಲ್ಲಿಟ್ಟು ಸತ್ಯ ಶೋಧಿಸುವ ಅಕ್ಕ ಕೇವಲ ಹೆಣ್ಣಾಗಿಸಿದಾಗ ಕಾಣುವ ಅನುಭವದ ವಿಸ್ತಾರತೆ ಆಳಗಳು ವಚನದಲ್ಲಿ ಪ್ರತಿಫಲಿಸುತ್ತವೆ.

ಅವಳು ಕಾಣುವ ಕನಸು ಲೌಕಿಕರಂತರಲ್ಲ, ಲೌಕಿಕ ಗಂಡರನ್ನು ಅಲ್ಲ. ಆಧ್ಯಾತ್ಮಿಕ ಅಲೌಕಿಕ ಪತಿಯನ್ನು ಬಯಸಿದ ಮನಸ್ಸಿನಲ್ಲಿ ಮೂಡಿದ್ದು ತನುಮನ ಭಾವಗಳನ್ನು ಶುದ್ಧಿಯಾಗಿಸಿದ, ಅರಿಷಡ್ವರ್ಗಗಳನ್ನು ನಿಗ್ರಹಿಸಿದ, ಅನುಭಾವದ ನೆಲೆಯಲ್ಲಿ “ಹರನೇ ತನಗೆ ಗಂಡನಾಗಬೇಕೆAದು ಹಲವು ಕಾಲ ತಪಿಸಿದ್ದ ನೋಡಾ” ಎಂಬ ನಿರ್ಧಾರ. ತನ್ನಲ್ಲಿ ಅನುಭವಗಳನ್ನು ಲೌಕಿಕ ನೆಲೆಯಲ್ಲಿಯೇ ಕಟ್ಟಿಕೊಡುತ್ತಾಳೆ. ಲೌಕಿಕ-ಅಲೌಕಿಕ ಅಂತರ ಅಲ್ಲಿ ಇಲ್ಲವಾಗುತ್ತದೆ. ಚೆನ್ನಮಲ್ಲಿಕಾರ್ಜುನನ ಜೊತೆಗಿನ ಸಂಬAಧ ಅನಾವರಣಗೊಳ್ಳುತ್ತಾ ಹೋಗುತ್ತದೆ. ತನ್ನ ಅನೇಕ ಖಾಸಗಿತನದ ಭಾವಗಳು ಅನುಭಾವಗಳಾಗಿ ಅನಾವರಣಗೊಳಿಸುತ್ತಾಳೆ. ಆ ಹಿನ್ನೆಲೆಯಲ್ಲಿ ಮಾಡಿದ ವಚನವಿದು. ಇಂತಹ ಏಕಾಂತದ ಖಾಸಗಿ ಎನಿಸುವ ಗಂಡು-ಹೆಣ್ಣಿನ ಅನುಭವದ ಮೂಲಕ ಶಿವ ಸಂಬAಧವನ್ನು ಬಿಚ್ಚಿಡುವ ರೀತಿಯನ್ನು ಆಶ್ಚರ್ಯ ಮತ್ತು ಚಕಿತಗೊಳಿಸುತ್ತದೆ.

ಅಕ್ಕನನ್ನು ಭಕ್ತೆಯಾಗಿಸುವ ಮೊದಲು ಕೇವಲ ಹೆಣ್ಣಾಗಿಸಿ ನೋಡಿದಾಗ ಕೇವಲ ಮನುಷ್ಯಳಾಗಿಸಿ ಗಂಡಾದ ಆಕೆಯ ಭಾವ-ರೂಪ-ಕನಸುಗಳು ಅರ್ಥವಾಗುತ್ತ ಹೋಗುತ್ತವೆ. ಅಕ್ಕ ತನ್ನ ಸುಂದರ ಸುಕೋಮಲ ಭಾವಗಳನ್ನು ವ್ಯಕ್ತಪಡಿಸುವ ರೀತಿ ಅತ್ಯಂತ ಸೊಗಸಾಗಿದೆ. ಸುಮಧುರ ಭಾವಗಳು ಇಲ್ಲಿ ಮುಪ್ಪುರಿಗೊಂಡ ಅನುಭವವಾಗುತ್ತವೆ. ತನ್ನ ಮನಸ್ಸಿನಲ್ಲಿ ತಿಂಬಿಕೊAಡದ್ದನ್ನು ಕನಸ್ಸಿನಲ್ಲಿ ಕಾಣುತ್ತಿದ್ದಾಳೆ, ಮನೋವಿಜ್ಞಾನ ಹೇಳುವಂತೆ ಒಬ್ಬ ಮನುಷ್ಯ ಒಂದು ದಿನಕ್ಕೆ ೩೦೦ ಕನಸು ಕಾಣಲಿಲ್ಲ. ಆದರೆ ಅಕ್ಕ ಕಂಡಿದ್ದು ಒಂದೇ ಒಂದು ಕನಸು; ನೂರಲ್ಲ, ಇನ್ನೊಂದು ಇಲ್ಲ. ಚೆನ್ನಮಲ್ಲಿಕಾರ್ಜುನ ಮೇಲಿನ ಅತಿಯಾದ ಸರ್ವಾರ್ಪಣವಾದ ಪ್ರೇಮವೇ ಭಕ್ತಿಯಾಗಿಸಿ ಅವಳನ್ನು ಅನುಭವಿಯಾಗಿಸಿದೆ. ಅವರಿಗಾಗಿ ಸದಾ ಹಂಬಲಿಸುವ ಭಕ್ತನಂತೆ-“ಅರಿಸಿನವನೆ ಮಿಂದು ಹೊಂದುಡಿಗೆಯನೆ ತೊಟ್ಟು” ಬಟ್ಟೆಗಳ ನೋಡಿ ಬಾಯಾರಿದವಳು”. ಆಕೆಯ ಗಂಡ ಎಲ್ಲರಂತಲ್ಲ. ಕನಸಿನಲ್ಲಿ ಅಕ್ಕಿ-ಅಡಿಕೆ-ಓಲೆ-ತೆಂಗಿನಕಾಯಿಗಳ ಸೌಭಾಗ್ಯ-ಮಂಗಳದ-ಚಿಹ್ನೆಗಳನ್ನು ಕಾಣುತ್ತಿದ್ದಾಳೆ. ಬಂದವನು “ಸುಲಿಪಲ್ಲ ಗೊರವ”. ಸುಂದರವಾದ ಹಲ್ಲುಗಳು ಸೌಂದರ್ಯದ ಸಂಕೇತ ನಗುಮೊಗದ ಸುಂದರ ಶಿವಸ್ವರೂಪಿ ಗೊರವನನ್ನು ಆ ಪರಶಿವನೇ ಭಿಕ್ಷÄಕನಾಗಿ ಬಂದಿದ್ದು ಚೋದ್ಯವಲ್ಲಮೊ. “ಸಾವಿಲ್ಲದ ಕೇಡಿಲ್ಲದ ಚೆಲುವನವನು. ಮನೆಯ ಬಾಗಿಲಿಗೆ ಬಂದಿದ್ದಾನೆ. ಹೊಳೆವ ಕಂಜೆಡೆಗಳ ಮಣಿಮುಕುಟದ ಒಪ್ಪುವ ಸುಲಿಪಲ್ಲ, ನಗನೊಂದ ಕಂಗಳ ಕಾಂತಿಯ ಈರೇಳು ಭುವನಮಂ ಬೆಳಗುವ ದಿವ್ಯ ಸ್ವರೂಪನ ಕಂಡು, ಗಂಡೆನ್ನ ಕಂಗಳ ಬರಹಿಂಗಿತ್ತು ಎನ್ನುತ್ತಾಳೆ ಗಂಡ ಗಂಡರನ್ನೆಲ್ಲ ಹೆಂಡಹೆAಡಿರಾಗಿ ಆಳುವ ಗರುವ ಕಂಡೆ ನಾನು. ಜಗದಾದಿ ಶಕ್ತಿಯೊಳು ಬೆರೆಸಿ ಒಡನಾಡುವ ಪರಮಗುರು ಚೆನ್ನಮಲ್ಲಿಕಾರ್ಜುನನ ನಿಲುವ ಕಂಡು ಬದುಕಿದವಳು ಎನ್ನುವ ವಚನ ಅವಳ ಸಹ ಅನುಭವದ ತೀವ್ರತೆಯನ್ನು ವ್ಯಕ್ತಪಡಿಸುವ ಸುಂದ ಭಾವಗೀತೆಯಂತೆ, ಸಾಹಿತ್ಯದ ಹೂವನ್ನು ಒಳಗೊಂಡಿದೆ

ಮದಸನೆಯ ಬಾಗಿಲಿಗೆ ಬಂದಿದ್ದಾನೆ ಶಿವರೂಪ ತಳೆದು ಬಂದಿದ್ದಾನೆ ಎನ್ನುವಲ್ಲಿ ಆತ್ಮಸ್ವರೂಪಿಯಾದವನನ್ನು ನಿರಾಕಾರಿಯಾದವನನ್ನು ಸಾಕಾರರೂಪದಲ್ಲಿ ಕಾಣುವಂಥ ಉನ್ನತಸ್ಥತಿ ಅಕ್ಕಳಿಗೆ ಮಾತ್ರ ಸಾಧ್ಯವಾಗುವಂಥದ್ದು. ನಿರಾಕಾರ-ನಿರ್ಗುಣ-ಪರಮಾತ್ಮನಾದ ಲಿಂಗದೇವರು ಪತಿಯಾಗಿಸಿ ಉಳಿದು ಶರಣ ಸತಿಗಳನ್ನಾಗಿಸಿದ ಅಕ್ಕನ ದಿವ್ಯಚೈತನ್ಯ ಲೌಕಿಕವಲ್ಲದ ಬೇರೊಂದು ಚೈತನ್ಯಶಕ್ತಿಯನ್ನು ಹಂಬಲಿಸುವ, ಪಡೆಯುವ, ಉಳಿದೆಲ್ಲವನ್ನು ನಿರಾಕರಿಸುವ, ಪ್ರತಿಭಟಿಸುವ ಅದಮ್ಯ ಶಕ್ತಿಯಾಗಿ ನಿಲ್ಲುತ್ತದೆ.

ಅಕ್ಕನನ್ನು ಅತಿಮಾನುಷ ನೆಲೆಯಲ್ಲಿ ಕಂಡರೆ ಅದು ಜೀವವಿರೋಧಿಯಾದಂತೆ. ಅವಳು ಒಲಿದ ಚೆಲುವ ಬಾಹ್ಯ ಸೌಂದರ್ಯವಲ್ಲ. ಚೆನ್ನಮಲ್ಲಿಕಾರ್ಜುನ ತನ್ನ ಸಂಬAಧವೆAದರೆ, ಹಾಲಿನಲ್ಲಿ ಅಡಕವಾಗಿರುವ ತುಪ್ಪದಂತೆ “ನೀನೆನ್ನೊಳಡಗಿಪ್ಪ ಪರಿಯ ಬೇರಿಲ್ಲದೆ ಕಂಡು ಕಣ್ದೆರೆದೆನು” ಎನ್ನುವೀ ಸಮಾಜ ಒಪ್ಪಿಕೊಂಡಿರುವ ‘ವಿವಾಹ’ವನ್ನು ಯಥಾವತ್ತಾಗಿ ಸ್ತಿçà ಸ್ಥಾಪಿತ ಮೌಲ್ಯವೆಂದು ಒಪ್ಪಿಕೊಳ್ಳದೆ ಸ್ತಿçà ಸಹಜವಾದ ಎಲ್ಲ ಗುಣಗಳನ್ನು ಲೌಕಿಕ ಗ್ರಹಿಕೆಗಳಿಗಿಂತ ವಿಶಿಷ್ಟ ನೆಲೆಯಲ್ಲಿ ಕಾಣುತ್ತಾಳೆ.

ವ್ಯವಸ್ಥೆಯ ವಿರುದ್ಧ ತನಗೊಲ್ಲದುದನ್ನು ನಿರಾಕರಿಸುವ ಸ್ವಾತಂತ್ರö್ಯವನ್ನು ಅನುಭವಿಸಿದ ಅಕ್ಕ, ಕನಸು ಕಾಣುವ ಸ್ವಾತಂತ್ರö್ಯ ಅಷ್ಟೇ ಅಲ್ಲ ಅದನ್ನು ನಿರ್ಭೆಡೆಯಿಂದ ಅಭಿವ್ಯಕ್ತಿಸುವ ಸ್ವಾತಂತ್ರö್ಯ ಪಡೆದುಕೊಳ್ಳುತ್ತಾಳೆ. ಚೆನ್ನಮಲ್ಲಿಕಾರ್ಜುನನ ಸ್ಮರಣೆ ಮಾತ್ರಕ್ಕೆ ತಲ್ಲಣಿಸುವ ಅವಳ ಹೃದಯ ಅವನು ಮೂರ್ತರೂಪದಲ್ಲಿ ಮನೆಯ ಬಾಗಿಲಿಗೆ ಬಂದಾಗ ಹೇಗಿರಬೇಡ? ಬಂದವನು ಮಿಕ್ಕುಮೀರಿ ಹೊರಟಿದ್ದಾನೆ, ಬಿಡದೆ ಬಂಬತ್ತಿದ್ದಾಳೆ. “ಚೆನ್ನಮಲ್ಲಿಕಾರ್ಜುನನೇ ಗಂಡನಾಗಿ ಹಲವುಕಾಲ ತಪಿಸಿದವಳು, ಅವನನ್ನು ಕಂಡಿಲ್ಲ ಅದಕ್ಕೆ ಕಾಣುವ ಕಾಯುವ ಹಂಬಲ ತೀವ್ರವಾಗಿದೆ. ಅದನ್ನು ಲೌಕಿಕ ನೆಲೆಯಲ್ಲಿ ಪರಿಭಾವಿಸದೆ, ಅನುಭಾವಿಕ ನೆಲೆಯಲ್ಲಿ ಗ್ರಹಿಸಿದಾಗ ಅಕ್ಕ ಲೌಕಿಕ-ಅಲೌಕಿಕವೆರಡರ ಸಮತೋಲನಗೊಳಿಸಬಲ್ಲ ಸ್ಥಿತಿಯೊಂದರ ಆಸೆಯಲ್ಲಿರುವುದು ಕಂಡುಬರುತ್ತದೆ. ಚೆನ್ನಮಲ್ಲಿಕಾರ್ಜುನನಿಗಾಗಿ ಹುಡುಕಾಟ, ಮೂರ್ತರೂಪದಲ್ಲಿ ಕಾಣಿಸಿಕೊಳ್ಳುವುದು ಕೂಡಾ ಒಂದು ಕನಸಿನ ಭ್ರಮೆಯಲ್ಲಿ ಲೋಕದ ಹಂಗನ್ನು ತೊರೆದ ಅಕ್ಕನ ಅನನ್ಯತೆ ಎದ್ದು ಕಾಣುವಂಥದ್ದು. ಆತ್ಮಸಂಗಾತಕ್ಕೆ ಅವನನ್ನು ಬೆಂಬತ್ತಿ ಕೈಹಿಡಿದಿದ್ದಾಳೆ, ಬಿಡಲಾರೆ ಎಂಬ ಅನನ್ಯ ಪ್ರೇಮಭಾವ, ವಚನದಲ್ಲಿ ಅವಳ ಅಂತರAಗದ ತುಮುಲ-ನಂಬಿಕೆಗಳನ್ನು ಪಾರದರ್ಶಕತೆಯಿಂದ ಕಾಣಿಸುತ್ತದೆ. ಧ್ಯಾನಾವಸ್ಥೆಯ ನಿರಂತರತೆಗೆ ಒಳಗಾದ ಮನಸ್ಸಿನ ಕಲ್ಪನೆಯ ಕನಸಲ್ಲೂ ಬಂದವನು ಶಿವನೇ ಭಿಕ್ಷÄಕನ ರೂಪದಲ್ಲಿ ಅವನ ಶಿಂಗಾರದ ಪರಿಯೇ ಬೇರೆ. ಅವಳ ನಂಬಿಕೆ ಗಟ್ಟಿಯಾಗುತ್ತಾ ಹೋದಹಾಗಿ ಅವನು ಕುರುಹುಗಳನ್ನು ಗಟ್ಟಿಗೊಳಿಸುತ್ತಾ ಹೋಗುತ್ತಾನೆ. ಸಾಕಾರರೂ ಪಧಾರಿಯಾಗಿ ಕಂಡಿದ್ದಾನೆ.

ಮನಸ್ಸಿನ ಶೋಧಕ್ಕೆ ಇಳಿತ ಆಧ್ಯಾತ್ಮ ಜೀವಿಗೆ ಮಾತ್ರ ಇಂಥ ಕನಸುಗಳು ಬೀಳಲು ಸಾಧ್ಯ. ಅವನೊಂದಿಗೆ ವಿವಾಹದ ಕನಸು, ಕೈ ಹಿಡಿದು ಸೇರಿದ ಐಕ್ತಯಸ್ಥಿತಿ. ಅಂತರAಗದ ಕಣ್ದೆರೆದಾಗ ಕಾಣುವ ಸೌಂದರ್ಯ “ಕೆಡಹಿಲ್ಲದ ಕುರುಹಿಲ್ಲದ ನೆಲೆಯಿಲ್ಲದ ಗೊರವನವನು ಸೀಮೆಯಿಲ್ಲದ ನಿಸ್ಸೀಮವನೂ ಇಲ್ಲದ ಪ್ರೇಮಭಿಕ್ಷÄ ಅವನು. “ಅರಿಯದೆ ನುಡಿಯಲಾಗದು; ಅರಿತಮೇಲೆ ನುಡಿಯಲಾಗದು” ಎಂಬ ಐಕ್ಯಸ್ಥಿತಿಯದು. ಅಂತಹ ತನ್ನ ಮನೋಭಾವವನ್ನು ಅಂತರAಗದ ಅನುಭೂತಿಯನ್ನು ಅಕ್ಕ-ಅವ್ವಾ ಎಂಬ ಮಮತೆಯು ಮನುಷ್ಯ ಸಂಬAಧಗಳಲ್ಲಿ ಮಾತ್ರ ಹಂಚಿಕೊಳ್ಳುವAಥದ್ದು. ಅಕ್ಕನ ಸಾಧನಾಪಥ ಪ್ರಾರಂಭಿಕ ಹಂತದ ಅಭಿವ್ಯಕ್ತಗೊಂಡ ವಚನವಿದು.

ಗಂಡನ ಒಲವಿನ ಹಂಬಲ ಲೌಕಿಕರಿಗೆ ಓರೆಗಲ್ಲಾದಂತೆ ಅಕ್ಕನಿಗೆ ಚೆನ್ನಮಲ್ಲಿಕಾರ್ಜುನನ ಕಾಣುವುದೇ ಓರೆಗಲ್ಲಾಗಿದೆ. ಲಿಂಗಮುಖದಿAದ, ಅರುಹಿನ ಮುಖದಿಂದ ದ್ವೆöÊತದಲ್ಲಿ ಅದ್ವೆöÊತಸ್ಥಿತಿಯ ಐಕ್ಯಸ್ಥಿತಿಯ ನಿಲುವನ್ನು ಬೆರೆತು ಬಯಲಾಗುವ ಸ್ಥಿತಿ. ಬೆಂಬತ್ತುವ ವೇಗದಲ್ಲಿ ಹೋದರೆ ಮಾತ್ರ ಶರಣ ಆ ಪರಮಾತ್ಮನನ್ನು ಅತ್ಯುನ್ನತ ಆತ್ಮಶಕ್ತಿಯನ್ನು ಅರಿಯಲು ಸಾಧ್ಯ. “ಎನ್ನ ತನುಮನ ಸೂರೆಗೊಂಡ, ಸುಖವನಪ್ಪುವ ಎನ್ನ ಇರವನಿಂಬುಗೊಳ್ಳುವ ಚೆನ್ನಮಲ್ಲಿಕಾರ್ಜುನನ ಒಲುಮೆಗೆ ಒಳಗಾದವಳು” ಎಂಬ ದೇವಮಿಲನದ ಐಕ್ಯಭಾವಯೋಗದಲ್ಲಿರುವ ಸಾಧಕನ ಭಾವಸ್ಥಿತಿಯನ್ನು ಈ ವಚನದಲ್ಲಿ ಕಾಣಬಹುದಾಗಿದೆ.

ಡಾ. ವೀಣಾ ಹೂಗಾರ,
ಮುಖ್ಯಸ್ಥರು, ಕನ್ನಡ ವಿಭಾಗ,
ಕೆ.ಎಲ್.ಇ. ಸಂಸ್ಥೆಯ,
ಶ್ರೀ ಮೃತ್ಯುಂಜಯ ಕಲಾ ಹಾಗೂ
ವಾಣಿಜ್ಯ ಮಹಾವಿದ್ಯಾಲಯ,
ಧಾರವಾಡ-೫೮೦೦೦೮

One thought on “ಅಕ್ಕಮಹಾದೇವಿಯರ ವಚನಗಳ ವಿಶ್ಲೇಷಣೆ

    • ಅಕ್ಕನ ವಚನ ವಿಮರ್ಶೆಯನ್ನು ಅತ್ಯುತ್ತಮವಾಗಿ ಮಾಡಿರುವಿರಿ.ಅಭಿನಂದನೆಗಳು💐🌹

Comments are closed.

Don`t copy text!