ಬದುಕು ಭಾರವಲ್ಲ ಸಂಚಿಕೆ 21
ಹೆಣ್ಣೆಂದು ಜರಿಯಬೇಡ ಓ ಮನವೇ….
ಆಕೆ ಹೆಣ್ಣು ಎಂದು ತಿಳಿದು ಈ ಸಮಾಜ ಅವಳನ್ನು ನೋಡುವ ದೃಷ್ಟಿಕೋನ ತಪ್ಪು .
ಹೆಣ್ಣು ಎಲ್ಲಾ ರಂಗದಲ್ಲಿಯೂ ಎಲ್ಲಾ ಕೆಲಸ ಕಾರ್ಯಗಳಲ್ಲೂ
ಹಲವಾರು ಸವಾಲುಗಳನ್ನು ಎದುರಿಸಿ ಸಾಧನೆ ಮಾಡಿ ತೋರಿಸಿದರೂ ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ. ಹೆಣ್ಣು ಒಂದು ಬೋಗದ ವಸ್ತು ಹೇಗಾದರೂ ಮಾಡಿ ವಲಿಸಿಕೊಳ್ಳಬೇಕು ಎನ್ನುವ ಕುತಂತ್ರ ಬುದ್ಧಿಯವರಲ್ಲಿ ದಿಟ್ಟೆಯಾಗಿ ಶಕ್ತಿಶಾಲಿಯಾಗಿ ಪ್ರೀತಿಯಿಂದ ಮಾತನಾಡಿದರೆ ಪ್ರೀತಿಯಿಂದಲೇ ಮಾತನಾಡುವಳು ತಿರುಗಿ ಎದುರಿಗೆ ನಿಂತರೆ ಆಕೆಯೂ ಎದುರುತ್ತರ ಕೊಡುವಳು.
ಅಕ್ಕಾ ಅಂದರೆ ತಮ್ಮ ಎನ್ನುವಳು ತಂಗಿ ಎಂದರೆ ಅಣ್ಣಾ ಎಂದು ಕರೆಯುವ ಹೆಣ್ಣನ್ನು ಗೌರವದಿಂದ ಕಾಣಬೇಕು ಎಂದು ನಮ್ಮ ಭಾರತದ ಸಂವಿಧಾನದ ನಾಲ್ಕನೇ ಅಧ್ಯಾಯದಲ್ಲಿ ಮೂಲಭೂತ ಕರ್ತವ್ಯದಲ್ಲಿ ಹೇಳಿದ್ದನ್ನು ಗಮನಿಸಲೇ ಬೇಕು.
ಹೆಣ್ಣು ಎಲ್ಲವನ್ನೂ ಸಹಿಸಿಕೊಳ್ಳುತ್ತಾಳೆ. ಆದರೆ ತನ್ನ ಸ್ವಾಭಿಮಾನಕ್ಕೆ ಏನಾದರೂ ಧಕ್ಕೆ ವದಗಿ ಬಂದರೆ ಕಂಡಿತ ತಿರುಗಿ ಬೀಳುತ್ತಾಳೆ.
ಅವಾಗ ಬಂತು ನೋಡಿ ಗಂಡಿಗೆ ಕೋಪ ಸಿಟ್ಟು ಅಹಂಕಾರ ಹೇಗಾದರೂ ಮಾಡಿ ಈ ಹೆಣ್ಣನ್ನು ನಾನು ಸೋಲಿಸಲೇ ಬೇಕು ಅನ್ನುವ ದಿಟ್ಟ ನಿರ್ಧಾರಕ್ಕೆ ಬಂದು ಅವಳಿಗೆ ಮಾನಸಿಕವಾಗಿ ಹಲವಾರು ರೀತಿಯಲ್ಲಿ ಚಿತ್ರಹಿಂಸೆಗಳನ್ನು ಕೊಡಲು ಪ್ರಾರಂಭಿಸುತ್ತಾನೆ .
ಉದ್ದೇಶ ಪೂರ್ವಕ ಕೆಲಸ ಕೊಟ್ಟು ಅವಳ ಕೆಲಸ ಕಾರ್ಯಕ್ಕೆ ಅಡ್ಡಿ ಪಡಿಸುವ ಗಂಡಿನ ಕುತಂತ್ರವನ್ನು ಅನುಭವಿಸಿದ ಆ ಹೆಣ್ಣಿಗನೇ ಗೊತ್ತು. ಆ ನೋವು ಆ ಸಂಕಟ ಆ ದುಃಖವೇನು ಎನ್ನುವುದು.
ಎಲ್ಲಾ ಪುರುಷರೂ ಕೆಟ್ಟವರು ಇರಲಾರರು. ಕೆಲವೊಬ್ಬರು ಗೌರವ ಭಾವನೆ ತಾಳಿ ಒಡ ಹುಟ್ಟಿದ ಅಕ್ಕ ತಂಗಿಯರಕ್ಕಿಂತಲೂ ಹೆಚ್ಚಿನ ಕಾಳಜಿಯನ್ನು ತೋರುವ ಅಣ್ಣಂದಿರೂ ಇನ್ನೂ ಈ ಸಮಾಜದಲ್ಲಿ ಈ ಜಗತ್ತಿನಲ್ಲಿ ಇದ್ದಾರೆ .
ಇನ್ನೂ ಕೆಲವರು ಇರುವರು ಎನಾದರೂ ಸಾಧನೆ ಮಾಡಿ .ನಿಮ್ಮಂಥಹ ಹೆಣ್ಣು ಮಕ್ಕಳನ್ನು ಹೊರ ತರಲು ಅನೇಕರು ಹೋರಾಡಿ ಹೆಣ್ಣುಮಕ್ಕಳಿಗೆ ಸ್ಥಾನ ಸಿಗುವಂತೆ ಮಾಡಿದ್ದಾರೆ ಎಂದು ಪ್ರೋತ್ಸಾಹ ನೀಡುವ ನಿಸ್ವಾರ್ಥ ಒಳ್ಳೆಯ ಮನಸ್ಸಿನ ಸ್ನೇಹಿತರೂ ಇನ್ನೂ ಈ ಸಮಾಜದಲ್ಲಿಯೇ ಇದ್ದಾರೆ.
ಇನ್ನೂ ಕೆಲವರು ಇರುವರು ಹೆಣ್ಣು ಗಂಡಿನ ಸರಿ ಸಮಾನವಾಗಿ ನಿಂತು ಮುನ್ನಡೆದಾಗ ಒಂದು ಹೆಜ್ಜೆಯನ್ನು ಮುಂದಕ್ಕೆ ಇಟ್ಟರೆ ಸಾಕು ಆ ಹೆಜ್ಜೆಯನ್ನು ಹಿಂದೆ ಹಾಕಿಸುವ ಕುತಂತ್ರ ಶುರು ಆಗಿ ಬಿಡುತ್ತದೆ. ಅವಳಿಟ್ಟ ಹೆಜ್ಜೆಗೆ ಅನೇಕ ರೀತಿಯ ಸವಾಲುಗಳನ್ನು ಎದುರಿಸಿ ಗೆಲುವು ಸಾಧಿಸುವ ಛಲವನ್ನು ಆ ಹೆಣ್ಣು ಹೊಂದುತ್ತಾಳೆ.
ಉದ್ಯೋಗಸ್ಥ ಮಹಿಳೆಯರು ಪುರುಷರ ಜೊತೆಗೂಡಿ ಕೆಲಸ ಮಾಡುವುದು ಒಂದು ದೊಡ್ಡ ಸವಾಲೇ ಸರಿ .
ತನ್ನೆಲ್ಲ ನೋವುಗಳನ್ನು ಬದಿಗೆ ಸರಿಸಿ ಕರ್ತವ್ಯವೇ ದೇವರೆಂದು ತಿಳಿದು ಸಾಧನೆ ಮಾಡುವ ಆ ಸ್ತ್ರೀಯರಿಗೆ ಅದೆಷ್ಟು ನೋವು .
ಒಡಲೊಳಗಿನ ಕಿಚ್ಚವನ್ನು ಹೊರಗೆ ಹಾಕಿದಾಗಲೇ ಗೊತ್ತು ಇದು ಉಸುರುವಳ್ಳಿ ಎಂದು .ಸಂದರ್ಭಕ್ಕೆ ಬಣ್ಣ ಬದಲಾಯಿಸುವ ಮೊಗವಾಡ ಧರಿಸಿದ ಪಾಪಿ ಎಂದು .
ಹೀಗೆ ಅಲ್ಲವೇ ಕಿತ್ತೂರಿನ ಚೆನ್ನಮ್ಮನನ್ನು ಬೆಳವಡಿ ಮಲ್ಲಮ್ಮಳಿಗೆ ಬೆನ್ನಿಗೆ ಚೂರಿ ಹಾಕಿದ್ದು .
ಅದೆಷ್ಟು ಹೆಣ್ಣು ಮಕ್ಕಳು ತಮ್ಮ ಬೆನ್ನಿಗೆ ಚುಚ್ಚಿಕೊಂಡು ಆ ನೋವನ್ನು ಎದುರಿಸಿಲ್ಲ. ಆ ಗಾಯ ಆರಲಾರದು ಆ ನೋವು ಮರೆಯಲಾರದು.
ಹೀಗೆ ಒಂದು ಕಾಲೇಜಿನಲ್ಲಿ ಒಬ್ಬಳೇ ಪುರುಷರ ಮದ್ಯ ಒಂಟಿಯಾಗಿ ದಿಟ್ಟವಾಗಿ ದ್ವನಿ ಎತ್ತಿ ಕೆಲಸ ಮಾಡಿದ ಆ ಉಪನ್ಯಾಸಕಿಯ ಸಮಸ್ಯೆಯನ್ನು ಕೇಳುವ ಹೇಳುವ ಮನಸ್ಸಿಲ್ಲದವರ ಮುಂದೆ ತನ್ನ ನೋವನ್ನು ತನ್ನಲ್ಲೇ ಅದುಮಿಕೊಳ್ಳುತ್ತ ಕ್ಲಾಸಿನ ಒಳಗೆ ಹೋಗುವ ಮುನ್ನ ಮನೆಗೆ ಹೋಗಲೇ ಬೇಕಾದ ಅನಿವಾರ್ಯ ಆ ಉಪನ್ಯಾಸಕಿಗೆ ಒದಗಿ ಬರುತ್ತದೆ . ಮಹಿಳೆಯರ ಸಮಸ್ಯೆಗಳು ಮಹಿಳೆಯರಿಗೆ ಗೊತ್ತು. ಪುರುಷರಿಗೆ ಏನು ಗೊತ್ತು .ಗೊತ್ತಿದ್ದರೂ ಕೂಡ ಹೇಳಿದರೂ ಕಳುಹಿಸಲಿಲ್ಲ. ಕೊನೆಗೆ ಹಾಗೇ ಪ್ರಥಮ ಪಿಯುಸಿ ಕ್ಲಾಸಿಗೆ ಹೋಗುತ್ತಾಳೆ 2014 ನವೆಂಬರ 14 ಮಕ್ಕಳ ದಿನಾಚರಣೆ ಬೇರೆ ಕನ್ನಡ ಉಪನ್ಯಾಸಕಿಯರು ನಿಲ್ಲಲೇ ಬೇಕು ಕಾರ್ಯಕ್ರಮದಲ್ಲಿ ಮಾತನಾಡಲೇಬೇಕು . ಮಧ್ಯಾಹ್ನ ಕಾರ್ಯಕ್ರಮ ಮುಂಜಾನೆ 11 ಗಂಟೆಗೆ ಕ್ಲಾಸಿನ ಒಳಗೆ ಹೋಗಿ ಪಾಠ ಮಾಡಲು ಪ್ರಾರಂಭಿಸಿದಾಗ ಹೊಟ್ಟೆನೋವು ಬಂದು ಹೊಟ್ಟೆಯಲ್ಲಿರುವ 2 ತಿಂಗಳ ಬೃಣ ಭೂ ಸ್ಪರ್ಶ ಆಗುತ್ತದೆ. ಕಂಬನಿಯ ನೋವನ್ನು ಒತ್ತಿ ಹಿಡಿದು ಹಾಗೇ ದೈರ್ಯದಿಂದ ಪಾಠ ಮುಗಿಸಿ ಹೊರಗೆ ಬಂದು ತನ್ನ ಗಂಡನಿಗೆ ಆದ ಘಟನೆಯನ್ನು ಹೇಳಿ ಕಾರ್ಯಕ್ರಮ ಮುಗಿಸಿ ಮನೆಗೆ ಬೈಕ್ ನ್ನು ಓಡಿಸಲು ಆಗುತ್ತಿಲ್ಲ. ಕಾಲೇಜಿನಿಂದ ಮನೆ 10ಕಿಮಿ ಇನ್ನೊಂದು ತನ್ನ ಮಗುವಿನ ಪರೀಕ್ಷೆಯು ಅವತ್ತೇ ಬೇಗ ಮುಗಿದ ಕಾರಣ ಶಾಲೆಯ ವಾಹನ ಕಾಲೇಜಿನ ಹತ್ತಿರ ಇಳಿಸಿ ಹೋಗಿತ್ತು . ಆ ಮಗುವನ್ನು ಮುಂದೆ ಕೂಡಿಸಿಕೊಂಡು ಬೈಕ್ ನ್ನು ಹೇಗೂ ಓಡಿಸಿಕೊಂಡು ಮನೆ ಸೇರಿದ ಆ ದಿಟ್ಟ ನಾರಿ ಇದೇ ಸಾವಿತ್ರಿ .
ಮೊನ್ನೆಯ ದಿನ ಚುನಾವಣೆ ಕೆಲಸ ದ ಮೇಲೆ ಅಧ್ಯಕ್ಷಾಧಿಕಾರಿಯಾಗಿ ಹೋದಾಗ ಪುರುಷ ಮಹಾಶಯರಿಗೆ ಥಳಮಳ ಅಯ್ಯೋ ನಮಗೆ ಮೆಡಂ ಅವರು ಬಂದಿದ್ದಾರೆ ಹೇಗೆ ಕೆಲಸ ಮಾಡುವರೋ ಡಿ ಮಸ್ಟರಿಂಗ್ ಹೇಗೋ ನನಗೆ ಚೆಂಚಮಾಡಿ ಮೆಡಂ .ನನಗೆ ಬೇರೆ ಬೂತ ಕೊಡಿ. ಅಂದರು ನನ್ನ ಮುಂದೆಯೇ ಹೇಳಿದಾಗ ನನಗನಿಸಿತು
ವಿದ್ಯಾವಂತ ಶಿಕ್ಷಕರಲ್ಲಿಯೇ ಈ ರೀತಿಯ ಗಂಡು ಹೆಣ್ಣು ಎಂಬುವ ಭೇದ ಭಾವ ಇರುವಾಗ ಕಲಿಯದವರು ಯಾವ ಭಾವನೆ ತಾಳುವರೋ ಎನ್ನುವುದು.
ನನ್ನನ್ನು ಹೆಣ್ಣು ಇವರು ಹೇಗೇ? ಕೆಲಸ ಕಾರ್ಯ ಮಾಡುವರೋ ?ನೋಡೋಣ ಎಂದು ಅಲ್ಲಿರುವ ಪಕ್ಷದ ಎಜೆಂಟರಿಗೆ ಹೇಳಿದರಂತೆ ಆ ಮೆಡಂಗೆ ಸರಿಯಾಗಿ ಕೇಳಿ ನೋಡಿ ಟ್ರೇನಿಂಗ್ ತೆಗೆದುಕೊಂಡಿದ್ದಾರೋ ಇಲ್ಲವೋ ? ಎಂದು .ಅವರು ಕೇಳಿಯೇ ಬಿಟ್ಟರು ನೀವೂ ಸರಿಯಾಗಿ ಟ್ರೈನಿಂಗ್ ತೆಗೆದುಕೊಂಡು ಬಂದಿರೋ ಇಲ್ಲವೋ ? ಎಂದು .ಇಂಥಹ ಪರಿಸ್ಥಿತಿಯಲ್ಲಿ ನನಗೆ ಹೇಗೆ ಆಗಬಾರದು .ಹೆಣ್ಣು ಅಂತಾ ಅಷ್ಟೇ ಇವರು ನನ್ನನ್ನು ನೋಡಿದರಾ ? ಎಂದು .ಇದು ನನಗಷ್ಟೇ ಅಲ್ಲ ಬೇರೆ ಹೆಣ್ಣು ಮಕ್ಕಳಿಗೂ ಹೀಗೆ ಆದದ್ದು ಕಣ್ಣಾರೆ ಕಂಡು ಕಿವಿಯಾರೆ ಕೇಳಿದ್ದುಂಟು .ಹೆಣ್ಣು ಹೆಣ್ಣು ಜರಿಯದೇ ಅವಳು ಮಾಡವ ಕೆಲಸ ಕಾರ್ಯ ನೋಡಿ ಗುರುತಿಸುವುದಾಗಬೇಕು.
ಅಂದವರು ಮೊದಲು ತಮ್ಮ ಕಾರ್ಯವನ್ನು ತಾವೇಷ್ಟು ಸರಿಯಾಗಿ ಮಾಡಿಕೊಂಡು ಹೋಗುತ್ತೇವೆ ಎನ್ನುವ ಅರಿವು ಇರಬೇಕಾಗುತ್ತದೆ .ತಮ್ಮ ಕೆಲಸ ಕಾರ್ಯ ದ ಬಗ್ಗೆ ಅರಿವು ಇದ್ದವರು ಯಾರೂ ಹೆಣ್ಣಿನ ಕೆಲಸ ಕಾರ್ಯ ದ ಬಗ್ಗೆ ಮಾತನಾಡುವುದಿಲ್ಲ.
ನನಗೆ ಹಾಗೇ ಅಂದ್ರು ಹೀಗೆ ಅಂದ್ರು ಎಂದು ಅದೇ ಯೋಚನೆಯಲ್ಲಿ ನಾವು ಕುಳಿತುಕೊಂಡು ಕೆಲಸಕ್ಕೆ ಹಿನ್ನಡೆ ಆಗದೇ ಕೊಟ್ಟ ಕೆಲಸವನ್ನು ಮಾಡಿ ಮುಗಿಸುವ ಪ್ರತಿಯೊಬ್ಬರಿಗೂ ಇರಬೇಕು ಕೆಲಸ ಭಾರವಾಗಿ ಬದುಕು ಬೇಸರ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ.
ನಾನು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಎಲ್ಲರಿಗಿಂತ ಬೇಗ ಮಾಡಿ ಮುಗಿಸಿದಾಗ ಹೆಣ್ಣು ಎಂದು ಜರಿದು ಮಾತನಾಡಿದ ಬಾಯಿಯೇ ಶಭಾಷ್ ಎನ್ನುವ ಹಾಗೆ ಆಯಿತು . ಮೆಡಂ ನಾನು ಸುಮಾರು ವರ್ಷ ಚುನಾವಣೆ ಮಾಡಿದೆ ಆದರೆ ಇಷ್ಟು ಚೆನ್ನಾಗಿ ಕೆಲಸ ಕಾರ್ಯ ಮಾಡಿದ್ದು ನಿಜಕ್ಕೂ ಮೆಡಂ .
ಅಂದಾಗ ನನಗೆ ಅನಿಸಿತು.
ಹೆಣ್ಣನ್ನು ಕೇವಲ ಹೆಣ್ಣಾಗಿ ಕಾಣಬೇಡಿ ಅವಳ ಕಾರ್ಯದಿಂದ ಗುರುತಿಸುವ ಕಾರ್ಯ ಆಗಬೇಕು ಅಂತಾ .
ಜಗತ್ತಿನಲ್ಲಿ ಎಲ್ಲ ರೀತಿಯ ಜನರು ಇರುವರು .ನಮ್ಮ ಜೀವನದಲ್ಲಿ ಒಳ್ಳೇಯವರ ಹಾಗೂ ಕೆಟ್ಟವರ ದರುಶನ ಆಗುವುದು ಆ ಭಗವಂತ ನ ಲೀಲೇ ಅಲ್ಲವೇ ?
ಒಳ್ಳೆಯ ಮನಸ್ಸಿನಿಂದ ಕೆಲಸ ಕಾರ್ಯ ಮಾಡುವವರನ್ನು ಒಳ್ಳೆಯ ಮನಸ್ಸು ಗುರುತಿಸಿಯೇ ಗುರುತಿಸುವುದು ಎನ್ನುವ ಆಶಾ ಭಾವನೆಯಿಂದ ಇವತ್ತಿನ ಮಹಿಳೆಯರು ಹೆಜ್ಜೆ ಹಾಕಬೇಕಾಗಿದೆ .
-ಡಾ ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು